ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕಿಗೆ 34 ಕೋಟಿ ಗ್ರಾಹಕರು!

By Mahesh
|
Google Oneindia Kannada News

ಗಳೂರು, ಏಪ್ರಿಲ್ 09: ಭಾರತೀಯ ಅಂಚೆ ಕಚೇರಿಗಳಿಗೆ ಪೇಮೆಂಟ್ ಬ್ಯಾಂಕ್ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ಜಾರಿಗೊಳ್ಳುತ್ತಿದ್ದಂತೆ, ಸರಿ ಸುಮಾರು 34 ಕೋಟಿಗೂ ಅಧಿಕ ಖಾತೆದಾರರನ್ನು ಹೊಂದಲಿದೆ. ಈ ಮೂಲಕ ಅತಿದೊಡ್ಡ ಡಿಜಿಟಲ್ ವ್ಯವಹಾರ ಜಾಲ ಸ್ಥಾಪನೆಯಾಗಲಿದೆ.

ಅಂಚೆ ಇಲಾಖೆಯಿಂದ ಪೇಮೆಂಟ್ಸ್ ಬ್ಯಾಂಕ್ ಸೇವೆ ಅಂಚೆ ಇಲಾಖೆಯಿಂದ ಪೇಮೆಂಟ್ಸ್ ಬ್ಯಾಂಕ್ ಸೇವೆ

ಹೀಗಾಗಿ, ಅಂಚೆ ಕಚೇರಿಯ ನಿಮ್ಮ ಖಾತೆಯಿಂದ ಯಾವುದೇ ಬ್ಯಾಂಕ್ ಗಳಿಗೆ ಹಣ ವರ್ಗಾಯಿಸುವ ಅಥವಾ ಬೇರೆ ಬ್ಯಾಂಕ್ ಖಾತೆಯಿಂದ ಅಂಚೆ ಕಚೇರಿಯ ನಿಮ್ಮ ಖಾತೆಗೆ ಹಣ ಜಮೆ ಮಾಡುವ ಪ್ರಕ್ರಿಯೆ ಸುಲಭವಾಗಿ ಸಾಧಿಸಬಹುದಾಗಿದೆ.

ಪೋಸ್ಟ್‌ಕ್ರಾಸಿಂಗ್ : ಪತ್ರಗಳ ಮೂಲಕ ವಿಶ್ವವನ್ನು ಬೆಸೆಯುವ ಯತ್ನ ಪೋಸ್ಟ್‌ಕ್ರಾಸಿಂಗ್ : ಪತ್ರಗಳ ಮೂಲಕ ವಿಶ್ವವನ್ನು ಬೆಸೆಯುವ ಯತ್ನ

ಇನ್ನು ಕೆಲ ತಿಂಗಳುಗಳಲ್ಲಿ 3,500ಕ್ಕೂ ಅಧಿಕ ಸಿಬ್ಬಂದಿ ನೇಮಕಾತಿ ನಡೆಸಲಾಗುತ್ತಿದೆ. 650ಕ್ಕೂ ಅಧಿಕ ಕೇಂದ್ರಗಳನ್ನು ದೇಶದೆಲ್ಲೆಡೆ ಸ್ಥಾಪಿಸಲಾಗುವುದು, ಮೇ ತಿಂಗಳ ನಂತರ ನಿಮ್ಮ ಪೋಸ್ಟ್ ಆಫೀಸ್ ಉಳಿತಾಯ ಖಾತೆಯಿಂದ ಹಣ ವರ್ಗಾಯಿಸುವ ವ್ಯವಸ್ಥೆ ನಿರೀಕ್ಷಿಸಬಹುದು ಎಂದು ಭಾರತೀಯ ಅಂಚೆ ಪ್ರಕಟಿಸಿದೆ.

Post Office Savings Account Customers To Soon Avail Digital Banking Service

ದೇಶದ 1.55 ಲಕ್ಷ ಅಂಚೆ ಕಚೇರಿಗಳಿಗೆ ಭಾರತೀಯ ಅಂಚೆ ಪೇಮೆಂಟ್ ಬ್ಯಾಂಕ್ ಲಿಂಕ್ ಮಾಡಲು ಕೇಂದ್ರ ಹಣಕಾಸು ಸಚಿವಾಲಯ ಸಮ್ಮತಿಸಿದೆ. ಬ್ಯಾಂಕ್ ಗಳಲ್ಲಿರುವಂತೆ ಆರ್.ಟಿ.ಜಿ.ಎಸ್., ನೆಫ್ಟ್, ಸೇರಿದಂತೆ ಆನ್ ಲೈನ್ ಪೇಮೆಂಟ್ ಸೇವೆಗಳನ್ನು ಅಂಚೆ ಕಚೇರಿಯಲ್ಲಿಯೂ ಲಭ್ಯವಾಗಲಿದೆ. ಸದ್ಯ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಜಾರಿಯಲ್ಲಿದೆ.(ಪಿಟಿಐ)

English summary
Around 34 crore post office savings account holders will be able to avail a full-fledged digital banking service from May as the government has approved linking such accounts with that of India Post Payments Bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X