Quick Commerce: ಕ್ವಿಕ್ ಕಾಮರ್ಸ್‌ನಲ್ಲಿ ದೀಪಾವಳಿ ಭರ್ಜರಿ ಡಿಸ್ಕೌಂಟ್ ಸೇಲ್, GST ಸಂಗ್ರಹಕ್ಕೆ ಬೂಸ್ಟ್

ದೀಪಾವಳಿ ಹಬ್ಬದ ಸಡಗರ, ಸಂಭ್ರಮಕ್ಕೆ ದಿನಗಣನೇ ಶುರುವಾಗಿದೆ. ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಮತ್ತೊಂದೆಡೆ ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ರಿಯಾಯಿತಿಗಳ ಸುರಿಮಳೆ ಸುರಿಯುತ್ತಿವೆ. ಇದರಿಂದ ಸರಕು ಸೇವಾ ತೆರಿಗೆಗೆ (GST) ಉತ್ತೇಜನ ನೀಡಿದಂತಾಗಿದೆ. ಹಬ್ಬದ ಋತುವಿನಲ್ಲಿ ಜನರನ್ನು ಸೆಳೆಯಲು ಸಾಕಷ್ಟು ರಿಯಾಯಿತಿ ನೀಡುತ್ತಿವೆ. ಹಿಂದಿನ ತಿಂಗಳಿಗೆ ಹೋಲಿಸಿದೆ ಅಕ್ಟೋಬರ್ ನಲ್ಲಿ ಸ್ಟಾಕ್ ಮತ್ತು ಕೊಡುಗೆ ಹೆಚ್ಚಿಸಿವೆ.

ಕ್ವಿಕ್ ಕಾಮರ್ಸ್ ವೇದಿಕೆಗಳಾದ ಬ್ಲಿಂಕಿಟ್, ಜೆಪ್ಟೊ, ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಬಿಗ್‌ಬಾಸ್ಕೆಟ್ ನೌ, ಮತ್ತು ಡಂಜೊ ಡೈಲಿ. ವೇದಿಕೆಗಳಲ್ಲಿ ಹಬ್ಬದ ರಿಯಾಯಿತಿ ಘೋಷಣೆ ಆಗಿವೆ. ಆಫರ್ ಜೊತೆಗೆ ಸ್ಟಾಕ್ ಹೆಚ್ಚಿವೆ. ಬ್ಲಿಂಕಿಟ್ ಮತ್ತು ಜೆಪ್ಟೋ ಅಕ್ಟೋಬರ್‌ನಲ್ಲಿ ದೀಪಾವಳಿ ಶೈಲಿಯ ಮಾರಾಟ ಈಗಾಗಲೇ ಆರಂಭಿಸಿವೆ. ಹಿಂದಿನ ತಿಂಗಳಿಗೆ ಅಂದರೆ ದಸರಾ ವೇಳೆ ಹೋಲಿಸಿದರೆ ಈ ಬಾರಿ ಡಿಸ್ಕೌಂಟ್ ಹೆಚ್ಚಾಗಿದೆ.

Quick Commerce Booms This Diwali with Big Discounts and GST Cuts See More

ಇನ್ನು ಇ-ಕಾಮರ್ಸ್ ವೇದಿಕೆಯಾಗಿರುವ ಫ್ಲಿಪ್‌ಕಾರ್ಟ್ ತನ್ನ ಬಿಗ್ ಬ್ಯಾಂಗ್ ದೀಪಾವಳಿ ಮಾರಾಟ ವಿಸ್ತರಿಸಿದೆ. ಅಂದರೆ ಕ್ವಿಕ್ ಕಾಮರ್ಸ್‌ಗೂ ಸೇವೆ ವಿಸ್ತರಣೆ ಆಗಿರುವ ಕಾರಣ ನೀವು ಇಲ್ಲಿ ಸಿಹಿತಿಂಡಿಗಳು, ಉಡುಗೊರೆ ಪೆಟ್ಟಿಗೆಗಳು ಮತ್ತು ಗೃಹಾಲಂಕಾರ ವಸ್ತುಗಳನ್ನು ರಿಯಾಯಿತಿ ದರಕ್ಕೆ ಖರೀದಿಸಬಹುದು. ಸ್ವಿಗ್ಗಿ ಇನ್‌ಸ್ಟಾಮಾರ್ಟ್ ನಲ್ಲಿ ಅಗತ್ಯ ವಸ್ತುಗಳು ಮತ್ತು ಉಡುಗೊರೆ ವಸ್ತುಗಳ ಮೇಲೆ ಆಫರ್ ನೀಡಿವೆ. ಪೆಪ್ಸಿ, ಲೇಸ್, ಅಮುಲ್, ಫೆರೆರೊ ರೋಚರ್, ಕ್ಯಾಡ್‌ಬರಿ ಮತ್ತು ಹಲ್ದಿರಾಮ್‌ಗಳು ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳು ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಭರ್ಜರಿ ಪ್ರಚಾರ ಪಡೆದಿವೆ.

