ಪೇಟಿಎಂ ಮಾಲ್ ಕ್ಯಾಶ್ ಬ್ಯಾಕ್ ಸೇಲ್ ಮತ್ತೆ ಆರಂಭ

ಬೆಂಗಳೂರು, ಅಕ್ಟೋಬರ್ 22: ದಸರಾ, ದೀಪಾವಳಿ ಹಬ್ಬದ ಋತುವಿನಲ್ಲಿ ಆನ್ ಲೈನ್ ಶಾಪಿಂಗ್ ಭರಾಟೆ ಪ್ರತಿ ವರ್ಷ ಇದ್ದೇ ಇರುತ್ತದೆ. ಅಮೆಜಾನ್, ಫ್ಲಿಪ್ ಕಾರ್ಟ್ ನ ಮಹಾ ಸೇಲ್ ಜತೆಗೆ ಡಿಜಿಟಲ್ ಪೇಮೆಂಟ್ ಅಪ್ಲಿಕೇಷನ್ ಪೇಟಿಎಂ ಕೂಡಾ ಮಹಾ ಕ್ಯಾಶ್ ಬ್ಯಾಕ್ ಸೇಲ್ ಆರಂಭಿಸಿದೆ.

ಅಕ್ಟೋಬರ್ 9 ರಿಂದ 15ರ ತನಕ ಪೇಟಿಎಂ ಮಾಲ್ ಮಹಾ ಕ್ಯಾಶ್ ಬ್ಯಾಕ್ ಸೇಲ್ ಶುರು ಮಾಡಿ ಯಶಸ್ವಿ ಕಂಡಿತ್ತು. ಈಗ ಮತ್ತೊಮ್ಮೆ ಅಕ್ಟೋಬರ್ 22ರಿಂದ ಕ್ಯಾಶ್ ಬ್ಯಾಕ್ ಸೇಲ್ ಶುರು ಮಾದಿದೆ. ಅಕ್ಟೋಬರ್ 22 ರಿಂದ 25 ರವರೆಗೆ ಎರಡನೇ ಮಹಾ ಕ್ಯಾಶ್ ಬ್ಯಾಕ್ ಸೇಲ್' ನಡೆಯಲಿದೆ. ಈ ಸೇಲ್ ನಲ್ಲಿ ಗ್ರಾಹಕರಿಗೆ 501 ಕೋಟಿ ರೂಪಾಯಿ ಕ್ಯಾಶ್ ಬ್ಯಾಕ್ ಸೌಲಭ್ಯ ಸಿಗಲಿದೆ ಎಂದು ಸಂಸ್ಥೆ ಘೋಷಿಸಿದೆ.

ಇದಲ್ಲದೆ, ಉಚಿತ ಶಿಪ್ಪಿಂಗ್, ಕ್ಯಾಶ್ ಆನ್ ಡಿಲೆವರಿ ಹಾಗೂ ನೋ ಕಾಸ್ಟ್ ಇಎಂಐ ಸೌಲಭ್ಯ ಸಿಗಲಿದೆ. ಅಮೆರಿಕನ್ ಎಕ್ಸ್ ಪ್ರೆಸ್ ಕಾರ್ಡ್ ಹೊಂದಿರುವವರಿಗೆ ಶೇಕಡಾ 10 ರಷ್ಟು ಕ್ಯಾಶ್ ಬ್ಯಾಕ್ ಸಿಗಲಿದೆ. ಕೋಟೆಕ್ ಬ್ಯಾಂಕ್ ಗ್ರಾಹಕರಿಗೆ ಹೆಚ್ಚುವರಿ ಶೇಕಡಾ 10ರಷ್ಟು ಹೆಚ್ಚುವರಿ ಕ್ಯಾಶ್ ಬ್ಯಾಕ್ ಸಿಗಲಿದೆ.

Paytm Maha Cashback Sale: Offers on smartphones, PCs, consumer electronics, and more

ಏನೇನು ಮಾರಾಟಕ್ಕಿವೆ: ಆಪಲ್ ಐಫೋನ್ ಎಕ್ಸ್ ಮ್ಯಾಕ್ಸ್ ಮೇಲೆ 10,000 ಕ್ಯಾಶ್ ಬ್ಯಾಕ್, ಗೂಗಲ್ ಪಿಕ್ಸೆಲ್ 2 ಎಕ್ಸ್ ಎಲ್ ಮೇಲೆ 7 ಸಾವಿರ ಕ್ಯಾಶ್ ಬ್ಯಾಕ್. ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಮೇಲೆ 6,000 ರು ಕ್ಯಾಶ್ ಬ್ಯಾಕ್, ಶಿಯೋಮಿ ರೆಡ್ಮಿ ನೋಟ್ 5 ಪ್ರೋ ಮೇಲೆ 969ರು ಕ್ಯಾಶ್ ಬ್ಯಾಕ್ ಸಿಗಲಿದೆ.

ಇದಲ್ಲದೆ, ಡೆಲ್ ಇನ್ ಸ್ಪಿರಾನ್ 3000 ಲ್ಯಾಪ್ ಟಾಪ್, ಲೆನೆವೋ ಐಡಿಯಾ ಪ್ಯಾಡ್, ಎಚ್ ಪಿ ಲ್ಯಾಪ್ ಟಾಪ್ ಮೇಲೂ 20 ಸಾವಿರ ರು ತನಕ ಕ್ಯಾಶ್ ಬ್ಯಾಕ್ ಆಫರ್ ಗಳಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+