50 ರೂಪಾಯಿ ಹೊಸ ನೋಟಿನಲ್ಲಿ ಹಂಪಿಯ ರಥ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 18: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವು ಅಪನಗದೀಕರಣ ಘೋಷಣೆ ಮಾಡಿದ ಬಳಿಕ ದೊಡ್ಡ ಮೌಲ್ಯ ನೋಟುಗಳು ಬಂದ್ ಆಗಿದ್ದಲ್ಲದೆ, ಕೆಲ ಹೊಸ ನೋಟುಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿತ್ತು. ಅದರಂತೆ, ಈಗ 50ರು ಮುಖಬೆಲೆಯ ನೋಟು ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ.

ದಿನನಿತ್ಯದ ವಹಿವಾಟಿಗಾಗಿ 50-10 ರೂ. ನೋಟು ಬಿಡುಗಡೆ ಮಾಡುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಘೋಷಿಸಿತ್ತು.ಈಗ ಈ ನೋಟಿನ ಮಾದರಿ ವಿನ್ಯಾಸ ಹೊರ ಬಂದಿದೆ.

RBI to issue 50 denomination banknotes motif of Hampi

ಹೊಸ ಮಾದರಿಯ ತೆಳು ಹಸಿರು ಬಣ್ಣದ ನೋಟು, ಈಗ ಚಲಾವಣೆಯಲ್ಲಿರುವ 50 ರೂ. ನೋಟುಗಳಿಗಿಂತ ಕೊಂಚ ವಿಭಿನ್ನವಾಗಿದೆ. ಮಹಾತ್ಮ ಗಾಂಧಿ ಫೋಟೋ ಒಳಗೊಂಡಿರುವ ನೊಟುಗಳು ಇವಾಗಿದ್ದು, ಹಿಂದಿನ ಭಾಗದಲ್ಲಿ ಕರ್ನಾಟಕದ ಹಂಪಿಯಲ್ಲಿರುವ ಕಲ್ಲಿನ ಸ್ಮಾರಕವಿದೆ.

ಕಳೆದ ವರ್ಷ ನವೆಂಬರ್ 8, 2017ರಂದು 500 ರು ಹಾಗೂ 1000 ರು ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಲಾಯಿತು. ನಂತರ 2000 ಹಾಗೂ 500 ರು ಮುಖಬೆಲೆ ನೋಟು ಚಲಾವಣೆಗೆ ತರಲಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
RBI to shortly issue 50 denomination banknotes with motif of Hampi with Chariot on reverse, depicting country’s cultural heritage

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X