ದೇಶಕ್ಕೆ ರಘುರಾಂ ರಾಜನ್ ನೀಡಿದ ಎಚ್ಚರಿಕೆ ಏನು?

Written By:
Subscribe to Oneindia Kannada

ಮುಂಬೈ, ಆಗಸ್ಟ್, 09: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ತಮ್ಮ ಅವಧಿಯ ಕೊನೆಯ ಹಣಕಾಸಿನ ನೀತಿ ಘೋಷಣೆಯಲ್ಲಿ ಯಥಾ ಸ್ಥಿತಿ ಕಾಯ್ದುಕೊಂಡಿದ್ದಾರೆ. ಜತೆಗೆ ಹಣದುಬ್ಬರ ಏರಿಕೆ ಎಚ್ಚರಿಕೆಯನ್ನು ನೀಡಿದ್ದಾರೆ.

ರೆಪೊ ದರವನ್ನು ಬದಲಾಯಿಸಲು ರಾಜನ್ ಮುಂದಾಗಿಲ್ಲ. ಸದ್ಯ ಇರುವ ಶೇ. 6.5ರಷ್ಟು ರೆಪೊ ದರ ಹಾಗೇ ಮುಂದುವರಿಯಲಿದೆ. ಬ್ಯಾಂಕ್ ಗಳಿಗೆ ಪಾವತಿಸುವ ಹಣ ರಿವರ್ಸ್ ರೆಪೊ ದರವನ್ನು ಶೇಕಡಾ 6ರಷ್ಟು ಮತ್ತು ಕ್ಯಾಶ್ ರಿಸರ್ವ್ ದರವನ್ನು ಶೇಕಡಾ 4ರಷ್ಟು ಕಾಯ್ದುಕೊಳ್ಳಲಾಗಿದೆ.[ರಿಸರ್ವ್ ಬ್ಯಾಂಕಿಗೆ ನೂತನ ಗವರ್ನರ್: ರೇಸ್ ನಲ್ಲಿರುವ 6 ಪ್ರಮುಖರು]

ಬೆಲೆ ಏರಿಕೆ ಮತ್ತು 7ನೇ ವೇತನ ಆಯೋಗದಲ್ಲಿ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳದಿಂದಾಗಿ ಮುಂದಿನ ವರ್ಷ ಮಾರ್ಚ್ 2017ರಲ್ಲಿ ಹಣದುಬ್ಬರ ಶೇಕಡಾ 5ಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಘುರಾಂ ರಾಜನ್ ಎಚ್ಚರಿಕೆ ನೀಡಿದ್ದಾರೆ. ರಘುರಾಂ ರಾಜನ್ ಅವರ ಅವಧಿ ಸೆಪ್ಟೆಂಬರ್ 4ಕ್ಕೆ ಕೊನೆಗೊಳ್ಳಲಿದೆ. [ಆರ್ ಬಿಐ ಬಡ್ಡಿ ದರ ಯಥಾಸ್ಥಿತಿ: ಸಾರ್ವಜನಿಕ ಹೂಡಿಕೆಗೆ ಉತ್ತೇಜನ]

ರಾಜನ್ ಹೇಳಿದ ಹಣಕಾಸು ಲೆಕ್ಕ

ರಾಜನ್ ಹೇಳಿದ ಹಣಕಾಸು ಲೆಕ್ಕ

ರೆಪೊ ದರದಲ್ಲಿ ಯಾವ ಬದಲಾವಣೆ ಇಲ್ಲ(ಶೇ. 6.5.) ಸಾಲದ ಬಡ್ಡಿ ದರದಲ್ಲಿ(ಶೇ. 4 ) ಯಾವ ಬದಲಾವಣೆ ಇಲ್ಲ.

2017ರ ಮಾರ್ಚ್

2017ರ ಮಾರ್ಚ್

ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸುಗಳಿಗೆ ಸಮ್ಮತಿ ನೀಡಿದೆ. ಕೇಂದ್ರ ಸರ್ಕಾರ ತನ್ನ ನೌಕರರಿಗೆ ಶೇ. 23.55 ರಷ್ಟು ವೇತನ ಹಾಗೂ ಭತ್ಯೆ ಹೆಚ್ಚಳ ನೀಡಿದೆ. ಇದರ ಪರಿಣಾಮವನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ರಾಜನ್ ಹೇಳಿದ್ದಾರೆ.

ರಾಜನ್ ಮುಂದಿನ ನಡೆ ಏನು?

ರಾಜನ್ ಮುಂದಿನ ನಡೆ ಏನು?

ಆರ್ ಬಿಐ ಗವರ್ನರ್ ಸ್ಥಾನದಿಂದ ನಿವೃತ್ತರಾಧ ಬಳಿಕ ರಾಜನ್ ಅಮೆರಿಕದ ಅಕಾಡಮಿಯಾ ಸಂಸ್ಥೆಗೆ ತೆರಳಿ ಸಂಶೋಧನೆ ಮುಂದುವರಿಸಲಿದ್ದಾರೆ.

 ರೆಪೊ ದರ ಎಂದರೇನು?

ರೆಪೊ ದರ ಎಂದರೇನು?

ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರವೇ ರೆಪೊ ದರ. ಸಿಆರ್ ಆರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reserve Bank of India (RBI) Governor Raghuram Rajan kept key policy rates unchanged in his last monetary policy review with little elbow room on account of the country's retail inflation inching closer to the upper tolerance level of 6 percent. Accordingly, the repurchase (repo) rate or the interest commercial banks pay the central bank for short-term loans, remains unchanged at 6.5 per cent. The cash reserve ratio (CRR) that scheduled banks have to keep in the form of liquid funds also remains unaltered at 4 per cent of deposits.
Please Wait while comments are loading...