PF Claim: ಪಿಎಫ್ ವಿತ್‌ಡ್ರಾ ಪ್ರಕ್ರಿಯೆ ಮತ್ತಷ್ಟು ಸುಲಭ: ಇಲ್ಲಿದೆ ವಿವರ
PF Claim: ನೌಕರರಿಗೆ ಕಷ್ಟ ಕಾಲದಲ್ಲಿ ಆಗುವ ನಿಧಿ ಅಂದ್ರೆ ಪಿಎಫ್ ಆಗಿದೆ. ಇದನ್ನು ಕ್ಲೈಮ್ ಮಾಡಲು ಹಲವು ವಿಧಾನಗಳನ್ನು ಅನುಸರಿಸಬೇಕಿದೆ. ಹಾಗಾದ್ರೆ ಇದನ್ನು ಬಿಡಿಸಲು ಸರಳ ಮಾರ್ಗಗಳ ವಿವರವನ್ನು ಇಲ್ಲಿ ನೀಡಲಾಗಿದೆ. ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭವಿಷ್ಯ ನಿಧಿಯ ಮೊತ್ತವನ್ನು ಹಿಂತೆಗೆದುಕೊಳ್ಳಲು ಬಯಸಿ ಆನ್ಲೈನ್ನಲ್ಲಿ ಸಲ್ಲಿಕೆ ಮಾಡಲಾಗುವ ಅರ್ಜಿಗಳಿಗೆ ಸಂಬಂಧಿಸಿದಂತೆ ಇನ್ಮುಂದೆ ಕ್ಯಾನ್ಸೆಲ್ಡ್ ಚೆಕ್ ಅಪ್ಲೋಡ್ ಮಾಡುವುದು, ಉದ್ಯೋಗದಾತ ಕಂಪನಿಗಳ ಮೂಲಕ ಬ್ಯಾಂಕ್ ಖಾತೆ ಪರಿಶೀಲಿಸುವುದು ಇರುವುದಿಲ್ಲ ಎಂದು ಕಾರ್ವಿುಕರ ಭವಿಷ್ಯ ನಿಧಿ ಸಂಸ್ಥೆ ತಿಳಿಸಿದೆ.

ಭವಿಷ್ಯ ನಿಧಿಯ ಮೊತ್ತವನ್ನು ಹಿಂತೆಗೆದುಕೊಳ್ಳಲು ಬಯಸಿ ಆನ್ಲೈನ್ನಲ್ಲಿ ಸಲ್ಲಿಕೆ ಮಾಡಲಾಗುವ ಅರ್ಜಿಗಳಿಗೆ ಸಂಬಂಧಿಸಿದಂತೆ ಇನ್ಮುಂದೆ ಕ್ಯಾನ್ಸೆಲ್ಡ್ ಚೆಕ್ ಅಪ್ಲೋಡ್ ಮಾಡುವುದು, ಉದ್ಯೋಗದಾತ ಕಂಪನಿಗಳ ಮೂಲಕ ಬ್ಯಾಂಕ್ ಖಾತೆ ಪರಿಶೀಲಿಸುವುದು ಇರುವುದಿಲ್ಲ ಎಂದು ಕಾರ್ವಿುಕರ ಭವಿಷ್ಯ ನಿಧಿ ಸಂಸ್ಥೆ ತಿಳಿಸಿದೆ.
ಇದರಿಂದ ಕ್ಲೇಮ್ ಇತ್ಯರ್ಥ ಪ್ರಕ್ರಿಯೆ ಬೇಗ ಮುಗಿಯಲಿದೆ. ಅಲ್ಲದೆ ಉದ್ಯೋಗದಾತ ಕಂಪನಿಗಳಿಗೂ ಹೊರೆ ಕಡಿಮೆ ಆದಂತಾಗಲಿದೆ. ಇದೀಗ ಆನ್ಲೈನ್ನಲ್ಲಿ ಕ್ಲೇಮ್ ಅರ್ಜಿ ಸಲ್ಲಿಸುವವರು ಯುಎಎನ್ ಜೊತೆ ಸೀಡ್ ಆದ ತಮ್ಮ ಬ್ಯಾಂಕ್ ಪಾಸ್ಬುಕ್ನ ದೃಢೀಕೃತ ಛಾಯಾಪ್ರತಿ ಮತ್ತು ಚೆಕ್ ಹಾಳೆಯ ಫೋಟೋ ಅಪ್ಲೋಡ್ ಮಾಡುವುದು ಕಡ್ಡಾಯ ಮಾಡಲಾಗಿದೆ.
