ಜಿಎಸ್ ಟಿ ಅಡಿಯಲ್ಲಿ ಪೆಟ್ರೋಲ್ ಬಂದರೆ ಲೀಟರ್ ಗೆ ಬರೀ 38 ರುಪಾಯಿ

Posted By:
Subscribe to Oneindia Kannada

ಮುಂಬೈನಲ್ಲಿ ಪೆಟ್ರೋಲ್ ದರ ರು. 80 ಇದ್ದರೆ, ದೆಹಲಿಯಲ್ಲಿ ರು.70 ಇದೆ. ಮೂರು ವರ್ಷದಲ್ಲೇ ಗರಿಷ್ಠ ಮಟ್ಟಕ್ಕೆ ಈ ಬೆಲೆಗಳು ತಲುಪಿವೆ. ಒಂದು ವೇಳೆ ಪೆಟ್ರೋಲ್- ಡೀಸೆಲ್ ಅನ್ನು ಕೂಡ ಜಿಎಸ್ ಟಿ ಅಡಿಯಲ್ಲೇ ತಂದುಬಿಟ್ಟರೆ ಏನಾಗುತ್ತದೆ ಗೊತ್ತೆ?

ಪೆಟ್ರೋಲ್ ದರ ಏರಿಕೆ, ಹಳೆ ನಿಯಮ ಮತ್ತೆ ಜಾರಿಗೆ ತರಲು ಚಿಂತನೆ

ಒಂದು ಉದಾಹರಣೆ ಕೇಳಿ. ದೆಹಲಿಯಲ್ಲಿ ಸದ್ಯಕ್ಕೆ ಪೆಟ್ರೋಲ್ ದರ ರು.70 ಇದೆ. ಜಿಎಸ್ ಟಿ ಜಾರಿಗೆ ತಂದು ಅದಕ್ಕೆ 12ರ ದರದಲ್ಲಿ ತೆರಿಗೆ ವಿಧಿಸಿದರೆ ರು.38.10 ಆಗುತ್ತದೆ. 2014ರ ಆಗಸ್ಟ್ ನಲ್ಲಿ ದೆಹಲಿಯಲ್ಲಿ ಪೆಟ್ರೋಲ್ ದರ ರು.70 ಆಗಿತ್ತು. ಆಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ಕಚ್ಚಾ ತೈಲ ದರ 98 ಅಮೆರಿಕನ್ ಡಾಲರ್ ಇತ್ತು. ಈಗ ಬ್ಯಾರಲ್ ದರ 50 ಅಮೆರಿಕನ್ ಡಾಲರ್ ಆಸುಪಾಸಿನಲ್ಲಿದೆ.

ಮೂರು ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದ ಪೆಟ್ರೋಲ್ ದರ

ಆದರೂ ಪೆಟ್ರೋಲ್- ಡೀಸೆಲ್ ದರ ಏಕಿಷ್ಟು ದುಬಾರಿ ಗೊತ್ತೆ? ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅವರು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ರಿಫೈನರಿಗಳಿಂದ ಪೆಟ್ರೋಲ್ ಖರೀದಿಸುವುದು ರು. 26.65ಕ್ಕೆ. ಇನ್ನು ಡೀಲರ್ ಗಳಿಗೆ ಅದನ್ನು ತಲುಪಿಸುವುದು ರು.30.70ಕ್ಕೆ. ಆದರೆ ಗ್ರಾಹಕರಿಗೆ ಮಾರುವುದು ರು. 70.39ಕ್ಕೆ. ಅಂದರೆ ಉಳಿದ ರು.39.41 ವಿವಿಧ ತೆರಿಗೆಗಳು. ಇದು ದೆಹಲಿಯಲ್ಲಿನ ದರ.

ಪೆಟ್ರೋಲಿಯಂ ಉತ್ಪನ್ನಗಳಿಗೆ ವ್ಯಾಟ್

ಪೆಟ್ರೋಲಿಯಂ ಉತ್ಪನ್ನಗಳಿಗೆ ವ್ಯಾಟ್

ಜಿಎಸ್ ಟಿಯಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊರಗಿಟ್ಟಿರುವುದರಿಂದ ಅಲ್ಲಿನ್ನೂ ವ್ಯಾಟ್ ಜಾರಿಯಲ್ಲಿದೆ. ದೆಹಲಿಯಲ್ಲಿ ವ್ಯಾಟ್ ಶೇ 27ರಷ್ಟಿದ್ದರೆ, ಮುಂಬೈ, ಥಾಣೆ ಹಾಗೂ ನವೀ ಮುಂಬೈನಲ್ಲಿ ಈ ಪ್ರಮಾಣ ಶೇ 47.64ರಷ್ಟಿದೆ.

