Get Updates
Get notified of breaking news, exclusive insights, and must-see stories!

ಟ್ವಿಟ್ಟರ್‌ನಿಂದ ಪರಾಗ್ ಅಗರವಾಲ್ ವಜಾ, ಹೆಚ್ಚಿದ ಮೀಮ್‌ಗಳು!

ಬೆಂಗಳೂರು, ಅಕ್ಟೋಬರ್‌ 28: ಟೆಸ್ಲಾ ಮುಖ್ಯಸ್ಥ ಮತ್ತು ಟ್ವಿಟರ್‌ನ ಹೊಸ ಮಾಲೀಕರಾದ ಕೋಟ್ಯಾಧಿಪತಿ ಎಲೋನ್ ಮಸ್ಕ್, ಆರು ತಿಂಗಳ ಹೈಡ್ರಾಮದ ನಂತರ ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟ್ಟರ್‌ನ್ನು 44 ಬಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿದ್ದಾರೆ. ನಂತರ ಅವರ ಮೊದಲ ದೊಡ್ಡ ಕ್ರಮದಲ್ಲಿ ತಕ್ಷಣವೇ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಾಗ್ ಅಗರವಾಲ್ ಮತ್ತು ಇತರ ಹಲವಾರು ಉನ್ನತ ಅಧಿಕಾರಿಗಳನ್ನು ವಜಾ ಮಾಡಿದರು.

ಈ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು, ವಿಶೇಷವಾಗಿ ಭಾರತದಲ್ಲಿ ಪರಾಗ್‌ ಅಗರವಾಲ್‌ ಅವರ ಬಗ್ಗೆ ಟ್ರಾಲ್, ಮಿಮ್‌ ಟ್ರೆಂಡ್ ಆಗುತ್ತಿದೆ. ಟ್ವಿಟ್ಟರ್ ಬಳಕೆದಾರರಾದ ಮಂಗಳಂ ತಿವಾರಿ ಅವರು ಮಾಜಿ ಟ್ವಿಟರ್ ಮುಖ್ಯಸ್ಥರ ವಿರುದ್ಧ ಜನಪ್ರಿಯ ಬಾಲಿವುಡ್ ನಟ ಅಮರೀಶ್ ಪುರಿ ಅವರು ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ಪ್ರಾರಂಭಿಸಬೇಕು ಎಂದು ತೋರಿಸುವ ಒಂದು ಮೀಮ್‌ನೊಂದಿಗೆ ವ್ಯಂಗ್ಯವಾಡಿದ್ದಾರೆ.

ನೀವು ಸಾಮಾಜಿಕ ಮಾಧ್ಯಮ ವೇದಿಕೆಯ ಸಿಇಒ ಆಗಿದ್ದರೆ ಪರವಾಗಿಲ್ಲ. ಉದ್ಯೋಗ ಭದ್ರತೆಯು ಸರ್ಕಾರಿ ಉದ್ಯೋಗಗಳಲ್ಲಿ ಮಾತ್ರ ಇರುತ್ತದೆ ಎಂದು ಅವರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು ಇತ್ತೀಚೆಗೆ ಚೀನಾದ ಮಾಜಿ ನಾಯಕ ಹು ಜಿಂಟಾವೊ ಅವರನ್ನು ಪಕ್ಷದ ಕಾಂಗ್ರೆಸ್‌ನಿಂದ ನಾಟಕೀಯವಾಗಿ ತೆಗೆದುಹಾಕಿರುವ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಪರಾಗ್ ಅಗರವಾಲ್ ಅವರ ಮುಖವನ್ನು ಹೂ ಜಿಂಟಾವೊ ಮತ್ತು ಎಲೋನ್ ಮಸ್ಕ್ ಅವರ ಮುಖವನ್ನು ಪ್ರಸ್ತುತ ನಾಯಕ ಕ್ಸಿ ಜಿನ್‌ಪಿಂಗ್‌ನಲ್ಲಿ ಅಳವಡಿಸಿ ಪೋಸ್ಟ್‌ ಮಾಡಲಾಗಿದೆ.