ಅರ್ಜಿದಾರರ ಬ್ಯಾಂಕ್ ಖಾತೆಯಲ್ಲಿ ಇರುವ ವಿವರಗಳು ಸರಿ ಇವೆಯೇ ಎಂಬುದಾಗಿ ಉದ್ಯೋಗದಾತರು ದೃಢಪಡಿಸಬೇಕಾಗುತ್ತದೆ. ಇದರಿಂದ ಕ್ಲೇಮ್ ತಿರಸ್ಕಾರದ ದೂರುಗಳು ಕಡಿಮೆ ಆಗಲಿವೆ, ಕ್ಲೇಮ್ ಇತ್ಯರ್ಥದ ಪ್ರಕ್ರಿಯೆಯೂ ಸರಳ ಆಗಲಿದೆ ಎಂದು ಕಾರ್ವಿುಕ ಇಲಾಖೆ ಪ್ರಕಟಣೆ ತಿಳಿಸಿದೆ.
ಇದನ್ನು ಕೆವೈಸಿ ಇಂದೀಕರಣವಾದ ಕೆಲವು ಸದಸ್ಯರಿಗೆ ಪ್ರಾಯೋಗಿಕವಾಗಿ 2024ರ ಮೇ 28ರಿಂದ ಜಾರಿಗೊಳಿಸಲಾಗಿತ್ತು. ಇದರಿಂದ 1.7 ಕೋಟಿ ಸದಸ್ಯರಿಗೆ ಪ್ರಯೋಜನವಾಗಿದೆ. ಪ್ರಾಯೋಗಿಕ ಉಪಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ಎಲ್ಲರಿಗೂ ವಿಸ್ತರಿಸಲಾಗಿದೆ ಎಂದು ವಿವರಿಸಿದೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ನಾಮನಿರ್ದೇಶಿತರ ಹೆಸರು ಸೇರ್ಪಡೆಗೆ ಅಥವಾ ಇಂದುಗೊಳಿಸುವಿಕೆಗೆ ಯಾವುದೇ ಶುಲ್ಕ ಇರುವುದಿಲ್ಲ. ಈ ಸಂಬಂಧ ಅಧಿಸೂಚನೆಗೆ ಸೂಕ್ತ ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಹಣಕಾಸು ಸಂಸ್ಥೆಗಳು ಈ ಕಾರ್ಯಕ್ಕೆ 50 ರೂ. ಶುಲ್ಕ ಆಕರಿಸುತ್ತಿವೆ ಎಂದು ಇತ್ತೀಚೆಗೆ ವರದಿ ಆಗಿತ್ತು. ಆದ್ದರಿಂದ ಸರ್ಕಾರದ ಉಳಿತಾಯ ಉತ್ತೇಜನ ಸಾಮಾನ್ಯ ನಿಯಮಾವಳಿ 2018ಕ್ಕೆ 2025ರ ಏಪ್ರಿಲ್ 2ರಂದು ರಾಜ್ಯಪತ್ರದ ಮೂಲಕ ತಿದ್ದುಪಡಿ ಮಾಡಿ ಶುಲ್ಕ ಆಕರಿಸುವುದನ್ನು ನಿಲ್ಲಿಸಲಾಗಿದೆ ಎಂದು ಅವರು ಸಾಮಾಜಿಕ ಜಲಾತಾಣದ ಭಾಗವಾದ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಸಂಸತ್ನಲ್ಲಿ ಅಂಗೀಕಾರ ಪಡೆದಿರುವ ಬ್ಯಾಂಕಿಂಗ್ ತಿದ್ದುಪಡಿ ವಿಧೇಯಕ 2025ರ ಪ್ರಕಾರ ಠೇವಣಿದಾರರ ಹಣ, ಸೇಫ್ ಕಸ್ಟಡಿ ಅಥವಾ ಲಾಕರ್ಗಳಲ್ಲಿ ಇಟ್ಟಿರುವ ವಸ್ತುಗಳನ್ನು ಪಡೆಯಲು ನಾಲ್ವರನ್ನು ನಾಮನಿರ್ದೇಶನ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.












Click it and Unblock the Notifications