ಮಂಗಳವಾರ ಬಂಗಾರನೇ ಖರೀದಿಸಬೇಕು ಅಂತೇನಿಲ್ಲ

ಬೆಂಗಳೂರು, ಏ.20: ಗಾರ್ಡನ್ ಸಿಟಿಯಲ್ಲಿ ಈಗ ಶಾಪಿಂಗ್ ಟೈಮ್. ಅಕ್ಷಯ ತದಿಗೆ ದಿನ ಚಿನ್ನವನ್ನು ಖರೀದಿಸಬೇಕು ಎಂದು ಮುಗಿಬೀಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಟಿವಿ ಜ್ಯೋತಿಷಿಗಳಿಗೆ ಜ್ಯುವೆಲ್ಲರಿ ಅಂಗಡಿ ಮಾಲೀಕರು ಮನಸ್ಸಲ್ಲೇ ಥ್ಯಾಂಕ್ಸ್ ಹೇಳುತ್ತಿದ್ದಾರೆ. ಅದರೆ, ಅಕ್ಷಯ ತದಿಗೆ ದಿನ ಏನೇ ಖರೀದಿಸಿದರೂ ಅದು ಶುಭ ಫಲ ತರುತ್ತದೆ.

ಅಕ್ಷಯ ತೃತೀಯ ಅಥವಾ ತದಿಗೆ ವೈಶಾಖ ಮಾಸದ ಶುಕ್ಲಪಕ್ಷದ ಒಂದು ಶುಭ ದಿನ ಅಷ್ಟೇ. ಈ ಬಾರಿ ಮಂಗಳವಾರ(ಎ.21) ತದಿಗೆ ಬಿದ್ದಿದೆ. ಇದು ವ್ಯಾಪಾರಿಗಳಿಗೆ ಮಂಗಳಕರವೂ ಹೌದು. ಅಕ್ಷಯ ತದಿಗೆ ದಿನ ಚಿನ್ನವನ್ನು ಮಾತ್ರ ಯಥೇಚ್ಛವಾಗಿ ಖರೀದಿಸಬೇಕು ಎಂದು ಎಲ್ಲೂ(ಶಾಸ್ತ್ರ, ಪುರಾಣ ಇತ್ಯಾದಿ) ಹೇಳಿಲ್ಲ. [ಅಕ್ಷಯ ತೃತೀಯದಂದು ಚಿನ್ನ ಖರೀದಿ ಯಾಕೆ?]

ಇನ್ನು ಟಿವಿ ಜ್ಯೋತಿಷಿಗಳು, ಪೇಪರ್ ಆಡ್ ನೋಡಿಕೊಂಡು ಚಿನ್ನದ ವ್ಯಾಪಾರಿಗಳ ಜ್ಯೋತಿಷಿಗಳ ಜೋಳಿಗೆ ತುಂಬಿಸಲು ಮುಂದಾಗಬೇಡಿ. ನಾವು ಎಷ್ಟೇ ಫಾರ್ವಡ್ ಆದರೂ ಶಾಸ್ತ್ರ, ಸಂಪ್ರದಾಯ, ರೂಢಿ ಬಿಡೋಕೆ ಆಗಲ್ಲ ಎನ್ನುವವರೂ ಇದ್ದಾರೆ. [ಒಂದೇ ಕ್ಲಿಕ್ ನಲ್ಲಿ ವಿವಿಧ ನಗರಗಳ ಚಿನ್ನದ ಬೆಲೆ ತಿಳಿದುಕೊಳ್ಳಿ]

ಯಾವಾಗ ಖರೀದಿಸಬಹುದು: ಅಕ್ಷಯ ತದಿಗೆ ದಿನ ನಿನ್ನೆ ದಿನ (ಸೋಮವಾರ ರಾತ್ರಿ) ನೆನಸಿಟ್ಟ ಹೆಸರು ಬೇಳೆ ಬಳಸಿಕೊಂಡು ಕೋಸಂಬರಿ, ಪಾನಕ ಮಾಡಿಕೊಂಡು ಕುಡಿದು ನಾಲ್ಕು ಜನಕ್ಕೆ ಹಂಚಿ. [ಅಕ್ಷಯ ತದಿಗೆ: ಫೇಸ್ಬುಕ್ ನಲ್ಲಿ ಕಂಡ ಬ್ರೇಕಿಂಗ್ ನ್ಯೂಸ್]

