ಬಳಕೆದಾರರ ಪತ್ತೆಗೆ ಟ್ರೂ ಕಾಲರ್ ನಿಂದ ಟ್ರೂ ಎಸ್ಡಿಕೆ ಬಿಡುಗಡೆ

Posted By:
Subscribe to Oneindia Kannada

ಬೆಂಗಳೂರು, ಫೆ.18: ಟ್ರೂಕಾಲರ್ ಫ್ರೊಫೈಲ್ ಹಾಗೂ ಟ್ರೂಕಾಲರ್ ದೃಢೀಕೃತ ದೂರವಾಣಿ ಸಂಖ್ಯೆಗಳನ್ನು ಹೊಂದಿರುವ ಬಳಕೆದಾರರಿಗೆ ತೃತೀಯ ಪಕ್ಷದ(third party) ತಂತ್ರಾಂಶಗಳ ಜತೆಗೆ ಕಾರ್ಯನಿರ್ವಹಿಸಲು ಸಾಧ್ಯವಾಗಿಸುವಂಥ ಟ್ರೂಎಸ್ಡಿಕೆಯನ್ನು ಟ್ರೂಕಾಲರ್ ಗುರುವಾರ ಆರಂಭಿಸಿದೆ.

ಡೆವಲಪರ್ ಗಳಿಗೆ ಸೈನ್ ಅಪ್, ಬಳಕೆದಾರರ ಮಾಹಿತಿ ಅಪ್ ಗ್ರೇಡ್ ಮಾಡಲು ಅಥವಾ ಮೊಬೈಲ್ ಬಳಕೆದಾರರ ಅನುಮತಿ ಮೇರೆಗೆ ಮೊಬೈಲ್ ತಂತ್ರಾಂಶಗಳಲ್ಲಿರುವ ಮೊಬೈಲ್ ಫೋನ್ ಸಂಖ್ಯೆ ಆಧಾರಿತ ಮಾಹಿತಿಗಳ ದೃಢೀಕರಣಕ್ಕೆ ಈ ಸೇವೆಯನ್ನು ಬಳಸಬಹುದಾಗಿದೆ. ಇದು ನೋಂದಾಯಿತ ತೃತೀಯ ಪಕ್ಷದ ಆಂಡ್ರಾಯ್ಡ್ ತಂತ್ರಾಂಶಗಳಿಗೆ ಲಭ್ಯವಿರುವ ಇದು, ಬಳಕೆದಾರರ ದೃಢೀಕರಣ ಪ್ರಕ್ರಿಯೆಯ ತಂತ್ರಾಂಶಗಳನ್ನು ಸರಳೀಕರಣಕ್ಕಾಗಿರುವ 12 ಪಾಲುದಾರರೊಂದಿಗೆ ಆರಂಭಗೊಂಡಿದೆ.

ಆ ಪೈಕಿ ಅತಿ ಪ್ರಮುಖವಾದ ಭಾರತದ ಜನಪ್ರಿಯ ಪಾಲುದಾರರೆಂದರೆ ಕ್ವಿಕರ್, ಮೊಬಿಕ್ವಿಕ್, ರೆಡ್‍ಬಸ್, ಕಾರ್ ದೇಖೋ, ಭಾರತ್ ಮ್ಯಾಟ್ರಿಮೊನಿ.ಕಾಮ್, ಇಕ್ಸಿಗೊ, ಒಯೊ ರೂಮ್ಸ್, ಟು ದ ನ್ಯೂ ಡಿಜಿಟಲ್, ಫ್ರೆಶ್ ಮೆನು, ಟೆರ್ರಾ, ಕ್ಯಾಶ್ ಕೇರ್ ಮತ್ತು ಶಾಪ್ ಕ್ಲ್ಯೂಸ್.

