ಆಗಸ್ಟ್ 28 ರಂದು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೇಗಿದೆ?
ದೇಶದ ಪ್ರಮುಖ ನಗರಗಳಲ್ಲಿ ಆಗಸ್ಟ್ 28 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಚೆನ್ನೈನಂಥ ಕೆಲ ಕಡೆ ಅಲ್ಲಿನ ಸ್ಥಳೀಯ ತೆರಿಗೆ ವ್ಯತ್ಯಾಸದಿಂದ ಬೆಲೆ ಏರಿಳಿಕೆಗಳಾಗಿವೆ. ಚೆನ್ನೈನಲ್ಲಿ ಒಂದು ಲೀಟರ್ ಪೆಟ್ರೋಲ್ಗೆ 8 ಪೈಸೆ ಏರಿಕೆ ಆಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಮಂಗಳವಾರ (ಆಗಸ್ಟ್ 24) ಪೆಟ್ರೋಲ್, ಡೀಸೆಲ್ ದರವನ್ನು ಇಳಿಕೆ ಮಾಡಿದ ಬಳಿಕ ಸತತ ನಾಲ್ಕು ದಿನಗಳು ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಂಡಿವೆ. ಪರಿಣಾಮ ಶನಿವಾರ ತೈಲ ದರ ಯಾವುದೇ ಬದಲಾವಣೆ ಆಗದೆ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 101.49 ರೂಪಾಯಿ ಮತ್ತು ಡೀಸೆಲ್ ದರ ಲೀಟರ್‌ಗೆ 88.92 ರೂಪಾಯಿನಷ್ಟಿದೆ. ಪ್ರಪಂಚದಾದ್ಯಂತದ ಡೆಲ್ಟಾ ರೂಪಾಂತರ ಪ್ರಕರಣಗಳ ತೀವ್ರತೆಯ ಕಾರಣದಿಂದಾಗಿ ಬೇಡಿಕೆಯ ಕಾಳಜಿ ಹೆಚ್ಚಾಗಿದ್ದು, ತೈಲ ಉತ್ಪಾದನಾ ಸಂಸ್ಥೆಗಳು ಕಚ್ಚಾ ತೈಲ ಬೆಲೆ ಇಳಿಕೆಯತ್ತ ಮನಸ್ಸು ಮಾಡಿವೆ.
ಡೀಸೆಲ್ ಅಲ್ಲಿ 8 ಪೈಸೆ ಬೆಲೆ ಏರಿಕೆ ಕಂಡಿದೆ. ಉಳಿದಂತೆ ಪ್ರಮುಖ ನಗರಗಳಲ್ಲಿ ಯಥಾಸ್ಥಿತಿ ಇದೆ. ಗುಡಗಾಂವ್, ಭುವನೇಶ್ವರ, ನೋಯ್ಡಾ ಮೊದಲಾದ ಕೆಲ ನಗರಗಳಲ್ಲಿ ಬೆಲೆ ವ್ಯತ್ಯಾಸವಾಗಿದೆ.. ಕರ್ನಾಟಕದಲ್ಲಿ ಮಾಮೂಲಿಯಂತೆ ಪ್ರತೀ ಜಿಲ್ಲೆಗಳಲ್ಲೂ ಬೆಲೆ ಏರಿಳಿಕೆಯಲ್ಲಿ ವ್ಯತ್ಯಾಸವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪೆಟ್ರೋಲ್ 98 ಪೈಸೆ ಇಳಿಕೆಯಾದರೆ, ಡೀಸೆಲ್ 89 ಪೈಸೆ ಬೆಲೆ ಇಳಿಕೆಯಾಗಿದೆ. ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಗದಗ, ಕೊಪ್ಪಳ, ಮಂಡ್ಯ, ತುಮಕೂರು ಮೊದಲಾದ ಜಿಲ್ಲೆಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಬೆಲೆಗಳು ಇಳಿಕೆಯಾಗಿವೆ. ಹಾಸನ ಜಿಲ್ಲೆಯಲ್ಲಿ ಡೀಸೆಲ್ ಬೆಲೆ 94 ರೂ ಗಿಂತ ಕಡಿಮೆ ಇದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಗರಿಷ್ಠ ಇದ್ದು ಅಲ್ಲಿ 107.21 ರೂ ಇದೆ. ಡೀಸೆಲ್ ಬೆಲೆ 96.28 ರೂ ಇದೆ. ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ 106 ರೂ ಗಿಂತ ಹೆಚ್ಚಿದೆ. ರಾಯಚೂರು ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 1.03 ರೂನಷ್ಟು ಏರಿಕೆಯಾಗಿದೆ. ಡೀಸೆಲ್ ಇಲ್ಲಿ 94 ಪೈಸೆಯಷ್ಟು ದುಬಾರಿಯಾಗಿದೆ. ದಾವಣಗೆರೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕ್ರಮವಾಗಿ 72 ಮತ್ತು 66 ಪೈಸೆ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ ಪೆಟ್ರೋಲ್ 71 ಪೈಸೆ, ಡೀಸೆಲ್ 65 ಪೈಸೆ ಏರಿಕೆಯಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಆಗಸ್ಟ್ 28: 104.98
ಆಗಸ್ಟ್ 27: 104.98
ಆಗಸ್ಟ್ 26: 104.98
ಆಗಸ್ಟ್ 25: 104.98
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 94.34
ಆಗಸ್ಟ್ 27: 94.34
ಆಗಸ್ಟ್ 26: 94.34
ಆಗಸ್ಟ್ 25: 94.34

ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಆಗಸ್ಟ್ 28: 101.49
ಆಗಸ್ಟ್ 27: 101.49
ಆಗಸ್ಟ್ 26: 101.49
ಆಗಸ್ಟ್ 25: 101.49
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 88.92
ಆಗಸ್ಟ್ 27: 88.92
ಆಗಸ್ಟ್ 26: 88.92
ಆಗಸ್ಟ್ 25: 88.92

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಆಗಸ್ಟ್ 28: 107.52
ಆಗಸ್ಟ್ 27: 107.52
ಆಗಸ್ಟ್ 26: 107.52
ಆಗಸ್ಟ್ 25: 107.52
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 96.48
ಆಗಸ್ಟ್ 27: 96.48
ಆಗಸ್ಟ್ 26: 96.48
ಆಗಸ್ಟ್ 25: 96.48

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಆಗಸ್ಟ್ 28: 99.20
ಆಗಸ್ಟ್ 27: 99.20
ಆಗಸ್ಟ್ 26: 99.20
ಆಗಸ್ಟ್ 25: 99.20
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28: 93.52
ಆಗಸ್ಟ್ 27: 93.52
ಆಗಸ್ಟ್ 26: 93.52
ಆಗಸ್ಟ್ 25: 93.52

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಆಗಸ್ಟ್ 28: 105.54
ಆಗಸ್ಟ್ 27: 105.54
ಆಗಸ್ಟ್ 26: 105.54
ಆಗಸ್ಟ್ 25: 105.54
ಡೀಸೆಲ್ (ಪ್ರತಿ ಲೀಟರ್)
ಆಗಸ್ಟ್ 28:96.99
ಆಗಸ್ಟ್ 27: 96.99
ಆಗಸ್ಟ್ 26: 96.99
ಆಗಸ್ಟ್ 25: 96.99

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ












Click it and Unblock the Notifications