2014ರ ನವೆಂಬರ್ ನಿಂದ ಏರುತ್ತಲೇ ಇದೆ

2014ರ ನವೆಂಬರ್ ನಿಂದ ಏರುತ್ತಲೇ ಇದೆ

ಕೇಂದ್ರದಿಂದ ವಿಧಿಸುವ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು 2014ರ ನವೆಂಬರ್ ನಿಂದ ಈಚೆಗೆ ಶೇ 54ರಷ್ಟು ಏರಿಸಲಾಗಿದೆ. ಇನ್ನು ವ್ಯಾಟ್ ಅನ್ನು ಶೇ 46ರಷ್ಟು ಹೆಚ್ಚಿಸಲಾಗಿದೆ. ಆ ಮೇಲೆ ಡೀಲರ್ ಗಳ ಕಮೀಷನ್ ಶೇ 73ರವರೆಗೆ ಹೆಚ್ಚಳವಾಗಿದೆ.

12 ಬಾರಿ ಅಬಕಾರಿ ಸುಂಕ ಪರಿಷ್ಕರಣೆ

12 ಬಾರಿ ಅಬಕಾರಿ ಸುಂಕ ಪರಿಷ್ಕರಣೆ

ಇನ್ನು ಡೀಸೆಲ್ ಬಗ್ಗೆ ಹೇಳುವುದಾದರೆ ಅಬಕಾರಿ ಸುಂಕ ಶೇ 154ರಷ್ಟು ಹೆಚ್ಚಳವಾಗಿದೆ. ವ್ಯಾಟ್ ಶೇ 48ರಷ್ಟು ಮತ್ತು ಡೀಲರ್ ಕಮೀಷನ್ ಶೇ 73ರಷ್ಟು ಹೆಚ್ಚಳವಾಗಿದೆ. ಒಟ್ಟಾರೆಯಾಗಿ 2014ರಿಂದ ಈಚೆಗೆ 12 ಬಾರಿ ಅಬಕಾರಿ ಸುಂಕದ ಪರಿಷ್ಕರಣೆಯಾಗಿದೆ.

ಕೇಂದ್ರ-ರಾಜ್ಯ ಸರಕಾರದ ತೆರಿಗೆ ನೀತಿ

ಕೇಂದ್ರ-ರಾಜ್ಯ ಸರಕಾರದ ತೆರಿಗೆ ನೀತಿ

ಕೇಂದ್ರ-ರಾಜ್ಯ ಸರಕಾರಗಳು ಹೇರಿರುವ ತೆರಿಗೆ ಪರಿಣಾಮವಾಗಿ ಪೆಟ್ರೋಲ್ ಹಾಗೂ ಡೀಸೆಲ್ ದರ ಮೂರು ವರ್ಷದ ಹಿಂದಿನ ಮಟ್ಟಕ್ಕೆ ತಲುಪಿವೆ. ಆದರೆ ಕಚ್ಚಾ ತೈಲ ದರ ಆಗಿನ ಮಟ್ಟಕ್ಕೆ ಅರ್ಧಕ್ಕಿಂತ ಸ್ವಲ್ಪ ಹೆಚ್ಚಿದೆ.

ಈ ರೀತಿ ಮಾಡಿದರೆ ಆದಾಯ ಹೆಚ್ಚಲೇ ಬೇಕಲ್ವ?

ಈ ರೀತಿ ಮಾಡಿದರೆ ಆದಾಯ ಹೆಚ್ಚಲೇ ಬೇಕಲ್ವ?

ಆ ಕಾರಣದಿಂದಲೇ ಈ ಅವಧಿಯಲ್ಲಿನ ಪೆಟ್ರೋಲಿಯಂ ವಸ್ತುಗಳ ಮೇಲಿನ ಆದಾಯ ಹೆಚ್ಚಳವಾಗಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. 2014-15ರಲ್ಲಿ 3.32 ಲಕ್ಷ ಕೋಟಿಯಷ್ಟಿದ್ದ ಆದಾಯವು 2016-17ರಲ್ಲಿ 5.24 ಲಕ್ಷ ಕೋಟಿಗೆ ಹೆಚ್ಚಳವಾಗಿದೆ.

ಜಿಎಸ್ ಟಿ ಜಾರಿಗೆ ಬಂದರೆ ಪೆಟ್ರೋಲ್ ಬೆಲೆ ಎಷ್ಟಾಗುತ್ತದೆ?

ಜಿಎಸ್ ಟಿ ಜಾರಿಗೆ ಬಂದರೆ ಪೆಟ್ರೋಲ್ ಬೆಲೆ ಎಷ್ಟಾಗುತ್ತದೆ?

