ಅಕ್ಷಯ ತದಿಗೆ : ಆನ್ ಲೈನ್ ಚಿನ್ನ ಖರೀದಿ ಜೋರು!

ಬೆಂಗಳೂರು, ಮೇ 09: ದುರ್ಮುಖ ನಾಮ ಸಂವತ್ಸರದ ಅಕ್ಷಯ ತದಿಗೆ (ಮೇ 09) ದಿನ ಮದುವೆಯಾಗುವವರಿಗೆ ಆಶುಭ ದಿನವಾಗಿರಬಹುದು ಆದರೆ, ಚಿನ್ನ ಖರೀದಿಗೇನು ಅಡ್ಡಿ ಇಲ್ಲ. ಪ್ರತಿ ವರ್ಷದಂತೆ ಚಿನ್ನದ ಮಳಿಗೆಗಳಿಗೆ ಗ್ರಾಹಕರು ಮುಗಿಬೀಳುತ್ತಿಲ್ಲ. ಬದಲಿಗೆ ಆನ್ ಲೈನ್ ಮೂಲಕ ಚಿನ್ನ ಖರೀದಿ ಜೋರಾಗಿದೆ.

ಅಮೇಜಾನ್, ಬ್ಲೂಸ್ಟೋನ್ ಸೇರಿದಂತೆ ಇ ರೀಟೈಲರ್ ಗಳು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 6 ಪಟ್ಟು ಅಧಿಕ ಮಾರಾಟ ನಿರೀಕ್ಷೆಯಲಿದ್ದಾರೆ. [ಒಂದೇ ಕ್ಲಿಕ್ ನಲ್ಲಿ ವಿವಿಧ ನಗರಗಳ ಚಿನ್ನದ ಬೆಲೆ ತಿಳಿದುಕೊಳ್ಳಿ]

ಕಳೆದ ವರ್ಷಕ್ಕಿಂತ ಶೇ 100ರಷ್ಟು ಅಧಿಕ ಪಟ್ಟು ವೆಬ್ ಟ್ರಾಫಿಕ್ ದಾಖಲಾಗುವ ಸಾಧ್ಯತೆಯಿದೆ ಎಂದು ಅಮೇಜಾನ್ ಫ್ಯಾಷನ್ ವಿಭಾಗದ ಮುಖ್ಯಸ್ಥ ಮಾಯಾಂಕ್ ಶಿವಂ ಹೇಳಿದ್ದಾರೆ. [ಅಕ್ಷಯ ತದಿಗೆಯಂದು ಚಿನ್ನವನ್ನೇ ಖರೀದಿಸಬೇಕಾಗಿಲ್ಲ]

Online retailers see gold, diamonds boosting sales on Akshaya Tritiya

ಅಚ್ಚರಿ ಎಂಬಂತೆ ಪ್ಲೇ ಚಿನ್ನದ ಚೈನ್ ಹಾಗೂ ನೆಕ್ಲೇಸ್ ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಇದಲ್ಲದೆ ವಜ್ರದ ಪೆಡೆಂಟ್, ಕಿವಿಯೊಲೆ, ಚಿನ್ನದ ನಾಣ್ಯದ ಮೇಲೆ ಬೇಡಿಕೆ ಇದೆ ಎಂದು ಬ್ಲೂಸ್ಟೋನ್.ಕಾಂ ಸಿಒಒ ಅರವಿಂದ್ ಸಿಂಘೈ ಅವರು ಹೇಳಿದ್ದಾರೆ. [ಅಕ್ಷಯ ತೃತೀಯದಂದು ಚಿನ್ನ ಖರೀದಿ ಯಾಕೆ?]

ಬೆಂಗಳೂರಿನಲ್ಲಿ ಚಿನ್ನದ ಬೆಲೆ 10ಗ್ರಾಂಗೆ 30, 700 ru(24 ಕ್ಯಾರೆಟ್), 22 ಕ್ಯಾರೆಟ್ ಚಿನ್ನ 28,740 ರು ಇದೆ. ಬೆಲೆ ಎಲ್ಲೆಡೆ ಏರಿಕೆಯಲ್ಲಿದ್ದರೂ ವಜ್ರದ ಆಭರಣಕ್ಕೆ ಬೇಡಿಕೆ ಇದ್ದೇ ಇದೆ ಎಂದು ಕಾರಾಟ್ ಲೇನ್.ಕಾಂ ನ ಉಪಾಧ್ಯಕ್ಷ ವಿಪಿನ್ ನಾಯರ್ ಅಭಿಪ್ರಾಯ ಪಟ್ಟಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+