• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆಜಾನ್ : ಪ್ರೀ ಬುಕ್ಕಿಂಗ್ ನಲ್ಲಿ ದಾಖಲೆ ಬರೆದ ಒನ್ ಪ್ಲಸ್

|

ಬೆಂಗಳೂರು, ಅಕ್ಟೋಬರ್ 15: ಭಾರತದ ಮುಂಚೂಣಿಯಲ್ಲಿರುವ ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ರ್ಯಾಂಡ್ ಒನ್‍ಪ್ಲಸ್, ದೀಪಾವಳಿ ಮಾರಾಟದಲ್ಲಿ ಗ್ರಾಹಕರಿಂದ ಹಿಂದೆಂದೂ ಕಂಡಿರದಂಥ ಅದ್ಭುತ ಸ್ಪಂದನೆಗೆ ಸಾಕ್ಷಿಯಾಗಿದೆ. ಅಮೆಜಾನ್‍ನ ಗ್ರೇಟ್ ಇಂಡಿಯನ್ ಫೆಸ್ಟಿವಲ್‍ನಲ್ಲಿ 36 ಗಂಟೆಗಳ ಒಳಗೆ 400 ಕೋಟಿ ರೂ. ಮೌಲ್ಯದ ಸ್ಮಾರ್ಟ್ ಫೋನ್ ಗಳು ಬುಕ್ ಆಗಿವೆ.

ಕಾಯ್ದಿಡಲಾದ ಫೋನ್ ಗಳಲ್ಲಿ ಈ ವರ್ಷದ ಫ್ಲ್ಯಾಗ್‍ಶಿಪ್, ಒನ್‍ಪ್ಲಸ್ 6 ಕೂಡ ಇದ್ದು, ಇದರ ಜೊತೆಗೆ ಇನ್ನಷ್ಟೇ ಮಾರುಕಟ್ಟೆಗೆ ಬಿಡುಗಡೆಯಾಗಬೇಕಿರುವ ಒನ್‍ಪ್ಲಸ್ 6ಟಿ ಡಿವೈಸ್‍ಗೂ ಪ್ರೀ ಬುಕಿಂಗ್ ಮಾಡಲಾಗಿದೆ.

ಬಿಡುಗಡೆಯಾದ 5 ತಿಂಗಳ ಬಳಿಕವೂ, ಒನ್‍ಪ್ಲಸ್ 6 ಅಮೆಜಾನ್.ಇನ್‍ನಲ್ಲಿ ಅತಿ ಹೆಚ್ಚು ಆದಾಯ ಗಳಿಸಿದ ಮತ್ತು ಅತ್ಯಧಿಕ ಮಾರಾಟ ಕಂಡ ಪ್ರೀಮಿಯಂ ಸ್ಮಾರ್ಟ್ ಫೋನ್ ಎಂಬ ಖ್ಯಾತಿಯನ್ನು ಮುಂದುವರಿಸುತ್ತಿದೆ. ಈಗ ಬಳಕೆದಾರರು ಕಂಪನಿಯ ಅತಿ ನಿರೀಕ್ಷಿತ ಸ್ಮಾರ್ಟ್ ಫೋನ್ ಎಂದು ಪರಿಗಣಿಸಲ್ಪಟ್ಟಿರುವ ಒನ್‍ಪ್ಲಸ್ 6ಟಿ ಗಾಗಿ ಕಾಯುತ್ತಿದ್ದಾರೆ.

ಒನ್‍ಪ್ಲಸ್6 ಲೋಕಾರ್ಪಣೆ ಪಾಪ್-ಅಪ್ ಮಳಿಗೆಯಲ್ಲಿ ನೂಕು ನುಗ್ಗಲು

ಮುಂಬರುವ ಒನ್‍ಪ್ಲಸ್ 6ಟಿ ಸ್ಮಾರ್ಟ್ ಫೋನಿನ ಪ್ರೀ-ಲಾಂಚ್ ಬುಕಿಂಗ್ ಈಗಾಗಲೇ ಅಮೆಜಾನ್.ಇನ್, ಕ್ರೋಮಾ ಮಳಿಗೆಗಳು ಮತ್ತು ಒನ್‍ಪ್ಲಸ್ ಎಕ್ಸ್‍ಕ್ಲೂಸಿಟ್ ಮಳಿಗೆಗಳಲ್ಲಿ ಲಭ್ಯವಿದೆ.