ಪೆಟ್ರೋಲಿಯಂ ಉತ್ಪನ್ನಗಳು ಜಿಎಸ್ ಟಿ ಅಡಿಯಲ್ಲಿ ಬಂದರೆ ಏನಾಗುತ್ತದೆ ಅಂದರೆ, ಅಲ್ಲಿ 0, 5, 12, 28 ಹೀಗೆ ನಾಲ್ಕು ವರ್ಗೀಕರಣವಿದೆ. ಶೇ 12ಕ್ಕಿಂತ ಕಡಿಮೆ ತೆರಿಗೆ ಅಡಿಯಲ್ಲಿ ಪೆಟ್ರೋಲ್-ಡೀಸೆಲ್ ತರಲು ಸಾಧ್ಯವಿಲ್ಲ. ಹಾಗೆ ಶೇ 12ರ ಲೆಕ್ಕ ಹಾಕಿದರೆ ದೆಹಲಿಯಲ್ಲಿನ ಪೆಟ್ರೋಲ್ ಬೆಲೆ ರು.38.1 ಆಗುತ್ತದೆ. ಅಂದರೆ ಈಗಿನ ದರಕ್ಕಿಂತ ರು.32 ಕಡಿಮೆ. ಶೇ 18ರಷ್ಟಾದರೆ ರು.40.05, ಶೇ 28ರಷ್ಟು ವಿಧಿಸಿದರೆ ರು.43.44 ಆಗುತ್ತದೆ.

ಇನ್ನು ಎಸ್ ಯುವಿ ವಾಹನಗಳಿಗೆ ವಿಧಿಸುವ ಸೆಸ್ ಸೇರಿಕೊಂದು ಶೇ 28ರಷ್ಟು ಜಿಎಸ್ ಟಿ ಹಾಕಿದರೂ ರು.50.91 ಆಗುತ್ತದೆ. ಆಗಲೂ ಈಗಿರುವ ಪೆಟ್ರೋಲ್ ದರಕ್ಕಿಂತ 20 ರುಪಾಯಿ ಕಡಿಮೆ ಆಗುತ್ತದೆ.

ಡೀಸೆಲ್ ಲೆಕ್ಕಾಚಾರ ಹೀಗಿದೆ

ಡೀಸೆಲ್ ಲೆಕ್ಕಾಚಾರ ಹೀಗಿದೆ

ಇನ್ನು ಡೀಸೆಲ್ ವಿಚಾರಕ್ಕೆ ಬಂದರೆ, ದೆಹಲಿಯಲ್ಲಿ ಡೀಸೆಲ್ ದರ ರು.58.72 ಇದೆ. ಶೇ 12ರಷ್ಟು ಜಿಎಸ್ ಟಿ ಹಾಕಿದರೆ ರು.36.65 ಆಗುತ್ತದೆ. ಶೇ 18ರ ಜಿಎಸ್ ಟಿಗೆ ರು.38.61 , ಶೇ 28ಕ್ಕೆ ರು. 48.88 ಆಗುತ್ತದೆ. ಒಂದು ವೇಳೆ ಎಸ್ ಯುವಿ ಸೆಸ್ ಹಾಕಿದರೂ ದರ ರು.49.08 ಆಗುತ್ತದೆ. ಅಲ್ಲಿಗೂ ಸದ್ಯದ ದರಕ್ಕಿಂತ ರು.9.64 ಕಡಿಮೆಯಾಗುತ್ತದೆ.

ಜಿಎಸ್ ಟಿ ಕೌನ್ಸಿಲ್ ನಿರ್ಧರಿಸಬೇಕು

ಜಿಎಸ್ ಟಿ ಕೌನ್ಸಿಲ್ ನಿರ್ಧರಿಸಬೇಕು

ಆದರೆ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಅಡಿಯಲ್ಲಿ ತರುವುದಕ್ಕೆ ರಾಜಕಾರಣ ಅಡ್ಡಿ ಮಾಡುತ್ತಿದೆ. ಈ ನಿರ್ಧಾರ ತೆಗೆದುಕೊಳ್ಳಬೇಕಿದ್ದರೆ ಜಿಎಸ್ ಟಿ ಕೌನ್ಸಿಲ್ ನಿಂದ ಆಗಬೇಕು. ಆದರೆ ರಾಜ್ಯಗಳು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕಳೆದುಕೊಳ್ಳಲು ಸಿದ್ಧವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"The Petroleum products inclusion in GST only way for rational fuel prices," tweeted Dharmendra Pradhan as the petroleum prices reached three-year high. Bringing petroleum products under the GST regime will make the fuels cheaper.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