ಪೇಪರ್ ಬೋಟ್ ಕಂಪನಿಯಿಂದ ಚಿಕ್ಕಿ ಮಾರಾಟ

Posted By:
Subscribe to Oneindia Kannada

ಬೆಂಗಳೂರು, ಜನವರಿ 17: ಪೇಪರ್ ಬೋಟ್ ಕಂಪನಿಯ ಪಾನೀಯಗಳನ್ನು ಅಂಗಡಿಗಳಲ್ಲಿ ನೋಡಿದ್ದೀರಾ? ಹ್ಞಾಂ, ಹೌದು ಕೋಕಂ, ಮಾವಿನ ಕಾಯಿ, ಸೀಬೆಕಾಯಿ ತಿಂದಂಥ ಅನುಭವ ಕೊಡುವ ಪಾನೀಯ ತಯಾರಿಸುವ ಕಂಪನಿಯವರೇ. ನಿಮ್ಮ ಬಾಲ್ಯದ ನೆನಪನ್ನು ಹೊತ್ತು ತರುತ್ತೇವೆ ಎಂದು ಹೇಳುವ ಆ ಕಂಪನಿಯಿಂದ ಈಗ 'ಚಿಕ್ಕಿ' (ಕಡ್ಲೇ ಬರ್ಫಿ) ಕೂಡ ಸಿಗಲಿದೆ.

ಅದೇ ಚಿಕ್ಕವಯಸ್ಸಿನಲ್ಲಿ (ಎಲ್ಲ ವಯಸ್ಸಿನಲ್ಲೂ) ಇಷ್ಟಪಟ್ಟು ತಿನ್ನುವ ಕಡ್ಲೇಬರ್ಫಿ ಮಾರಾಟಕ್ಕೆ ಪೇಪರ್ ಬೋಟ್ ಕಂಪನಿ ಮುಂದಾಗಿದೆ. ಒಳ್ಳೆ ಗುಣಮಟ್ಟದ ಕಡ್ಲೇಬೀಜ, ಬೆಲ್ಲ ಬಳಸಿ ತಯಾರಿಸುವ ರುಚಿಕಟ್ಟಾದ ಬರ್ಫಿಯನ್ನು ಸವಿಯುವುದಕ್ಕೆ ಇನ್ನು ನೀವು ಸಿದ್ಧವಾಗಬೇಕಷ್ಟೇ. ಫೇರ್ ಟ್ರೇಡ್ ಪ್ರಮಾಣಪತ್ರ ಪಡೆದ ಮೊದಲ ಭಾರತೀಯ ಕಂಪನಿಯ ಹೆಮ್ಮೆ ಇದು ಎಂಬುದು ಪೇಪರ್ ಬೋಟ್ ಕಂಪನಿಯವರ ಮಾತು.[ಸಾಮಾಜಿಕ ಜಾಲ ತಾಣಗಳಲ್ಲಿ ಹೆಬ್ಬಾರ್ 'ಆಹಾರ ಕಾಂತಿ']

Paper boat

ಇದರ ಜತೆಗೆ ರೈತರಿಂದಲೇ ಉತ್ತಮ ದರ್ಜೆ ಅಥವಾ ಗುಣಮಟ್ಟದ ಕಡ್ಲೇಬೀಜ, ಬೆಲ್ಲ ಖರೀದಿಸಿ ರುಚಿಕಟ್ಟಾದ ಚಿಕ್ಕಿ ತಯಾರಿಸಲಾಗುತ್ತದಂತೆ. ಇದರಿಂದ ರೈತರಿಗೂ ನೆರವಾಗುತ್ತದೆ ಎಂಬ ಆಶಯ ಕಂಪನಿಯದಂತೆ.

ಹೇಗೆ ಪುಳಿಯೋಗರೆ ಹಾಗೂ ಅಜ್ಜಿ ಮಾಡಿದ ಉಪ್ಪಿನಕಾಯಿಯ ಬಗ್ಗೆ ಎಲ್ಲರಿಗೂ ನೆನಪಿನ ಕೊಂಡಿಯ ಜತೆಗೆ ನಾಲಗೆಯ ಸ್ವಾದ ಎಚ್ಚರವಾಗುತ್ತದೋ ಹಾಗೆ ಪೇಪರ್ ಬೋಟ್ ನ ಚಿಕ್ಕಿ ಖುಷಿ ಕೊಡುತ್ತದಂತೆ.[ಚುರುಮುರಿ ಸವಿಯುವ ಸುಖಕ್ಕೆ ಒಮ್ಮೆಯಾದರೂ ಇಲ್ಲಿ ಹೋಗ್ಬೇಕು!]

ಮುಂದಿನ ಸಲ ಅಂಗಡಿಗೆ ಹೋದಾಗ ಪೇಪರ್ ಬೋಟ್ ನವರ ಪಾನೀಯಗಳನ್ನು ಖರೀದಿಸುವಂತೆ ಈ ಚಿಕ್ಕಿಯನ್ನು ಸಹ ಕೇಳಿನೋಡಿ. ಅಷ್ಟು ನಂಬಿಕೆಯಿಂದ ಕಂಪನಿ ಹೇಳುತ್ತಿರುವ ಉತ್ಪನ್ನ ಹೇಗಿದೆ ಅನ್ನೋ ಬಗ್ಗೆ ಎರಡು ಸಾಲು ಕೂಡ ಬರೆಯಿರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Presenting, Paper Boat Chikki. Good old chikki, just like you know it, but made a little differently this time. With FairTrade peanuts and jaggery. With conscience and a gold standard. With the fondness of memory.
Please Wait while comments are loading...