ನಮ್ಮ ಬಳಕೆದಾರರಿಗೆ ಅವರ ಕರೆಗಳ ಬಗ್ಗೆ ಸಾಧ್ಯವಾದಷ್ಟೂ ಅಧಿಕ ಮಾಹಿತಿ ನೀಡಿ, ಆ ಮೂಲಕ ಅವರು ಅದನ್ನು ಅರ್ಥಪೂರ್ಣವಾಗಿ ಬಳಸುವಂತೆ ಮಾಡುವುದು ನಮ್ಮ ಉದ್ದೇಶ. [ಟ್ರೂ ಕಾಲರ್ ನ ಮೆಸೆಂಜರ್ ಎಂಬ 'ಸ್ಮಾರ್ಟ್' ಅಪ್ಲಿಕೇಷನ್]

ಈ ಪ್ರಕ್ರಿಯೆಯಲ್ಲಿ, ವಿಶೇಷವಾಗಿ ವೈಯಕ್ತಿಕ ಗುರುತುಗಳ ವಿಷ ಬಂದಾಗ ಮೊಬೈಲ್ ಸಂಖ್ಯೆಯ ಶಕ್ತಿ ಹಾಗೂ ಅಗತ್ಯದ ಬಗ್ಗೆ ತಮಗೆ ಅರಿವಾಗಿದೆ. ತೃತೀಯ ಪಕ್ಷದ ತಂತ್ರಾಂಶಗಳಿಗೆ ವಿಶ್ವಾಸಾರ್ಹ ದೃಢೀಕರಣ ಆಯ್ಕೆಯ ಅಧಿಕಾರ ಕೊಟ್ಟು, ಬಳಕೆದಾರರು ಅವರ ಮೊಬೈಲ್ ನಂಬರ್‍ಅನ್ನು ಗುರುತಾಗಿಸಿಕೊಂಡು ಅವರ ಆಯ್ಕೆಯ ತಂತ್ರಾಂಶಗಳನ್ನು ಬಳಸುವಂತೆ ಮಾಡುವುದು ತಮ್ಮ ಗುರಿ ಎಂದು ಟ್ರೂಕಾಲರ್ ನ ಸಹ ಸಂಸ್ಥಾಪಕ ಮತ್ತು ಚೀಫ್ ಸ್ಟ್ರಾಟೆಜಿ ಆಫೀಸರ್ ನಮಿ ಝರಿಂಘಲಂ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಂ ಬೋಸ್

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಿಯಂ ಬೋಸ್

ಡೈರೆಕ್ಟರ್ ವರ್ಲ್ಡ್ ವೈಡ್ ಡೆವಲಪರ್ ರಿಲೇಷನ್ಸ್ ಎಟ್ ಟ್ರೂಕಾಲರ್ ಅವರು, ಜಾಗತಿಕ ಮೊಬೈಲ್ ಕ್ಷೇತ್ರದಲ್ಲಿ ಬಳಕೆದಾರರನ್ನು ದೃಢೀಕರಿಸುವಾಗ ತಕ್ಷಣಕ್ಕೆ ದೂರವಾಣಿ ಸಂಖ್ಯೆಯು ವೈಯಕ್ತಿಕ ಪ್ರಾಥಮಿಕ ಗುರುತಾಗಿರುತ್ತದೆ. ಆನ್ ಬೋರ್ಡಿಂಗ್ ಯೂಸರ್ ಹಾಗೂ ಎಂಗೇಜ್ಮೆಂಟ್ ಫ್ರೆಂಡ್ಲಿ ಮಧ್ಯದ ಘರ್ಷಣೆ ತಗ್ಗಿಸಲು ದಾರಿ ಹುಡುಕುತ್ತಿರುತ್ತಾರೆ. ಅಭಿವೃದ್ಧಿಪಡಿಸುವವರ ಈ ಅಗತ್ಯವನ್ನು ನೀಗಿಸಿಕೊಳ್ಳಲು ಟ್ರೂ ಎಸ್ಡಿಕೆ ಅವಕಾಶ ನೀಡುತ್ತದೆ. ತಮ್ಮದೇ ವ್ಯವಸ್ಥೆ ನಿರ್ಮಿಸಿ ನಿರ್ವಹಿಸುವ ಬದಲು ಟ್ರೂಎಸ್ಡಿಕೆಯನ್ನು ಬಳಸಿ, ಅವರು ತಮ್ಮ ತಂತ್ರಾಂಶದ ಗಹನವಾದ ವಿಚಾರಗಳಿಗೆ ಗಮನ ನೀಡಬಹುದು.

