• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೊಕೊ ಎಕ್ಸ್ 3 ಮೊಬೈಲ್‌ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯತೆ ತಿಳಿದುಕೊಳ್ಳಿ

|

ನವದೆಹಲಿ, ಸೆಪ್ಟೆಂಬರ್ 22: ಶಿಯೋಮಿಯ ಮತ್ತೊಂದು ಬ್ರ್ಯಾಂಡ್ ಮೊಬೈಲ್ ಪೊಕೊ ಎಕ್ಸ್ 3 ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾದ ಪೊಕೊ ಎಕ್ಸ್ 2 ನಂತರ ಬಿಡುಗಡೆಯಾದ ಮೊಬೈಲ್ ರೂಪಾಂತರ ಇದಾಗಿದೆ.

ಪೊಕೊ ಎಕ್ಸ್ 3 ನ ಭಾರತೀಯ ರೂಪಾಂತರವು ಮೂರು ವಿಭಿನ್ನ RAM ಮತ್ತು ಸ್ಟೋರೇಜ್ ಹೊಂದಿರ್ದು ಮತ್ತು ಎರಡು ಬಣ್ಣ ಆಯ್ಕೆಗಳಲ್ಲಿ ಬರುತ್ತದೆ. ಇದು ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ.

ಅಗ್ಗದ ದರದ ಸ್ಮಾರ್ಟ್‌ಫೋನ್ ತರಲು ಅಂಬಾನಿ ಪ್ಲ್ಯಾನ್

ಪೊಕೊ ಎಕ್ಸ್ 3 ಬೆಲೆ 6 ಜಿಬಿ + 64 ಜಿಬಿ ಸ್ಟೋರೇಜ್ ಮಾದರಿಗೆ 16,999 ರೂ. ಆಗಿದೆ. 6 ಜಿಬಿ + 128 ಜಿಬಿ ಸ್ಟೋರೇಜ್ ಮಾದರಿಗೆ 18,499 ರೂ. ಬೆಲೆ ನಿಗದಿಯಾಗಿದೆ. ಇನ್ನು 8 ಜಿಬಿ + 128 ಜಿಬಿ ಸ್ಟೋರೇಜ್ ಹೊಂದಿರುವ ಟಾಪ್-ಟಯರ್ ವೇರಿಯಂಟ್ ಬೆಲೆ ರೂ. 19,999.

ಫೋನ್ ಎರಡು ಬಣ್ಣ ಆಯ್ಕೆಗಳಲ್ಲಿ ಬರಲಿದ್ದು, ಕೋಬಾಲ್ಟ್ ಬ್ಲೂ ಮತ್ತು ಶ್ಯಾಡೋ ಗ್ರೇ ಆಯ್ಕೆಯಿದೆ. ಇದು ಸೆಪ್ಟೆಂಬರ್ 29, ಮಧ್ಯಾಹ್ನ 12 ರಿಂದ (ಮಧ್ಯಾಹ್ನ) ಫ್ಲಿಪ್‌ಕಾರ್ಟ್‌ ಮೂಲಕ ಭಾರತದಲ್ಲಿ ಮಾರಾಟವಾಗಲಿದೆ.

ಪೊಕೊ ಎಕ್ಸ್‌ 3 ವೈಶಿಷ್ಟ್ಯತೆ:

ಆಂಡ್ರಾಯ್ಡ್ 10 ಆಧಾರಿತ ಡ್ಯುಯಲ್-ಸಿಮ್ (ನ್ಯಾನೊ) ಪೊಕೊ ಎಕ್ಸ್ 3 ಎಂಐಯುಐ 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋನ್ 6.67 ಇಂಚಿನ ಹೆಚ್‌ ಡಿಸ್‌ಪ್ಲೇ ಹೊಂದಿದ್ದು , 120Hz ರಿಫ್ರೆಶ್ ದರದೊಂದಿಗೆ 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು HDR10 ಪ್ರಮಾಣೀಕರಣವಾಗಿದೆ.

ಇದನ್ನು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನಿಂದ ರಕ್ಷಿಸಲಾಗಿದೆ. ಪೊಕೊ ಎಕ್ಸ್ 3 ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರ್ಯಾಗನ್ 732 ಜಿ ಎಸ್ಒಸಿ, ಅಡ್ರಿನೊ 618 ಜಿಪಿಯುನಿಂದ 8 ಜಿಬಿ ವರೆಗೆ ಎಲ್ಪಿಡಿಡಿಆರ್ 4 LPDDR4X RAM ಹೊಂದಿದೆ.

English summary
Poco X3 has been launched in India today through a virtual event that was livestreamed on the brand's social media platforms and YouTube.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X