ಪೆಟ್ರೋಲ್ ದರ ತುಸು ಏರಿಕೆ, ಎಲ್ಲೆಲ್ಲಿ ಎಷ್ಟಿದೆ ಬೆಲೆ?
ಬೆಂಗಳೂರು, ಸೆ.1: ಸೋಮವಾರಂದು ಯಾವುದೇ ಬದಲಾವಣೆ ಕಾಣದಿದ್ದ ಪೆಟ್ರೋಲ್ ದರದಲ್ಲಿ ಮಂಗಳವಾರದಂದು ತುಸು ಏರಿಕೆ ಕಂಡಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 82.03 ರು ನಿಂದ 82.08ರುಗೇರಿದೆ. ಡೀಸೆಲ್ ದರ ಬಹುದಿನಗಳಿಂದ 73.56ರು ನಂತೆ ಮುಂದುವರೆದಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
Recommended Video
ದೆಹಲಿಯಲ್ಲಿ ಒಟ್ಟಾರೆ ಕಳೆದ 18 ದಿನಗಳಲ್ಲಿ 15 ದಿನಗಳ ಕಾಲ ಪೆಟ್ರೋಲ್ ಏರಿಕೆ ಕಂಡು ಸುಮಾರು 1.64 ರು ಏರಿಕೆಯಾಗಿತ್ತು. ಒಟ್ಟಾರೆ, ಸೆಪ್ಟೆಂಬರ್ 01ರಂದು ಪ್ರಮುಖ ನಗರಗಳಲ್ಲಿ 4 ರಿಂದ 5 ಪೈಸೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆ ಕಾಣುತ್ತಿದ್ದು, ಬ್ರೆಂಟ್ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಬೆಲೆ 44. 87 ಯುಎಸ್ ಡಾಲರ್ ನಷ್ಟಿದೆ.

ಸೆಪ್ಟೆಂಬರ್ 01ರ ದರ ಪಟ್ಟಿ ಪೆಟ್ರೋಲ್ ಹಾಗೂ ಡೀಸೆಲ್ (ಪ್ರತಿ ಲೀಟರ್, ಬೆಲೆ ರು ಗಳಲ್ಲಿ)
ನಗರ-ಪೆಟ್ರೋಲ್-ಡೀಸೆಲ್
ದೆಹಲಿ-82.08-73.56
ಕೋಲ್ಕತಾ-83.57-77.06
ಮುಂಬೈ-88.73-80.11
ಚೆನ್ನೈ-85.04-78.86
ಬೆಂಗಳೂರು-84.75-77.88
ಡೀಸೆಲ್ ಬೆಲೆ ಬದಲಾಗಿಲ್ಲ:
ಕಳೆದ 20 ದಿನಗಳಿಂದ ದೆಹಲಿಯಲ್ಲಿ ಡೀಸೆಲ್ ಬೆಲೆ ಬದಲಾಗಿಲ್ಲ. ಪ್ರತಿ ಲೀಟರ್ ಗೆ 73.56 ರು ನಷ್ಟೇ ಇದೆ. ಜುಲೈ 31ರಂದು 8 ರು ಕುಸಿತ ಕಂಡಿತ್ತು. ಕೇಜ್ರಿವಾಲ್ ಸರ್ಕಾರ ವ್ಯಾಟ್ ಇಳಿಸಿದ್ದರ ಪರಿಣಾಮವಿದು. ಮಿಕ್ಕಂತೆ ಮುಂಬೈನಲ್ಲಿ ಪ್ರತಿ ಲೀಟರ್ ಬೆಲೆ 80.11 ರು , ಚೆನ್ನೈನಲ್ಲಿ 78.86ರು, ಕೋಲ್ಕತಾದಲ್ಲಿ 77.06 ರು ನಷ್ಟಿದೆ. ಬೆಂಗಳೂರಲ್ಲಿ ಸೋಮವಾರದಂದು 28 ಪೈಸೆ ಇಳಿಕೆಯಾಗಿ 77.88 ರು ಆಗಿತ್ತು. ಮಂಗಳವಾರ ಯಾವುದೇ ಬದಲಾವಣೆಯಾಗಿಲ್ಲ.
ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿನ ಇಂಧನ ದರ ಎಷ್ಟಿದೆ ತಿಳಿದುಕೊಳ್ಳಲು ಕ್ಲಿಕ್ ಮಾಡಿ












Click it and Unblock the Notifications