ಟ್ರೂ ಎಸ್ಡಿಕೆಯಿಂದ ನೀವು ಪಡೆಯಬಹುದಾದ್ದು

ಟ್ರೂ ಎಸ್ಡಿಕೆಯಿಂದ ನೀವು ಪಡೆಯಬಹುದಾದ್ದು

ಫೋನ್ ನಂಬರ್ ಆಧಾರಿತ ಆನ್‍ಬೋರ್ಡಿಂಗ್ ಮತ್ತು ವೆರಿಫಿಕೇಷನ್.
- ಮುಕ್ತ ಬಳಕೆ ಹಾಗೂ ಅಸ್ತಿತ್ವದಲ್ಲಿರುವ ಟ್ರೂಕಾಲರ್ ಬಳಕೆದಾರರಿಗೆ ವೆರಿಫಿಕೇಷನ್ ಖರ್ಚು ತಗಲುವುದಿಲ್ಲ.
- ಆನ್ ಬೋರ್ಡಿಂಗ್ ಯೂಸರ್‍ನ ಘರ್ಷಣೆಯನ್ನು ಗಣನೀಯವಾಗಿ ತಗ್ಗಿಸುತ್ತದೆ.
- ಅನುಮತಿ ಆಧಾರಿತ ಹರಿವು.
- ಡೆವಲಪರ್ಸ್ ಬ್ಯಾಕೆಂಡ್ ನಲ್ಲಿ ಅಗತ್ಯವಿರುವ ಬದಲಾವಣೆ ಅತಿ ಕನಿಷ್ಠ.

ಅನುರಾಗ್ ಸರನ್, ಚೀಫ್ ಪ್ರಾಡಕ್ಟ್ ಆಫೀಸರ್, ಕ್ವಿಕರ್

ಅನುರಾಗ್ ಸರನ್, ಚೀಫ್ ಪ್ರಾಡಕ್ಟ್ ಆಫೀಸರ್, ಕ್ವಿಕರ್

ಭಾರತದ ಅತಿ ನಂಬುಗೆಯ ಬ್ರ್ಯಾಂಡ್ ಗಳಲ್ಲಿ ಒಂದಾದ ನಮಗೆ, ನಮ್ಮ ಸಂಸ್ಥೆ ಮೂಲಕ ವ್ಯವಹರಿಸುವ ಗ್ರಾಹಕರ ಭದ್ರತೆ ನಿರ್ಣಾಯಕ. ಟ್ರೂಕಾಲರ್ ದೊಡ್ಡ ಸಮುದಾಯವನ್ನೇ ಹೊಂದಿದೆ. ನಮ್ಮ ಮೊಬೈಲ್ ತಂತ್ರಾಂಶಗಳಲ್ಲಿ ಟ್ರೂಎಸ್ಡಿಕೆ ಸಮನ್ವಯದಿಂದ ಮೊಬೈಲ್ ನಂಬರ್ ದೃಢೀಕರಣ ತಿಕ್ಕಾಟ ತಗ್ಗುತ್ತದೆ. ಇದರಿಂದ ನಮ್ಮ ಗ್ರಾಹಕರಿಗೆ ಹೆಚ್ಚುವರಿ ಅನುಕೂಲ ಹಾಗೂ ಭದ್ರತೆ ನೀಡಿದಂತಾಗುತ್ತದೆ.