ಪುರುಸೊತ್ತಾದಾಗ ನಿಮ್ಮ ನೆಚ್ಚಿನ, ನಂಬುಗೆಯ ಅಂಗಡಿಗೆ ತೆರಳಿ. ಯಾವುದೇ ರಾಹುಕಾಲ, ಯಮಗಂಡಕಾಲ ನೋಡಬೇಕಾಗಿಲ್ಲ. ಇಡೀ ದಿನ ಶುಭ ಕಾಲ. ಅಕ್ಷಯ ತದಿಗೆ ದಿನದ ಆಫರ್ ಗಳ ಒಂದು ಸಣ್ಣ ಸಂಗ್ರಹ ಇಲ್ಲಿದೆ.

ಏನಾದ್ರೂ ಖರೀದಿಸಿ ದುಡ್ಡು ಇದ್ದಷ್ಟು ಖರೀದಿ

ಏನಾದ್ರೂ ಖರೀದಿಸಿ ದುಡ್ಡು ಇದ್ದಷ್ಟು ಖರೀದಿ

ಈ ದಿನ ದುಶ್ಶಾಸನನ ಹಿಡಿತಕ್ಕೆ ಸಿಲುಕಿದ್ದ ದ್ರೌಪದಿಗೆ ಶ್ರೀಕೃಷ್ಣ ಯಥೇಚ್ಛವಾಗಿ ಸೀರೆ ಕರುಣಿಸಿದನಂತೆ, ದೇವ ದಾನವರ ಯುದ್ಧದ ನಡುವೆ ಅಮೃತ ಉಕ್ಕಿದ್ದು ಇದೇ ದಿನವಂತೆ. ಹೀಗೆ ನಾನಾ ಪುರಾಣ ಕಥೆಗಳಿವೆ. ಚಿನ್ನ ಕೊಳ್ಳಲು ಕಷ್ಟವಾದರೆ, ಚಿಂತಿಸಬೇಡಿ. ಉಪ್ಪು, ಉಪ್ಪಿನಕಾಯಿ, ಮನೆಗೆ ಬೇಕಾದ ದಿನಸಿ ಖರೀದಿಸಿ ಎಲ್ಲವೂ ಅಕ್ಷಯವಾಗುತ್ತದೆ.

ಕಲ್ಯಾಣ್ ಜ್ಯುವೆಲ್ಲರ್ಸ್

ಕಲ್ಯಾಣ್ ಜ್ಯುವೆಲ್ಲರ್ಸ್

ಕನ್ನಡ ಶಿವರಾಜ್ ಕುಮಾರ್, ಐಶ್ವರ್ಯಾರೈ, ಅಮಿತಾಬ್ ಬಚ್ಚನ್ ಮುಂತಾದವರು ರಾಯಭಾರಿಯಾಗಿರುವ ಕಲ್ಯಾಣ್ ಜ್ಯುವೆಲ್ಲರ್ಸ್ ಏ.21ರಂದು ಬೆಳಗ್ಗೆ 8 ಗಂಟೆಯಿಂದ ಎಲ್ಲಾ ಶೋ ರೂಮ್ ಓಪನ್ ಮಾಡಲಿದೆ.
*ವೇಸ್ಟೇಜ್ 5% ರಿಂದ ಆರಂಭ ಬಳೆ, ಚೇನ್ಸ್, ನೆಕ್ಲೆಸ್ ಗಾಗಿ
ವಿಳಾಸ: ಡಿಕೆನ್ಸನ್ ರಸ್ತೆ #17, ಜಯನಗರ 3ನೇ ಬ್ಲಾಕ್, ಕೋರಮಂಗಲ 4ನೇ ಬ್ಲಾಕ್, ಬೆಂಗಳೂರು

