• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಶದಲ್ಲಿ ಜೂನ್ ತಿಂಗಳಿನಲ್ಲಿ ಉದ್ಯೋಗ ಸೃಷ್ಟಿ: ನೇಮಕಾತಿಯಲ್ಲಿ ಶೇಕಡಾ 33ರಷ್ಟು ಹೆಚ್ಚಳ

|

ನವದೆಹಲಿ, ಜುಲೈ 23: ದೇಶದಲ್ಲಿ ಕೊರೊನಾವೈರಸ್ ಸುದೀರ್ಘ ಲಾಕ್‌ಡೌನ್‌ದಿಂದಾಗಿ ಕೋಟ್ಯಾಂತರ ಉದ್ಯೋಗ ನಷ್ಟಕ್ಕೆ ಕಾರಣವಾಗಿದೆ. ಆದರೆ ಲಾಕ್‌ಡೌನ್ ತೆರವು ಆದ ಬಳಿಕ ಆರ್ಥಿಕತೆಯು ನಿಧಾನಗತಿಯಲ್ಲಿ ಚೇತರಿಕೆ ಕಾಣುತ್ತಿದ್ದು, ಉದ್ಯೋಗ ಮಾರುಕಟ್ಟೆಯಲ್ಲಿ ಹಸಿರು ಚಿಗುರೊಡೆಯತೊಡಗಿದೆ.

ಹೌದು, ಲಾಕ್‌ಡೌನ್ ಅವಧಿಯ ಬಳಿಕ ಒಟ್ಟಾರೆ ನೇಮಕಾತಿ ಚಟುವಟಿಕೆಯು ಚುರುಕುಗೊಂಡಿದ್ದು, ಜೂನ್‌ನಲ್ಲಿ ಅನುಕ್ರಮವಾಗಿ ಶೇಕಡಾ 33 ರಷ್ಟು ಹೆಚ್ಚಾಗಿದೆ.

ಶಿವಮೊಗ್ಗದಲ್ಲಿ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಿ

ನೌಕ್ರಿ ಜಾಬ್‌ಸ್ಪೀಕ್ ವರದಿಯ ಪ್ರಕಾರ ಕಠಿಣ ಉದ್ಯೋಗ ಮಾರುಕಟ್ಟೆಯ ಮಧ್ಯೆ ಆರು ಪ್ರಮುಖ ಕೈಗಾರಿಕೆಗಳಲ್ಲಿ ನೇಮಕ ಚಟುವಟಿಕೆಯು ವೇಗವನ್ನು ಪಡೆದುಕೊಂಡಿದೆ. ಇದು ಮಾಸಿಕ ಸೂಚ್ಯಂಕವಾಗಿದ್ದು, ನೌಕ್ರಿ.ಕಾಮ್ ವೆಬ್‌ಸೈಟ್ ತಿಂಗಳಲ್ಲಿ ಉದ್ಯೋಗ ಪಟ್ಟಿಗಳ ಆಧಾರದ ಮೇಲೆ ನೇಮಕ ಚಟುವಟಿಕೆಯನ್ನು ಲೆಕ್ಕಾಚಾರ ಮಾಡುತ್ತದೆ ಮತ್ತು ದಾಖಲಿಸುತ್ತದೆ.

ಫಾರ್ಮಾ ವಲಯದಲ್ಲಿ ಶೇಕಡಾ 27 ರಷ್ಟು ಏರಿಕೆ

ಫಾರ್ಮಾ ವಲಯದಲ್ಲಿ ಶೇಕಡಾ 27 ರಷ್ಟು ಏರಿಕೆ

ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಮುಂಚೂಣಿಯಲ್ಲಿರುವ ಫಾರ್ಮಾ ವಲಯವು ನೇಮಕ ಚಟುವಟಿಕೆಯಲ್ಲಿ ಕನಿಷ್ಠ ಪರಿಣಾಮ ಬೀರಿದೆ. ಮೇಗೆ ಹೋಲಿಸಿದರೆ ಜೂನ್‌ನಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಈ ವಲಯವು ಶೇಕಡಾ 27 ರಷ್ಟು ಗಣನೀಯ ಸುಧಾರಣೆ ಕಂಡಿದೆ. "ದೇಶಕ್ಕೆ ಔಷಧಿ ಸರಬರಾಜು ಕೇಂದ್ರವಾಗಿರುವ ಹೈದರಾಬಾದ್ ನಗರವು ಮತ್ತು ಕೊಲ್ಕತ್ತಾ ನಗರಗಳಲ್ಲಿ ಈ ವಲಯದ ನೇಮಕಾತಿ ಚಟುವಟಿಕೆಯಲ್ಲಿ ಕನಿಷ್ಠ ಕುಸಿತ ಕಂಡ ಎರಡು ನಗರಗಳಾಗಿವೆ" ಎಂದು ವರದಿ ಸೇರಿಸಲಾಗಿದೆ.