ಬಿಪಿನ್ ಸಿಂಗ್, ಸಂಸ್ಥಾಪಕ ಮತ್ತು ಸಿಇಒ, ಮೊಬಿಕ್ವಿಕ್

ಬಿಪಿನ್ ಸಿಂಗ್, ಸಂಸ್ಥಾಪಕ ಮತ್ತು ಸಿಇಒ, ಮೊಬಿಕ್ವಿಕ್

ಮೊಬಿಕ್ವಿಕ್ ನಲ್ಲಿ ಪ್ರತಿ ಹಂತದಲ್ಲೂ ಗ್ರಾಹಕರ ಅನುಭವ ಕೇಂದ್ರಿತವಾಗಿಯೇ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಟ್ರೂಕಾಲರ್‍ನ ಟ್ರೂಎಸ್ಡಿಕೆ ಸಮನ್ವಯದಿಂದ ನಮ್ಮ ತಂತ್ರಾಂಶದಲ್ಲಿನ ಅನೇಕ ಸಮಸ್ಯೆಗಳನ್ನು ಒಂದೇ ಗುಕ್ಕಿನಲ್ಲಿ ನಿವಾರಿಸಿಕೊಳ್ಳಲು ನೋಡಲಾಗುತ್ತಿದೆ. ಮೊಬಿಕ್ವಿಕ್‍ನಲ್ಲಿ ಸೈನ್ ಇನ್ ಮಾಡುವ ಗ್ರಾಹಕರು ಈಗ ಅವರ ಟ್ರೂಕಾಲರ್ ದೃಢೀಕೃತ ಫೋನ್ ನಂಬರ್ ಮೂಲಕ ಆಟೋ ಫಿಲ್ ಮೆಕಾನಿಸಂ ಪಡೆಯಬಹುದಾಗಿದೆ.

ಸಂಜಯ್ ಸೇಥಿ, ಸಿಇಒ ,ಸಹ ಸಸಂಸ್ಥಾಪಕ, ಶಾಪ್ ಕ್ಲ್ಯೂಸ್

ಸಂಜಯ್ ಸೇಥಿ, ಸಿಇಒ ,ಸಹ ಸಸಂಸ್ಥಾಪಕ, ಶಾಪ್ ಕ್ಲ್ಯೂಸ್

ಟ್ರೂಕಾಲರ್ ನ ಟ್ರೂ ಎಸ್ಡಿಕೆ ಜತೆ ಟೈ ಅಪ್ ಮಾಡಿಕೊಳ್ಳುವ ಮೂಲಕ ನಮ್ಮ ತಂತ್ರಾಂಶದಲ್ಲಿ ಬಳಕೆದಾರರ ನೋಂದಣಿಗೆ ದೃಢೀಕೃತ ಫೋನ್ ನಂಬರ್ ಗಳ ಬಳಕೆಗೆ ಮುಂದಾದ ಮೊದಲ ಸಂಸ್ಥೆ ಶಾಪ್ ಕ್ಲ್ಯೂಸ್. ಶಾಪ್ ಕ್ಲ್ಯೂಸ್ ಬಳಕೆದಾರರ ಪ್ರಯಾಣವನ್ನು ಸಾಧ್ಯವಾದಷ್ಟೂ ಮಟ್ಟಿಗೆ ಸರಳ ಹಾಗೂ ಸುಲಭಗೊಳಿಸುವ ಬದ್ಧತೆ ಹೊಂದಿದೆ. ಟ್ರೂಕಾಲರ್ ದೃಢೀಕೃತ ಫೋನ್ ನಂಬರ್ ಗಳ ದೃಢೀಕರಣದಿಂದ ಗ್ರಾಹಕರು ತಮ್ಮೊಂದಿಗೆ ಸಾಗಲು ತೋರುತ್ತಿರುವ ಒಲವು ಹೆಚ್ಚಾಗಿದೆ ಎಂಬುದು ಖಚಿತ.

ಅನುರಾಗ್ ಗಗ್ಗರ್, ಉಪಾಧ್ಯಕ್ಷ, ಓಯೋ ರೂಮ್ಸ್

ಅನುರಾಗ್ ಗಗ್ಗರ್, ಉಪಾಧ್ಯಕ್ಷ, ಓಯೋ ರೂಮ್ಸ್

ಟ್ರೂಎಸ್ಡಿಕೆ ದೃಢೀಕೃತ ಫೋನ್ ನಂಬರ್ ಆಧಾರಿತ ಸೈನ್ ಅಪ್/ಲಾಗಿನ್ ವ್ಯವಸ್ಥೆ ನೀಡುತ್ತಿರುವ ಪ್ರಥಮ ಪ್ರಮುಖ ಉತ್ಪನ್ನ. ಓಯೋ ರೂಮ್ಸ್ ನಲ್ಲಿ ಮೊಬೈಲ್ ಗೆ ಆದ್ಯತೆಯಾದ್ದರಿಂದ ಬಳಕೆದಾರರ ಖಾತೆ ರಚನೆಗೆ ಅವರ ಫೋನ್ ನಂಬರ್ ಗಳನ್ನು ಬಳಸುತ್ತಿದ್ದು, ಟ್ರೂಎಸ್ಡೀಕೆಯಿಂದಾಗಿ ಸೈನಿಂಗ್ ಅಪ್ ವೇಳೆ ಗ್ರಾಹಕರೊಂದಿಗಿನ ತಿಕ್ಕಾಟ ತಗ್ಗಿದೆ. ಟ್ರೂಕಾಲರ್ ಗೆ ಅಪಾರ ಬಳಕೆದಾರರು ಇರುವುದರಿಂದ ಈ ವ್ಯವಸ್ಥೆ ಬಹಳಷ್ಟು ಜನರಿಗೆ ಉಪಯುಕ್ತವಾಗಲಿದೆ.

