ಹಗರಣದ ಆರೋಪ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಷೇರುಗಳು ಪತನ

Posted By:
Subscribe to Oneindia Kannada

ಮುಂಬೈ, ಫೆಬ್ರವರಿ 14: ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನ ಮುಂಬೈ ಬ್ರ್ಯಾಂಚ್ ನಲ್ಲಿ ಬಹುಕೋಟಿ ಹಗರಣದ ಪರಿಣಾಮವಾಗಿ ಬ್ಯಾಂಕಿನ ಷೇರುಗಳು ಬುಧವಾರದಂದು ಷೇರುಗಳು ಪತನವಾಗಿದೆ.

ಸರಿ ಸುಮಾರು 1771.69 ಮಿಲಿಯನ್‌ ಅಮೆರಿಕನ್ ಡಾಲರ್‌ ಅಕ್ರಮ ವಹಿವಾಟು ನಡೆದಿರುವ ಬಗ್ಗೆ ಈಗಾಗಲೇ ದೂರು ದಾಖಲಾಗಿದೆ. ಇದರ ಬೆನ್ನಲ್ಲೆ ಬ್ಯಾಂಕಿನ ಷೇರುಗಳು ಬಿಎಸ್ ಇ ಯಲ್ಲಿ ಆರಂಭಿಕ ವಹಿವಾಟಿನಲ್ಲೇ ಶೇ 5.9ರಷ್ಟು ಕುಸಿತ ಕಂಡಿತು. ಪಂಜಾಬಿನ ಷೇರುಗಳು 5.70ರು ಕಳೆದುಕೊಂಡು 155.95ರು ನಂತೆ ವಹಿವಾಟು ನಡೆಸಿತು.

PNB's share price down after fraudulent transaction detected in Mumbai branch

ಮುಂಬೈನ ಪಿಎನ್ ಬಿ ಬ್ಯಾಂಕ್‌ ಶಾಖೆಗಳಲ್ಲಿ ಅನಧಿಕೃತ ಹಾಗೂ ವಂಚನೆಯ ವಹಿವಾಟು ನಡೆದಿದ್ದು, ವಿದೇಶಿ ಗ್ರಾಹಕರಿಗೆ ಲಾಭಕೋಸ್ಕರ ಆಯ್ದ ಕೆಲ ಖಾತೆಗಳಿಗೆ ಹಣ ರವಾನೆಯಾಗಿದೆ ಎಂದು ಬಿಎಸ್ಇ ಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ತಿಳಿಸಿದೆ.

ಈಗಾಗಲೇ ಈ ವ್ಯವಹಾರ ಹಾಗೂ ಕೋಟ್ಯಧಿಪತಿ, ಆಭರಣ ವಿನ್ಯಾಸಕಾರ ನೀರವ್ ಮೋದಿ ವಿರುದ್ಧ ಸಿಬಿಐಗೆ ಎರಡು ದೂರು ನೀಡಲಾಗಿದೆ. ಬ್ಯಾಂಕ್ ವಹಿವಾಟಿನ ಬಗ್ಗೆ ಸೆಬಿ ಗೆ ಮಾಹಿತಿ ಸಲ್ಲಿಸಲಾಗಿದೆ ಎಂದು ಪಿಎನ್‌ಬಿ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: PNB's share price down
English summary
After a fraudulent transactions worth $ 1,771.7 million was detected in Punjab National Bank (PNB)'s Mumbai branch, the PSU bank's share price dipped by as much as 5.9 percent in early trade on Wednesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