ಇದಪ್ಪಾ ಸುದ್ದಿ! 100 ಕೋಟಿಗೂ ಹೆಚ್ಚು ಆದಾಯ ಇರುವ ಭಾರತೀಯ ಏಕೈಕ

Posted By:
Subscribe to Oneindia Kannada

ನೂರು ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತೀಯರು ಎಂಬ ಹೆಮ್ಮೆ ನಮ್ಮದು. ಈ ಪೈಕಿ ನೂರು ಕೋಟಿಗೂ ಹೆಚ್ಚು ಆದಾಯ ಇದೆ ಎಂದು ಘೋಷಿಸಿಕೊಂಡವರು ಒಬ್ಬರು ಮಾತ್ರ ಎಂಬ ಆಸಕ್ತಿಕರ ಅಂಶ ಬೆಳಕಿಗೆ ಬಂದಿದೆ. ಇನ್ನು 50ರಿಂದ 100 ಕೋಟಿ ಆದಾಯ ತೆರಿಗೆ ವ್ಯಾಪ್ತಿಯ ಆದಾಯವನ್ನು ಘೋಷಿಸಿಕೊಂಡಿರುವವರು ಮೂರೇ ಮಂದಿ.

2014-15ನೇ ಸಾಲಿನ ಅಂಕಿ-ಅಂಶ ಇದು. 4.1 ಕೋಟಿ ಭಾರತೀಯರು ಆದಾಯ ತೆರಿಗೆ ರಿಟರ್ನ್ಸ್ಸ್ ಸಲ್ಲಿಸಿದ್ದು, ಆ ಪೈಕಿ ಎರಡು ಕೋಟಿ ಮಂದಿಗೆ ಯಾವುದೇ ತೆರಿಗೆ ಇಲ್ಲ. ಈ ಅಂಶವು ಆದಾಯ ತೆರಿಗೆ ಇಲಾಖೆ ಬುಧವಾರ ಬಿಡುಗಡೆ ಮಾಡಿದ ಮಾಹಿತಿಯಿಂದ ಬಯಲಾಗಿದೆ.

ಬಿಟ್ ಕಾಯಿನ್ ವ್ಯವಹಾರ: 5 ಲಕ್ಷ ಜನರಿಗೆ ಐಟಿ ನೋಟಿಸ್

ಇನ್ನು ಆ ನಂತರದ ಎರಡು ಕೋಟಿ ಮಂದಿ ವಾರ್ಷಿಕವಾಗಿ ಕಟ್ಟುವ ಸರಾಸರಿ ಆದಾಯ ತೆರಿಗೆ ರು. 42,456. ಒಂದು ಕೋಟಿ ತೆರಿಗೆದಾರರು ಮಾತ್ರ 1 ಲಕ್ಷ ರುಪಾಯಿಗೂ ಹೆಚ್ಚಿಗೆ ತೆರಿಗೆ ಪಾವತಿಸುತ್ತಾರೆ. ಈ ಬಗ್ಗೆ ಇನ್ನಷ್ಟು ಆಸಕ್ತಿಕರ ಅಂಶಗಳಿವೆ.

Only one Indian who has a taxable income above 100 crore

ಆದಾಯ ತೆರಿಗೆ ಸಂಗ್ರಹದಲ್ಲಿ ಟಾಪ್ ಹತ್ತು ಸ್ಥಾನದಲ್ಲಿರುವ ರಾಜ್ಯಗಳು (2016-17)

ದೆಹಲಿ

ಕರ್ನಾಟಕ

ತಮಿಳು ನಾಡು

ಗುಜರಾತ್

ಆಂಧ್ರ

ಪಶ್ಚಿಮ ಬಂಗಾಲ

ಉತ್ತರ ಪ್ರದೇಶ

ಹರಿಯಾಣ

ರಾಜಸ್ತಾನ

ಇನ್ನು ತೆರಿಗೆ ವ್ಯಾಪ್ತಿಯ ಆದಾಯ ಘೋಷಿಸಿರುವವರ ವಿವರ (ಅಸೆಸ್ ಮೆಂಟ್ ವರ್ಷ 2015-16)

ಯಾವುದೇ ತೆರಿಗೆ ಬೀಳುವ ಆದಾಯ ಇಲ್ಲ 2 ಕೋಟಿ

0ರಿಂದ 5 ಲಕ್ಷ ತೆರಿಗೆ ಆದಾಯ 2 ಕೋಟಿ

5ರಿಂದ 10 ಲಕ್ಷ ರುಪಾಯಿ 3.7 ಲಕ್ಷ

10ರಿಂದ 25 ಲಕ್ಷ ರುಪಾಯಿ 1.8 ಲಕ್ಷ

25 ಲಕ್ಷದಿಂದ 1 ಕೋಟಿ ರುಪಾಯಿ 62,919

1ಕೋಟಿಯಿಂದ 50 ಕೋಟಿ 9,686

50ರಿಂದ 100 ಕೋಟಿ 3

100 ಕೋಟಿ ಮೇಲ್ಪಟ್ಟು 1

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Only one Indian who has taxable income of above 100 crore. This is an official information from Income Tax department for the assessment year 2015-16.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