ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಪೋ ದರದಲ್ಲಿ ಬದಲಾವಣೆ ಇಲ್ಲ, ಶೇಕಡಾ 4ರಷ್ಟು ಮುಂದುವರಿಕೆ : ಆರ್‌ಬಿಐ

|
Google Oneindia Kannada News

ನವದೆಹಲಿ, ಫೆಬ್ರವರಿ 05: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಫೆಬ್ರವರಿ 5 ರಂದು ಬೆಳಿಗ್ಗೆ 10 ಗಂಟೆಗೆ ಮಾಸಿಕ ವಿತ್ತೀಯ ನೀತಿ ಪ್ರಕಟಣೆ ಮಾಡಿದ್ದಾರೆ. ಪ್ರಮುಖವಾಗಿ ನಿರೀಕ್ಷಿಸಿದಂತೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಆರ್‌ಬಿಐ ರೆಪೋ ದರವನ್ನು 4% ರಷ್ಟು ಮುಂದುವರಿಸಲು ನಿರ್ಧರಿಸಿದ್ದು, ರಿವರ್ಸ್ ರೆಪೋ ದರವನ್ನು 3.35% ಉಳಿಸಿಕೊಳ್ಳಲಾಗಿದೆ. ದೇಶದಲ್ಲಿ ಹಣದುಬ್ಬರವು ಒಂದು ಕಳವಳವಾಗಿ ಉಳಿದಿದೆ ಎಂದು ಆರ್‌ಬಿಐ ಹೇಳಿದೆ. ಇದು ಇನ್ನೂ ಉದ್ದೇಶಿತ 4% ಮಟ್ಟಕ್ಕಿಂತಲೂ ಹೆಚ್ಚಾಗಿದೆ, ಇದು ಕಳೆದ ಕೆಲವು ವಿತ್ತೀಯ ನೀತಿಗಳಿಗೆ ಆರ್‌ಬಿಐ ಬಡ್ಡಿದರಗಳನ್ನು ಸ್ಥಿರವಾಗಿರಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ.

ಕೇಂದ್ರ ಬಜೆಟ್‌ನಲ್ಲೂ ಕೂಡ ವಿಸ್ತಾರವಾದ ಮತ್ತು ಹಣಕಾಸಿನ ಕೊರತೆಯ ಗುರಿಗಳು ನಿರೀಕ್ಷೆಗಿಂತ ಹೆಚ್ಚಿರುವ ಬಗ್ಗೆ ಚಿಂತಿತರಾಗಿರಬಹುದು. ನೀತಿ ದರಗಳನ್ನು ನಿರ್ಧರಿಸಲು ಕಡ್ಡಾಯವಾಗಿರುವ ಹಣಕಾಸು ನೀತಿ ಸಮಿತಿಯು ಈಗ ತನ್ನ ಕೊನೆಯ ನಾಲ್ಕು ವಿಮರ್ಶೆಗಳಲ್ಲಿ ಪ್ರಮುಖ ಮಾನದಂಡ ದರವನ್ನು ಬದಲಾಗದೆ ಇರಿಸಿದೆ.

RBI keeps repo rate unchanged at 4%; maintains accommodative stance

ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರವುನವೆಂಬರ್‌ನಲ್ಲಿ 6.93% ಕ್ಕೆ ಹೋಲಿಸಿದರೆ, 2020 ರ ಡಿಸೆಂಬರ್‌ನಲ್ಲಿ 4.59% ಕ್ಕೆ ಇಳಿದಿದೆ. ಇದು ಇನ್ನೂ ಆರ್‌ಬಿಐ ಗುರಿಗಳಿಗಿಂತ ಹೆಚ್ಚಾಗಿದೆ.

English summary
Rbi decided to keep the repo rate now continues to remain at 4%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X