ರಿಯಾಯಿತಿ ಪ್ರಮಾಣ ನೋಡುವುದಾರೆ, ಬ್ಲಿಂಕಿಟ್‌ನಲ್ಲಿ ಸರಾಸರಿ ರಿಯಾಯಿತಿಗಳು ಶೇಕಡಾ 20ರಷ್ಟು ಹೆಚ್ಚಿವೆ. ಜೆಪ್ಟೋ 15-16ರಷ್ಟು ಕಂಡು ಬಂದಿದೆ. ಜೆಪ್ಟೋ ನಲ್ಲಿ ಕಳೆದ ತಿಂಗಳು 10-12ರಷ್ಟಿತ್ತು. ಇಂದು ಹೆಚ್ಚಾಗಿದೆ. ಕೆಲವು ಉತ್ಪನ್ನಗಳನ್ನು ಗರಿಷ್ಠ ಚಿಲ್ಲರೆ ಬೆಲೆಯಿಂದ 60-70ರಷ್ಟು ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತದೆ.ಬೈ-ಒನ್-ಗೆಟ್-ತ್ರೀ ಡೀಲ್‌ ಗಳು ನಡೆದಿವೆ. ಹಬ್ಬದ ಬೇಡಿಕೆಯನ್ನು ಸೆರೆಹಿಡಿಯಲು ಮತ್ತು ಜಿಎಸ್‌ಟಿ ಸಂಬಂಧಿತ ಇಳಿಕೆ ಕಾರಣದಿಂದಲೂ ಪ್ಯಾಕೇಟ್ ಆಹಾರ, ಪಾನೀಯಗಳು ಮತ್ತು ತಿಂಡಿಗಳು ಕ್ವಿಕ್ ಕಾಮರ್ಸ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇಲ್ ಆಗುತ್ತಿವೆ. ಸೆಪ್ಟೆಂಬರ್ 22 ರ GST ಕಡಿತದ ನಂತರ ಮಾರಾಟ ಪ್ರಮಾಣ ಹೆಚ್ಚಾಗುತ್ತಿದೆ ಎಂದು ವರದಿ ಆಗಿದೆ.

ಈ ಕ್ವಿಕ್ ಕಾಮರ್ಸ್ ವೇದಿಕೆಯಲ್ಲಿ ಹಬ್ಬದ ಅವಧಿಯಲ್ಲಿ 10-ನಿಮಿಷಗಳ ವಿತರಣಾ ಸೆಗ್ಮೆಂಟ್‌ನಲ್ಲಿ ಒಟ್ಟು 1.6 ಬಿಲಿಯನ್ ಡೆಲಿವರಿ ಆಗುವ ನಿರೀಕ್ಷೆ ಇದೆ. ಒಟ್ಟಾರೆ ಆನ್‌ಲೈನ್ ಮಾರಾಟ ಹೆಚ್ಚಾಗಿದ್ದು, ಕೆಲವು ಬ್ರ್ಯಾಂಡ್‌ಗಳು ಕಾಂಬೊ ಪ್ಯಾಕ್‌ಗಳು ಮತ್ತು ಹ್ಯಾಂಪರ್ಗಳನ್ನು ನೀಡುತ್ತಿವೆ.

ಚಿಲ್ಲರೆ ವ್ಯಾಪಾರ ವಹೀವಾಟು 23% ಏರಿಕೆ

ತಿಂಡಿಗಳು ಮತ್ತು ಪಾನೀಯಗಳ ಹೊರತಾಗಿ ತ್ವರಿತ ವಾಣಿಜ್ಯ ಅಪ್ಲಿಕೇಶನ್‌ಗಳು ದೀಪಗಳು, ಹೂವುಗಳು, ಚಿನ್ನ ಮತ್ತು ಬೆಳ್ಳಿ ನಾಣ್ಯಗಳು, ಅಲಂಕಾರಿಕ ದೀಪಗಳು, ಪೊರಕೆಗಳು ಮತ್ತು ಶುಚಿಗೊಳಿಸುವ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ದೀಪಾವಳಿ ಪ್ರಯುಕ್ತ ಈ ವಸ್ತುಗಳ ಮಾರಾಟದಲ್ಲಿ ಏರಿಕೆ ಆಗಿದೆ. ಜೊತೆಗೆ ಹಬ್ಬದ ಉಡುಗೊರೆ ವಸ್ತುಗಳಿಗೂ ಬೇಡಿಕೆ ಉಂಟಾಗಿದೆ. ವಿಶ್ಲೇಷಕರ ಪ್ರಕಾರ ಭಾರತದ ಹಬ್ಬದ ಚಿಲ್ಲರೆ ಆರ್ಥಿಕತೆಯು ಈ ವರ್ಷ125-150 ಬಿಲಿಯನ್ ತಲುಪಬಹುದು ಎಂದಿದ್ದಾರೆ. ಇದು ನಿಜವೇ ಆದಲ್ಲಿ ಕಳೆದ ವರ್ಷಕ್ಕಿಂತ 23ರಷ್ಟು ಚಿಲ್ಲರೆ ವಹೀವಾಟು ಹೆಚ್ಚಾದಂತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+