ಐಟಿ ಕ್ಷೇತ್ರದಲ್ಲೂ ಚುರುಕುಗೊಂಡ ಉದ್ಯೋಗ ನೇಮಕಾತಿ

ಐಟಿ ಕ್ಷೇತ್ರದಲ್ಲೂ ಚುರುಕುಗೊಂಡ ಉದ್ಯೋಗ ನೇಮಕಾತಿ

ಐಟಿ-ಸಾಫ್ಟ್‌ವೇರ್ ಕ್ಷೇತ್ರವು ದೇಶದ ಪ್ರಮುಖ ಉದ್ಯೋಗ ಸೃಷ್ಟಿಕರ್ತರಾಗಿ ಒಟ್ಟಾರೆ ನೇಮಕ ಚಟುವಟಿಕೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಕಳೆದ ವರ್ಷದಿಂದ ನೇಮಕಾತಿ ವಿಷಯದಲ್ಲಿ ಬಲವಾಗಿ ಬೆಳೆಯುತ್ತಿದ್ದ ಈ ವಲಯವು ಪ್ರಸ್ತುತ ಜಾಗತಿಕ ಬಿಕ್ಕಟ್ಟಿನ ವಿಷಯಕ್ಕೆ ಬಂದರೆ ಕಡಿಮೆ ಪರಿಣಾಮ ಬೀರುವ ಕ್ಷೇತ್ರಗಳಲ್ಲಿ ಒಂದಾಗಿದೆ.

ತ್ರೈಮಾಸಿಕದ ಕೊನೆಯ ತಿಂಗಳು(ಜೂನ್) ನೇಮಕಾತಿಯಲ್ಲಿ ಶೇಕಡಾ 19 ರಷ್ಟು ಏರಿಕೆ ಕಂಡಿದೆ. ದೆಹಲಿ-ಎನ್‌ಸಿಆರ್ ಮತ್ತು ಅಹಮದಾಬಾದ್ ಈ ವಲಯದ ಪುನರುಜ್ಜೀವನಕ್ಕೆ ಕಾರಣವಾದ ಎರಡು ನಗರಗಳು ಸಕಾರಾತ್ಮಕ ಅನುಕ್ರಮ ಬೆಳವಣಿಗೆಯನ್ನು ದಾಖಲಿಸಿದೆ ಎಂದು ವರದಿ ತಿಳಿಸಿದೆ.

ಬಿಪಿಓ/ಐಟಿಇಎಸ್ ಉದ್ಯಮದಲ್ಲಿ ಹೆಚ್ಚಿನ ಬೆಳವಣಿಗೆ

ಬಿಪಿಓ/ಐಟಿಇಎಸ್ ಉದ್ಯಮದಲ್ಲಿ ಹೆಚ್ಚಿನ ಬೆಳವಣಿಗೆ

ಹಿಂದಿನ ತಿಂಗಳು ಮತ್ತು ಜೂನ್‌ನಲ್ಲಿ ಬಿಪಿಓ / ಐಟಿಇಎಸ್ ಉದ್ಯಮವು ನೌಕ್ರಿ.ಕಾಂನಲ್ಲಿ ಉದ್ಯೋಗ ಪಟ್ಟಿಗಳಲ್ಲಿ ಶೇಕಡಾ 48 ರಷ್ಟು ಬೆಳವಣಿಗೆಯನ್ನು ಕಂಡಿದೆ, ಬೆಂಗಳೂರು ಮತ್ತು ಪುಣೆ ಚೇತರಿಕೆಯ ವೇಗದ ಸೂಚನೆಯನ್ನು ನೀಡಿದೆ.

ಅತ್ಯಂತ ಪ್ರತಿಕೂಲ ಪರಿಣಾಮ ಬೀರುವ ಕೈಗಾರಿಕೆಗಳಲ್ಲಿ ಒಂದಾಗಿರುವುದರಿಂದ ಬಿಪಿಓ/ಐಟಿಇಎಸ್ ನೇಮಕಾತಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆತಿಥ್ಯ ಮತ್ತು ಪ್ರಯಾಣದಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿತ್ತು. ಆದಾಗ್ಯೂ, ಅನ್ಲಾಕ್ 1.0 ಮೂಲಕ ಸಡಿಲಿಸುವಿಕೆಯು ಜೂನ್ ತಿಂಗಳಲ್ಲಿ ಶೇಕಡಾ 107 ರಷ್ಟು ಸುಧಾರಣೆಯನ್ನು ಸೂಚಿಸಿದೆ.

ಚಿಲ್ಲರೆ ಉದ್ಯಮದಲ್ಲಿ ಹೆಚ್ಚಿದ ವೇಗ

ಚಿಲ್ಲರೆ ಉದ್ಯಮದಲ್ಲಿ ಹೆಚ್ಚಿದ ವೇಗ

ನೌಕ್ರಿ.ಕಾಮ್ ಜಾಬ್‌ಸ್ಪೀಕ್ ವರದಿಯ ಪ್ರಕಾರ, ಸಾಂಕ್ರಾಮಿಕದ ಮಧ್ಯೆ ಹೆಚ್ಚು ಪ್ರಭಾವ ಬೀರಿದ ಮತ್ತೊಂದು ಉದ್ಯಮವೆಂದರೆ ಚಿಲ್ಲರೆ ಉದ್ಯಮ. ಈ ವಲಯವು ನೇಮಕಾತಿಯಲ್ಲಿ ಶೇಕಡಾ 77 ರಷ್ಟು ವೇಗವನ್ನು ಪಡೆದುಕೊಂಡಿದೆ ಮತ್ತು ಮುಂಬರುವ ತ್ರೈಮಾಸಿಕಗಳಲ್ಲಿ ಸುಧಾರಣೆಗಳನ್ನು ನಿರೀಕ್ಷಿಸಲಾಗಿದೆ.

English summary
India's overall hiring activity increased sequentially by 33 per cent in June. Hiring activity picked pace across six key industries amidst a tough job market as per the Naukri JobSpeak Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more