ರಾಹುಲ್ ಯಾದವ್, ಡೈರೆಕ್ಟರ್- ಪ್ರಾಡಕ್ಟ್ಸ್, ಕಾರ್ ದೇಖೋ

ರಾಹುಲ್ ಯಾದವ್, ಡೈರೆಕ್ಟರ್- ಪ್ರಾಡಕ್ಟ್ಸ್, ಕಾರ್ ದೇಖೋ

ಕಾರ್ ದೇಖೋ ತನ್ನ ಬಳಕೆದಾರರಿಗೆ ನಯವಾದ ತಿಕ್ಕಾಟ ರಹಿತ ಅನುಭವ ನೀಡುವಲ್ಲಿ ನಂಬಿಕೆ ಇಟ್ಟಿದೆ. ಟ್ರೂಕಾಲರ್ ಜತೆ ಸಮನ್ವಯದ ಸಾಮರ್ಥ್ಯದಿಂದ ಬಳಕೆದಾರರು ಯೂಸರ್ ಫಾರ್ಮ್ ಗಳನ್ನು ಭರ್ತಿ ಮಾಡದೆ ಅಥವಾ ದೃಢೀಕರಣಕ್ಕಾಗಿ ಒಟಿಪಿ ನಮೂದಿಸದೆ ಅಧಿಕೃತ ಮಾಹಿತಿ ಪಡೆಯಲು ಸಾಧ್ಯವಾಗಿದೆ. ಇಂಥ ಉತ್ತಮ ಉಪಕ್ರಮಗಳನ್ನು ಗ್ರಾಹಕರು ಸ್ವೀಕರಿಸುತ್ತಾರೆ ಎಂಬ ವಿಶ್ವಾಸ ನಮ್ಮದು.

ಕೃಷ್ಣನ್ ರಾಮಸ್ವಾಮಿ, ಹೆಡ್ ಆಫ್ ಪ್ರಾಡಕ್ಟ್ಸ್, ರೆಡ್ ಬಸ್

ಕೃಷ್ಣನ್ ರಾಮಸ್ವಾಮಿ, ಹೆಡ್ ಆಫ್ ಪ್ರಾಡಕ್ಟ್ಸ್, ರೆಡ್ ಬಸ್

ದೃಢೀಕೃತ ಫೋನ್ ನಂಬರ್ ಗಳನ್ನು ಹೊಂದಿರುವ ಗ್ರಾಹಕರಿರುವ ಟ್ರೂ ಕಾಲರ್ ಜತೆ ಪಾಲುದಾರಿಕೆ ಹೊಂದಲು ನಾವು ಅಪಾರ ಹರ್ಷ ವ್ಯಕ್ತಪಡಿಸುತ್ತಿದ್ದೇವೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ಮೊಬೈಲ್ ಕ್ಷೇತ್ರದಲ್ಲಿನ ವೈಯಕ್ತೀಕರಣ ನಮ್ಮ ಯಶಸ್ಸಿನ ಕೀಲಿ ಹಾಗೂ ವೈಯಕ್ತೀಕರಣದ ಅಗತ್ಯವಿರುವ ಸೈನ್ ಅಪ್ ಪ್ರಕ್ರಿಯೆ ಸುಲಭಗೊಳಿಸುವಲ್ಲಿ ನಮ್ಮ ಈ ಪಾಲುದಾರಿಕೆ ನೆರವಾಗಲಿದೆ ಎಂಬ ದೃಢ ವಿಶ್ವಾಸ ನಮ್ಮದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At a press conference in Bengaluru on Thursday(Feb 18), phone directory app Truecaller announced the launch of TrueSDK, which enables third-party app users to sign up with their Truecaller profile and also verify their phone numbers.
Please Wait while comments are loading...