ಪೆಟ್ರೋಲ್, ಡೀಸೆಲ್ ದರದಲ್ಲಿ ಕೊಂಚ ಇಳಿಕೆ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 15: ಪೆಟ್ರೋಲ್, ಡೀಸೆಲ್ ಇಂಧನ ದರದಲ್ಲಿ ಸ್ವಲ್ಪಮಟ್ಟಿಗೆ ತಗ್ಗಿಸಲಾಗಿದೆ. ಪರಿಷ್ಕೃತ ದರಗಳು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪ್ರಕಟಿಸಿವೆ.

ಪೆಟ್ರೋಲ್ ದರ ಪ್ರತಿ ಲೀಟರ್ ಗೆ 74 ಪೈಸೆ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 1.30 ರುಪಾಯಿ ಇಳಿಕೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಇಳಿಕೆಯಾದ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂಧನ ಬೆಲೆ ಇಳಿಸಲಾಗಿದೆ.

Petrol price cut by 74 paisa, diesel by Rs 1.30 a litre

ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ದರ ಪ್ರತಿ ಲೀಟರ್ ಗೆ ರು.61.87 ಇದೆ ಹಾಗೂ ಡೀಸೆಲ್ ದರ ರು.49.31 ಇದೆ. ಬೆಂಗಳೂರು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಇಂಧನ ದರದಲ್ಲಿ ವ್ಯತ್ಯಾಸ ಕಂಡು ಬರಲಿದೆ. ರಾಜ್ಯಗಳ ಸೆಸ್ ಇನ್ನಿತರ ತೆರಿಗೆ ಸೇರಿಸುವುದರಿಂದ ದೆಹಲಿ ಸೇರಿದಂತೆ ಇತರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಬೆಲೆ ಅಧಿಕವಾಗಿರುತ್ತದೆ.

ಮಾರ್ಚ್ 16ರಂದು ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಬುಧವಾರ ಏರಿಕೆಗೊಂಡಿದೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 3.07 ರು ಏರಿಕೆಯಾಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್ ಗೆ 1.90ರು ಏರಿದೆ.

ಕೇಂದ್ರ ಬಜೆಟ್ 2016-17 ಮಂಡನೆ ನಂತರ ಫೆಬ್ರವರಿ 29ರಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 3.02ರು ಇಳಿಕೆಯಾಗಿತ್ತು. ಡೀಸೆಲ್ ದರ 1.47ರು ಏರಿಕೆಯಾಗಿತ್ತು. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Petrol price was today(April 15) cut by Rs 0.74 per litre and diesel by Rs 1.30, reversing the 2-month trend of rising rates.
Please Wait while comments are loading...