• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

1Gbpsಗೂ ಹೆಚ್ಚಿನ ವೇಗದ ಸಾಧಿಸಿದ ಜಿಯೋ ಮತ್ತು ಕ್ವಾಲ್‌ಕಾಮ್

|

ಸ್ಯಾನ್ ಡಿಯಾಗೋ, ಅ 21: ಕ್ವಾಲ್‌ಕಾಮ್ ಟೆಕ್ನಾಲಜೀಸ್ ಮತ್ತು ಜಿಯೋ ತನ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ರಾಡಿಸಿಸ್ ಕಾರ್ಪೊರೇಷನ್‌ನೊಂದಿಗೆ ಇಂದು ವರ್ಚುವಲೈಸ್ಡ್ RANನೊಂದಿಗೆ ಮುಕ್ತ ಮತ್ತು ಇಂಟರ್‌ಆಪರಬಲ್ ಇಂಟರ್‌ಫೇಸ್ ಕಂಪ್ಲಯಂಟ್ ಆರ್ಕಿಟೆಕ್ಚರ್ ಆಧಾರಿತ 5G ಪರಿಹಾರಗಳನ್ನು ಅಭಿವೃದ್ಧಿಪಡಿಸುವ ವಿಸ್ತೃತ ಪ್ರಯತ್ನಗಳನ್ನು ಪ್ರಕಟಿಸಿವೆ. ಭಾರತದಲ್ಲಿ ಸ್ಥಳೀಯ 5G ನೆಟ್‌ವರ್ಕ್ ಮೂಲಸೌಕರ್ಯ ಮತ್ತು ಸೇವೆಗಳ ಅಭಿವೃದ್ಧಿ ಹಾಗೂ ಪ್ರಾರಂಭವನ್ನು ತ್ವರಿತಗೊಳಿಸುವುದು ಈ ಪ್ರಯತ್ನಗಳ ಉದ್ದೇಶವಾಗಿದೆ.

ಕ್ವಾಲ್‌ಕಾಮ್ 5G RAN ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ಜಿಯೋ 5GNR 1 Gbps ಮೈಲಿಗಲ್ಲನ್ನು ದಾಟಿರುವುದಾಗಿಯೂ ಕ್ವಾಲ್‌ಕಾಮ್ ಟೆಕ್ನಾಲಜೀಸ್ ಮತ್ತು ಜಿಯೋ ಘೋಷಿಸಿವೆ. ಈ ಸಾಧನೆಯು ಜಿಯೋನ 5ಜಿ ರುಜುವಾತುಗಳನ್ನು ಬೆಂಬಲಿಸುವುದಲ್ಲದೆ, ಗಿಗಾಬಿಟ್ 5G NR ಉತ್ಪನ್ನಗಳ ಕ್ಷೇತ್ರಕ್ಕೆ ಜಿಯೋ ಮತ್ತು ಭಾರತದ ಪ್ರವೇಶವನ್ನೂ ಸೂಚಿಸುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸಾಲ ಮುಕ್ತವಾಗಿದ್ದು ಹೇಗೆ ?

5G ತಂತ್ರಜ್ಞಾನದೊಂದಿಗೆ, ಬಳಕೆದಾರರು 5G-ಸಶಕ್ತ ಸ್ಮಾರ್ಟ್‌ಫೋನ್‌ಗಳಿಂದ ಎಂಟರ್‌ಪ್ರೈಸ್ ಲ್ಯಾಪ್‌ಟಾಪ್‌ಗಳವರೆಗೆ, ಎಆರ್/ವಿಆರ್ ಉತ್ಪನ್ನಗಳಿಂದ ವರ್ಟಿಕಲ್ ಐಒಟಿ ಪರಿಹಾರಗಳವರೆಗೆ ಹೆಚ್ಚಿನ ವೇಗದ ಡೇಟಾ, ಕಡಿಮೆ ವಿಳಂಬವಿರುವ ಸಂವಹನ ಮತ್ತು ಸಂಪರ್ಕಿತ ಸಾಧನಗಳ ವ್ಯಾಪಕ ಶ್ರೇಣಿಯಾದ್ಯಂತ ವರ್ಧಿತ ಡಿಜಿಟಲ್ ಅನುಭವಗಳ ಅನುಕೂಲವನ್ನು ಪಡೆಯುತ್ತಾರೆ.

ಕ್ವಾಲ್‌ಕಾಮ್ 5G RAN ಪ್ಲಾಟ್‌ಫಾರ್ಮ್‌ಗಳನ್ನು ಫ್ಲೆಕ್ಸಿಬಲ್, ವರ್ಚುವಲೈಸ್ಡ್, ಸ್ಕೇಲಬಲ್ ಮತ್ತು ಇಂಟರ್‌ಆಪರಬಲ್ ಸೆಲ್ಯುಲರ್ ಜಾಲದ ಮೂಲಸೌಕರ್ಯಗಳಿಗೆ ತಳಹದಿ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಬೃಹತ್ MIMO ಹೊಂದಿರುವ ಮ್ಯಾಕ್ರೋ ಬೇಸ್ ಸ್ಟೇಷನ್‌ಗಳಿಂದ ಪ್ರಾರಂಭಿಸಿ ಸಣ್ಣ ಸೆಲ್‌ಗಳವರೆಗಿನ ವ್ಯಾಪಕ ಶ್ರೇಣಿಯ ಮೂಲಸೌಕರ್ಯ ವಿಭಾಗಗಳಿಗೆ ಈ ಪ್ಲಾಟ್‌ಫಾರ್ಮ್‌ಗಳು ಸ್ಕೇಲಬಲ್ ಬೆಂಬಲವನ್ನು ನೀಡುತ್ತವೆ, ಮತ್ತು ಸಬ್-6 GHz ಹಾಗೂ mmWave ಸ್ಪೆಕ್ಟ್ರಂ‌ನಲ್ಲಿನ ಎಲ್ಲ ಪ್ರಮುಖ ಫ್ರೀಕ್ವೆನ್ಸಿ ಬ್ಯಾಂಡ್‌ಗಳನ್ನೂ ಬೆಂಬಲಿಸುತ್ತವೆ.