ಸ್ಮಾರ್ಟ್ ಫೋನನ್ನು ಮೊದಲೇ ಬುಕ್ ಮಾಡುವ ಮೂಲಕ ಗ್ರಾಹಕರು ಇನ್ನಷ್ಟು ಹೆಚ್ಚುವರಿ ಕೊಡುಗೆಗಳನ್ನು ಪಡೆಯಬಹುದಾಗಿದೆ ಮಾತ್ರವಲ್ಲ, ಒನ್‍ಪ್ಲಸ್‍ನ ಅತ್ಯಾಧುನಿಕ ಫ್ಲ್ಯಾಗ್‍ಶಿಪ್ ಅನ್ನು ಮಾರಾಟದ ಮೊದಲ ದಿನವೇ ಕೊಂಡುಕೊಂಡ ಜಾಗತಿಕ ಗ್ರಾಹಕ ಎಂಬ ಹೆಸರನ್ನೂ ಗಳಿಸಬಹುದು.

ಪ್ರೀ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಭರಪೂರ ಕೊಡುಗೆ

ಪ್ರೀ ಬುಕ್ಕಿಂಗ್ ಮಾಡಿದ ಗ್ರಾಹಕರಿಗೆ ಭರಪೂರ ಕೊಡುಗೆ

ಗ್ರಾಹಕರು ಅಮೆಜಾನ್.ಇನ್ ನಿಂದ 1,000 ರೂ. ಮೌಲ್ಯದ ಇ-ಗಿಫ್ಟ್ ಕಾರ್ಡ್ ಅನ್ನು ಖರೀದಿಸಿಟ್ಟರೆ, 2018ರ ನವೆಂಬರ್ 2ರಂದು ಒನ್‍ಪ್ಲಸ್ 6ಟಿ ಡಿವೈಸ್ ಅನ್ನು ಮುಕ್ತವಾಗಿ ಮಾರಾಟಕ್ಕಿಟ್ಟ ಸಂದರ್ಭದಲ್ಲಿ ಅದನ್ನು ರಿಡೀಮ್(ಮತ್ತೆ ಪಡೆದುಕೊಳ್ಳುವುದು) ಮಾಡಿಕೊಳ್ಳಬಹುದು.

ಪ್ರೀ-ಬುಕ್ ಮಾಡಿದ ಗ್ರಾಹಕರಿಗೆ 1490 ರೂ. ಮೌಲ್ಯದ ಒನ್‍ಪ್ಲಸ್ ನ ಆಧುನಿಕ ಟೈಪ್-ಸಿ ಬುಲೆಟ್ ಇಯರ್ ಫೋನ್ ಜೋಡಿ ಸಿಗಲಿದೆ. ಜೊತೆಗೆ, ಅಮೆಜಾನ್ ಪೇ ಬ್ಯಾಲೆನ್ಸ್ ರೂಪದಲ್ಲಿ ಹೆಚ್ಚುವರಿಯಾಗಿ 500 ರೂ. ದೊರೆಯಲಿದೆ. ಇದನ್ನು ಒನ್‍ಪ್ಲಸ್ 6ಟಿ ಖರೀದಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಪಡೆಯಬಹುದಾಗಿದೆ.

ಒನ್ ಪ್ಲಸ್ 6ಟಿ ಬಿಡುಗಡೆ ಕಾರ್ಯಕ್ರಮ

ಒನ್ ಪ್ಲಸ್ 6ಟಿ ಬಿಡುಗಡೆ ಕಾರ್ಯಕ್ರಮ

2018ರ ಅಕ್ಟೋಬರ್ 30ರಂದು ನವದೆಹಲಿಯ ಇಂದಿರಾಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‍ನಲ್ಲಿರುವ ಕೆಡಿಜೆಡಬ್ಲ್ಯು ಸ್ಟೇಡಿಯಂನಲ್ಲಿ ರಾತ್ರಿ 8.30ಕ್ಕೆ ಸರಿಯಾಗಿ ಒನ್‍ಪ್ಲಸ್ 6ಟಿ ಬಿಡುಗಡೆಯ ಮೂಲಕ ಒನ್‍ಪ್ಲಸ್ ಮುಂದಡಿಯಿಡಲಿದೆ.