http://www.joyalukkas.com/

ಸಿ ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್

ಸಿ ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್

ಅಕ್ಷಯ ತೃತೀಯ ಅಂಗವಾಗಿ ಸಿ ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ನಲ್ಲಿ ರಿಯಾಯಿತಿ:
ಎಲ್ಲಿಂದ ಎಲ್ಲಿವರೆಗೆ?: 8ನೇ ಏಪ್ರಿಲ್ ರಿಂದ 5ಮೇ 2015
ರಿಯಾಯಿತಿ: ಬೆಳ್ಳಿ ಪದಾರ್ಥಗಳ ಮೇಲೆ 3%; ಚಿನ್ನದ ಆಭರಣ ಮೇಲೆ 4%; ವಜ್ರ ಹಾಗೂ ಪಾರಂಪರಿಕ ಆಭರಣ ಮೇಲೆ 5%
ವಿಳಾಸ: ಹೆರಿಟೇಜ್ ಶೋ ರೂಮ್, ಕಮರ್ಷಿಯಲ್ ಸ್ಟ್ರೀಟ್, ದ ಟಚ್ ಸ್ಟೋನ್, ಸಫೀನಾ ಫ್ಲಾಜಾ ಪಕ್ಕ ಹಾಗೂ ಜಯನಗರ
ಸಂಪರ್ಕ: 080 -40001667

ಜೋಸ್ ಅಲುಕ್ಕಾಸ್

ಜೋಸ್ ಅಲುಕ್ಕಾಸ್

* ಅಕ್ಷಯ ತೃತೀಯ ದಿನದಂದು 50,000 ರು ಮೌಲ್ಯದ ಚಿನ್ನಾಭರಣ ಮುಂಗಡ ಬುಕ್ಕಿಂಗ್ ಖರೀದಿ ಜೊತೆಗೆ ಚಿನ್ನದ ನಾಣ್ಯ(200 ಮಿ.ಗ್ರಾಂ) ಉಚಿತ.
* ರಿಯಾಯಿತಿ ಮಾರಾಟ: 9 ರಿಂದ 25 ಏಪ್ರಿಲ್ 2015
* 1 ಲಕ್ಷ ರು ಮೌಲ್ಯದ ಚಿನ್ನಾಭರಣ ಮುಂಗಡ ಬುಕ್ಕಿಂಗ್ ಖರೀದಿ ಜೊತೆಗೆ 2 ಗ್ರಾಂ ಚಿನ್ನದ ನಾಣ್ಯ ಉಚಿತ
ವಿಳಾಸ: ಎಂಜಿ ರಸ್ತೆ, ಬೆಂಗಳೂರು 080-2558-9916
ಬೆಲೆ ರೇಂಜ್ : ವಜ್ರದ ಕಿವಿಯೋಲೆ: 31,000ರು ನಿಂದ ಆರಂಭ,.

ಆಲಿಸ್ ಆಭರಣ ಮಳಿಗೆ

ಆಲಿಸ್ ಆಭರಣ ಮಳಿಗೆ

* ಅಕ್ಷಯ ತೃತೀಯ ದಿನದಂದು ಡಿಸ್ಪೆನ್ಸರಿ ರಸ್ತೆಯಲ್ಲಿ ಮಾತ್ರ ವಿಶೇಷ ಕೌಂಟರ್ ಇರುತ್ತದೆ.
* ಇತರೆ ಮಳಿಗೆಗಳಲ್ಲಿ ಪ್ರತಿ ಗ್ರಾಂ ಆಭರಣಗಳ ಮೇಲೆ 150 ರು ವಿಶೇಷ ರಿಯಾಯಿತಿ
* ಒಳ ವೆಚ್ಚಗಳಿಲ್ಲ, ವೇಸ್ಟೇಜ್ ಇಲ್ಲ, ತಯಾರಿಕಾ ವೆಚ್ಚವಿಲ್ಲ, ಬುಕ್ಕಿಂಗ್ ಆರಂಭವಾಗಿದೆ.
ವಿಳಾಸ: #50, ಡಿಸ್ಪೆನ್ಸರಿ ರಸ್ತೆ, ಕಮರ್ಷಿಯಲ್ ರಸ್ತೆ ಪಕ್ಕ
ಸಂಪರ್ಕ: 080-2559 1378
http://www.alicegold.in/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+