ರಿಲಯನ್ಸ್ ಜಿಯೋ ಇನ್‌ಫೋಕಾಮ್‌ನ ಅಧ್ಯಕ್ಷ ಮ್ಯಾಥ್ಯೂ ಊಮ್ಮೆನ್, "ನಿಜವಾಗಿಯೂ ಮುಕ್ತ ಮತ್ತು ಸಾಫ್ಟ್‌ವೇರ್ ವ್ಯಾಖ್ಯಾನಿತವಾದ ಹೊಸ ತಲೆಮಾರಿನ ಕ್ಲೌಡ್-ನೇಟಿವ್ 5G RAN ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿ ಕ್ವಾಲ್‌ಕಾಮ್ ಟೆಕ್ನಾಲಜೀಸ್‌ನೊಂದಿಗೆ ಕೆಲಸ ಮಾಡುವ ಬಗ್ಗೆ ನಾವು ಉತ್ಸುಕರಾಗಿದ್ದೇವೆ. ಕ್ವಾಲ್‌ಕಾಮ್ ಟೆಕ್ನಾಲಜೀಸ್‌ನೊಂದಿಗೆ ಸುರಕ್ಷಿತ RAN ಪರಿಹಾರಗಳ ಅಭಿವೃದ್ಧಿಯು ಜಿಯೋ ಪ್ಲಾಟ್‌ಫಾರ್ಮ್ಸ್ ಮತ್ತು ಪ್ರಮಾಣದೊಂದಿಗೆ ಸೇರಿ, ಎಲ್ಲರನ್ನೂ ಒಳಗೊಳ್ಳುವ 5G ರಾಷ್ಟ್ರಕ್ಕಾಗಿ ಸ್ಥಳೀಯ ಉತ್ಪಾದನೆ ಹಾಗೂ ಆತ್ಮನಿರ್ಭರ ಭಾರತದ ಸಾಧನೆಯ ವೇಗವರ್ಧನೆಗೆ ಸೂಕ್ತವಾದ ಸಂಯೋಜನೆಯನ್ನು ಒದಗಿಸುತ್ತದೆ." ಎಂದು ಹೇಳಿದ್ದಾರೆ.

ಕ್ವಾಲ್‌ಕಾಮ್ ಟೆಕ್ನಾಲಜೀಸ್, ಇಂಕ್‌ನ 4G/5G ಹಿರಿಯ ಉಪಾಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕ ದುರ್ಗಾ ಮಲ್ಲಾಡಿ, "ಕ್ವಾಲ್‌ಕಾಮ್ ಟೆಕ್ನಾಲಜೀಸ್ ಜಗತ್ತಿನಾದ್ಯಂತ ವರ್ಚುವಲೈಸ್ಡ್, ಫ್ಲೆಕ್ಸಿಬಲ್ ಮತ್ತು ಇಂಟರ್‌ಆಪರಬಲ್ 5G ಮೂಲಸೌಕರ್ಯಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಒದಗಿಸುವ ಗುರಿ ಹೊಂದಿದೆ. ಕ್ವಾಲ್‌ಕಾಮ್ 5G RAN ಪ್ಲಾಟ್‌ಫಾರ್ಮ್‌ಗಳನ್ನು ಬಳಸುವ ರಿಲಯನ್ಸ್ ಜಿಯೋ 5G NR ಉತ್ಪನ್ನದಲ್ಲಿ ನಾವು ಇತ್ತೀಚೆಗೆ 1 Gbps ಮೈಲಿಗಲ್ಲನ್ನು ಸಾಧಿಸಿದ್ದೇವೆ, ಮತ್ತು ಫ್ಲೆಕ್ಸಿಬಲ್ ಹಾಗೂ ಸ್ಕೇಲಬಲ್ 5G RAN ನಿಯೋಜನೆಗಳನ್ನು ಸಕ್ರಿಯಗೊಳಿಸಲು ರಿಲಯನ್ಸ್ ಜಿಯೋ ಜೊತೆಗಿನ ಪ್ರಯತ್ನಗಳನ್ನು ವಿಸ್ತರಿಸುವುದನ್ನು ನಾವು ಎದುರು ನೋಡುತ್ತೇವೆ. ಆಪರೇಟರ್‌ಗಳು ಮತ್ತು ಉದ್ಯಮದ ವರ್ಟಿ‌ಕಲ್‌ಗಳು 5G ನೆಟ್‌ವರ್ಕ್ ವ್ಯಾಪ್ತಿ ಮತ್ತು ಸಾಮರ್ಥ್ಯವನ್ನು ಬೇಕಾದಾಗ ಬೇಕಾದಲ್ಲಿ ತ್ವರಿತ ಮತ್ತು ಸುಲಭವಾಗಿ ಅಳವಡಿಸಿಕೊಳ್ಳುವಲ್ಲಿ ಈ ರೀತಿಯ ಇಕೋಸಿಸ್ಟಮ್ ಸಹಯೋಗಗಳು ನಿರ್ಣಾಯಕ ಪಾತ್ರ ವಹಿಸುತ್ತವೆ." ಎಂದು ಹೇಳಿದ್ದಾರೆ.

English summary
Qualcomm Technologies and Jio also announced that they achieved over a 1 Gbps milestone on the Jio 5GNR solution, leveraging the Qualcomm® 5G RAN Platforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X