Parag Agrawal Fired From Twitter, More Memes On Twitter!

ಮತ್ತೊಬ್ಬರು ಅಗರ್ವಾಲ್ ಸಿಹಿತಿಂಡಿಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪರಾಗ್ ಅಗರವಾಲ್ ಅವರು ಸ್ವೀಟ್ಸ್‌ ಮತ್ತು ಬೇಕರಿ ಅಂಗಡಿಯ ಚಿತ್ರ ಹಂಚಿಕೊಂಡಿದ್ದಾರೆ. ಮತ್ತೊಂದು ಮಿಮ್‌ ನಟ ಗೋವಿಂದ ಅವರ ಹಾಸ್ಯ ಚಲನಚಿತ್ರದ ಕ್ಲಿಪ್ ಅನ್ನು ತೋರಿಸಿದೆ. ಅಲ್ಲಿ ಅವರು ಎಲ್ಲರನ್ನೂ ವಜಾಗೊಳಿಸುವಂತೆ ಮತ್ತು ಇಲಾಖೆಗಳನ್ನು ಮಾರಾಟ ಮಾಡುವಂತೆ ಕೇಳುತ್ತಿದ್ದಾರೆ.

Parag Agrawal Fired From Twitter, More Memes On Twitter!

ಅಲ್ಲದೆ ಹಾಲಿವುಡ್ ಚಲನಚಿತ್ರ ಉಲ್ಲೇಖಗಳು ಸಹ ಟ್ವಿಟ್ಟರ್‌ನಲ್ಲಿ ಕಾಣಿಸಿಕೊಂಡವು. ಮಾರ್ವೆಲ್‌ನ "ಅವೆಂಜರ್ಸ್" ಚಿತ್ರದಲ್ಲಿನ ಸೂಪರ್‌ವಿಲನ್ ಥಾನೋಸ್‌ನಂತೆ ಎಲೋನ್ ಮಸ್ಕ್ ಅನ್ನು ಚಿತ್ರಿಸಲಾಗಿದೆ ಎಂದು ಬಳಕೆದಾರರು ಒಂದು ಮಿಮ್‌ ಅನ್ನು ಪೋಸ್ಟ್ ಮಾಡಿದ್ದಾರೆ. ಆಕ್ಷನ್ ಫಿಲ್ಮ್‌ನಲ್ಲಿರುವಂತೆ ಎಲಾನ್‌ ಮಸ್ಕ್ ತನ್ನ ಬೆರಳುಗಳನ್ನು ಸ್ನ್ಯಾಪ್ ಮಾಡುವುದನ್ನು ಮತ್ತು ಟ್ವಿಟರ್ ಉದ್ಯೋಗಿಗಳು ಕಣ್ಮರೆಯಾಗುವುದನ್ನು ಇದು ತೋರಿಸುತ್ತದೆ.

ಹೊರಹಾಕಲ್ಪಟ್ಟವರಲ್ಲಿ ಟ್ವಿಟರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪರಾಗ್ ಅಗರವಾಲ್, ಟ್ರಸ್ಟ್ ಮುಖ್ಯಸ್ಥ ಕಾನೂನು, ನೀತಿ ಅಧಿಕಾರಿ ವಿಜಯ ಗಡ್ಡೆ ಮತ್ತು 2017ರಲ್ಲಿ ಟ್ವಿಟ್ಟರ್‌ಗೆ ಸೇರಿದ ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು 2012ರಿಂದ ಟ್ವಿಟರ್‌ನಲ್ಲಿ ಸಾಮಾನ್ಯ ಸಲಹೆಗಾರರಾಗಿರುವ ಸೀನ್ ಎಡ್ಜೆಟ್ ಸೇರಿದ್ದಾರೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.



More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+