ಚಿಂತೆ ಬಿಡಿ, ಪಿಪಿಎಫ್ ಮೇಲೆ ಯಾವುದೇ ತೆರಿಗೆ ಹಾಕುತ್ತಿಲ್ಲ

Posted By:
Subscribe to Oneindia Kannada

ನವದೆಹಲಿ, ಮಾ.01: ಸಾರ್ವಜನಿಕ ಭವಿಷ್ಯ ನಿಧಿ (public provident fund) ಮೇಲೆ ತೆರಿಗೆ ಹಾಕಲಾಗುತ್ತದೆ ಎಂಬ ಆತಂಕಕ್ಕೊಳಗಾಗಿದ್ದ ಉದ್ಯೋಗಿಗಳಿಗೆ ವಿತ್ತ ಸಚಿವಾಲಯ ಮಂಗಳವಾರ (ಮಾರ್ಚ್ 01) ಸ್ಪಷ್ಟನೆ ನೀಡಿದೆ.

ಸೋಮವಾರ (ಫೆಬ್ರವರಿ 29) ರಂದು ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಭವಿಷ್ಯ ನಿಧಿ ವಿಥ್ ಡ್ರಾ ಸಮಯದಲ್ಲಿ ತೆರಿಗೆ ವಿಧಿಸಲಾಗುತ್ತದೆ ಎಂದು ಪ್ರಸ್ತಾವನೆ ಮುಂದಿಟ್ಟರು. ಇದು ಅನೇಕ ರೀತಿ ಗೊಂದಲಕ್ಕೆ ಕಾರಣವಾಯಿತು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ ಒ) ಯ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೂ ಮುಂದಾದರು.[ಆದಾಯ ತೆರಿಗೆ ದರ, ಮಿತಿ, ಸಂಪೂರ್ಣ ವಿವರ]

ಸರ್ಕಾರದ ಪ್ರಸ್ತಾವನೆ: ಈ ಮುಂಚೆ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್ ) ಅಡಿಯಲ್ಲಿ ಉಳಿಸಲಾದ ಪೂರ್ತಿ ಮೊತ್ತ ತೆರಿಗೆಗೆ ಒಳಪಡುತ್ತಿತ್ತು. ಆದರೆ, ಈಗ ಏಪ್ರಿಲ್ 01, 2016ರಿಂದ ಶೇ 60ರಷ್ಟು ಮೊತ್ತಕ್ಕೆ ಮಾತ್ರ ತೆರಿಗೆ ಹಾಕಲಾಗುತ್ತದೆ.

ಇದೇ ರೀತಿ ಇಪಿಎಫ್ ಮೊತ್ತಕ್ಕೂ ವಿಥ್ ಡ್ರಾ ಸಮಯದಲ್ಲಿ ತೆರಿಗೆ ಹಾಕಲಾಗುತ್ತದೆ. ಇಲ್ಲಿ ತನಕ ಇಪಿಎಫ್ ಮೊತ್ತ ಹಾಗೂ ನಿವೃತ್ತಿ ಸಮಯದ ಪಿಎಫ್ ವಿಥ್ ಡ್ರಾ ಎಲ್ಲವೂ ತೆರಿಗೆ ಮುಕ್ತವಾಗಿತ್ತು. [ಬಜೆಟ್ 2016: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕವೇನು?]

PPF remains tax exempt: Revenue Secretary

ಇಪಿಎಫ್ ಒ ನಲ್ಲಿ 8.5 ಕೋಟಿಗೂ ಅಧಿಕ ಸದಸ್ಯರ 10 ಲಕ್ಷ ಕೋಟಿ ರು ಗೂ ಅಧಿಕ ಮೊತ್ತವಿದೆ. ಎನ್ ಪಿಎಸ್ ನಲ್ಲಿ 1.15 ಕೋಟಿ ಗೂ ಅಧಿಕ ಸದಸ್ಯರ 1.1 ಲಕ್ಷ ಕೋಟಿ ರು ಮೊತ್ತವಿದೆ. [ಆನ್ ಲೈನ್ ನಲ್ಲೇ ಪಿಎಫ್ ಹಣ ವಿಥ್ ಡ್ರಾ ಮಾಡಿ]

ವಿತ್ತ ಸಚಿವಾಲಯದ ಸ್ಪಷ್ಟನೆ: ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಕೂಡಾ ತೆರಿಗೆಗೆ ಒಳಪಡುತ್ತದೆ ಎಂಬ ಗೊಂದಲಕ್ಕೆ ವಿತ್ತ ಸಚಿವಾಲಯ ತೆರೆ ಎಳೆದಿದೆ. ಪಿಪಿಎಫ್ ಗೆ ನೀಡುವ ಮೊತ್ತ ತೆರಿಗೆ ಮುಕ್ತವಾಗಲಿದೆ. ವಿಥ್ ಡ್ರಾ (ನಿವೃತ್ತಿಯಾಗುವಾಗ) ಸಮಯದಲ್ಲೂ ಪಿಪಿಎಫ್ ಮೊತ್ತದ ಮೇಲೆ ಯಾವುದೇ ತೆರಿಗೆ ಹಾಕುವುದಿಲ್ಲ.

* 15,000 ರು ಪ್ರತಿ ತಿಂಗಳು ಆದಾಯ ಹೊಂದಿರುವ ಸಂಬಳದಾರರು ಇಪಿಎಫ್ ನ ತೆರಿಗೆಗೆ ಒಳಪಡುವುದಿಲ್ಲ.

* ಏಪ್ರಿಲ್ 01, 2016ರಿಂದ ಇಪಿಎಫ್ ನ ಅಸಲು ಧನ ತೆರಿಗೆ ಮುಕ್ತವಾಗಿರುತ್ತದೆ. ಇಪಿಎಫ್ ಗೆ ನೀಡುವ ಮೊತ್ತದ ಶೇ 60ರಷ್ಟು ಬಡ್ಡಿ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. [ತೆರಿಗೆ ಉಳಿಸಲು HDFC ULIPನಲ್ಲಿ ಹೂಡಿಕೆ ಮಾಡಿ]

ಪಿಎಫ್ ಲೆಕ್ಕಾಚಾರ: ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. (ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Only interest accrued on 60 per cent contribution to EPF after April 1, 2016 will be taxed. Addressing concerns that the Public Provident Fund will also fall under the announcement that 40 per cent of PF will be taxed on withdrawal at the time of retirement, the government has issued a clarification on Tuesday.
Please Wait while comments are loading...