• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತದ 1,600 ಕಂಪನಿಗಳಿಗೆ ಚೀನಾದಿಂದ 7,363 ಕೋಟಿ ರೂ. ಹಣ ಬಂದಿದೆ

|

ನವದೆಹಲಿ, ಸೆಪ್ಟೆಂಬರ್ 16: ಸರ್ಕಾರದ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 2016 ರಿಂದ ಮಾರ್ಚ್ 2020 ರ ಅವಧಿಯಲ್ಲಿ ಭಾರತದ 1,600 ಕ್ಕೂ ಹೆಚ್ಚು ಕಂಪನಿಗಳಿಗೆ ಚೀನಾದಿಂದ 1 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ನೇರ ಹೂಡಿಕೆಗಳನ್ನು ಪಡೆದಿವೆ ಎಂದು ತಿಳಿದು ಬಂದಿದೆ. ಅಂದರೆ ಭಾರತದ ರೂಪಾಯಿಗಳಲ್ಲಿ ಸುಮಾರು 7,363 ಕೋಟಿ ರೂ. ಹಣ ಹರಿದು ಬಂದಿದೆ.

2016 ರ ಏಪ್ರಿಲ್ ನಿಂದ ಮಾರ್ಚ್ 2020 ರ ಅವಧಿಯಲ್ಲಿ 46 ಕ್ಷೇತ್ರಗಳಲ್ಲಿನ ವಿವಿಧ ಕಂಪನಿಗಳಿಗೆ, ಪ್ರಮುಖವಾಗಿ ಸ್ಟಾರ್ಟ್ ಅಪ್ ಗಳಲ್ಲಿ 1 ಬಿಲಿಯನ್ ಡಾಲರ್ ನಷ್ಟು ಮೊತ್ತ ಚೀನಾದ ವಿದೇಶಿ ನೇರ ಬಂಡವಾಳ ಹೂಡಿಕೆಯ ರೂಪದಲ್ಲಿ ಬಂದಿದೆ ಎಂದು ರಾಜ್ಯಸಭೆಯಲ್ಲಿ ಸರ್ಕಾರ ಲಿಖಿತ ಉತ್ತರ ನೀಡಿದೆ.

ಚೀನಾದಿಂದ ಲಡಾಖ್‌ನ 38,000 ಚದರ ಕಿ.ಮೀ ಅತಿಕ್ರಮಣ: ರಾಜನಾಥ್ ಸಿಂಗ್

ಆಟೋಮೊಬೈಲ್ ಕ್ಷೇತ್ರ, ಪುಸ್ತಕ ಮುದ್ರಣ, ಎಲೆಕ್ಟ್ರಾನಿಕ್ಸ್, ಸೇವೆಗಳು ಹಾಗೂ ಎಲೆಕ್ಟ್ರಿಕಲ್ ಉಪಕರಣ ಕ್ಷೇತ್ರಗಳಲ್ಲಿ 100 ಮಿಲಿಯನ್ ಡಾಲರ್ ಗೂ ಅಧಿಕ ವಿದೇಶಿ ನೇರ ಹೂಡಿಕೆ (FDI) ಹರಿದುಬಂದಿದೆ. ಈ ಪೈಕಿ ಅತಿ ಹೆಚ್ಚು ಅಂದರೆ 172 ಮಿಲಿಯನ್ ಡಾಲರ್ ಆಟೋಮೊಬೈಲ್ ಕ್ಷೇತ್ರಕ್ಕೆ ಬಂದಿದೆ.

ಭಾರತೀಯ ಕಂಪನಿಗಳಲ್ಲಿ, ವಿಶೇಷವಾಗಿ ಸ್ಟಾರ್ಟ್ ಅಪ್‌ಗಳಲ್ಲಿ ಚೀನಾದ ಏಜೆನ್ಸಿಗಳು ದೊಡ್ಡ ಪ್ರಮಾಣದ ಹೂಡಿಕೆಗಳನ್ನು ಮಾಡಿರುವುದು ಸತ್ಯವೇ? ಎಂಬ ಪ್ರಶ್ನೆಗೆ ಮಂಗಳವಾರ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ಕಾರ್ಪೊರೇಟ್ ವ್ಯವಹಾರಗಳ ಸಚಿವ ಅನುರಾಗ್ ಸಿಂಗ್ ಠಾಕೂರ್ ಅಂಕಿ-ಅಂಶಗಳ ಸಹಿತ ಉತ್ತರ ನೀಡಿದ್ದಾರೆ.

English summary
More than 1,600 Indian companies have received foreign direct investments worth USD 1 billion from China during the April 2016 to March 2020 period, according to government data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X