ಹೊಸ ಒನ್‍ಪ್ಲಸ್ 6ಟಿ ಎನ್ನುವುದು ಭವಿಷ್ಯದ ಸ್ಕ್ರೀನ್ ಅನ್ ಲಾಕ್ ತಂತ್ರಜ್ಞಾನ ಹೊಂದಿರುವ ಹಾಗೂ ಜನಪ್ರಿಯ ವೇಗವಾಗಿ ಚಾರ್ಜ್ ಮಾಡಬಹುದಾದ ತಂತ್ರಜ್ಞಾನವನ್ನು ಒಳಗೊಂಡ ದೊಡ್ಡ 3700 ಎಂಎಎಚ್ ಬ್ಯಾಟರಿಯನ್ನು ಹೊಂದಿರುವ ಕಂಪನಿಯ ಮೊದಲ ಡಿವೈಸ್ ಆಗಿದೆ. ಅಲ್ಲದೆ, ಆಂಡ್ರಾಯ್ಡ್ ಪೈನಲ್ಲಿ ಹೊರಬರುತ್ತಿರುವ ಮೊದಲ ನಾನ್-ಪಿಕ್ಸೆಲ್ ಸ್ಮಾರ್ಟ್ ಫೋನ್ ಕೂಡ ಇದಾಗಿದೆ.

ಒನ್ ‍ಪ್ಲಸ್ 6ಟಿ ಅನಾವರಣ ಕಾರ್ಯಕ್ರಮ ಲೈವ್

ಒನ್ ‍ಪ್ಲಸ್ 6ಟಿ ಅನಾವರಣ ಕಾರ್ಯಕ್ರಮ ಲೈವ್

ಒನ್ ‍ಪ್ಲಸ್ 6ಟಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು, ಅಲ್ಲಿರುವ ಅನುಭವ ವಲಯದಲ್ಲಿ ಒನ್‍ಪ್ಲಸ್ 6ಟಿ ಸ್ಮಾರ್ಟ್ ಫೋನಿನ ಸ್ಟೈಲ್ ಮತ್ತು ಪವರ್ ಅನ್ನು ಪರಾಮರ್ಶಿಸುವ ಜಗತ್ತಿನ ಮೊದಲಿಗರು ಎಂಬ ಖ್ಯಾತಿ ಪಡೆಯುತ್ತಾರೆ. ಅದರ ಜೊತೆಗೆ, ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಎಲ್ಲ ಅಭಿಮಾನಿಗಳಿಗೂ ಸೂಪರ್ ಆಡ್-ಆನ್ ಗಳು ಹಾಗೂ ಒನ್‍ಪ್ಲಸ್ ಪರಿಕರಗಳುಳ್ಳ ಗಿಫ್ಟ್ ಹ್ಯಾಂಪರ್ ಗಳನ್ನೂ ನೀಡಲಾಗುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ನವದೆಹಲಿಗೆ ಬರಲು ಸಾಧ್ಯವಾಗದವರು, ಅದರ ನೇರಪ್ರಸಾರವನ್ನು ವೀಕ್ಷಿಸಬಹುದು.

ಪ್ರೀ-ಲಾಂಚ್ ಬುಕಿಂಗ್ ಈಗ ಲಭ್ಯ

ಪ್ರೀ-ಲಾಂಚ್ ಬುಕಿಂಗ್ ಈಗ ಲಭ್ಯ

ಮುಂಬರುವ ಒನ್‍ಪ್ಲಸ್ 6ಟಿ ಸ್ಮಾರ್ಟ್ ಫೋನಿನ ಪ್ರೀ-ಲಾಂಚ್ ಬುಕಿಂಗ್ ಈಗಾಗಲೇ ಅಮೆಜಾನ್.ಇನ್, ಕ್ರೋಮಾ ಮಳಿಗೆಗಳು ಮತ್ತು ಒನ್‍ಪ್ಲಸ್ ಎಕ್ಸ್‍ಕ್ಲೂಸಿಟ್ ಮಳಿಗೆಗಳಲ್ಲಿ ಲಭ್ಯವಿದೆ. ಸ್ಮಾರ್ಟ್ ಫೋನನ್ನು ಮೊದಲೇ ಬುಕ್ ಮಾಡುವ ಮೂಲಕ ಗ್ರಾಹಕರು ಇನ್ನಷ್ಟು ಹೆಚ್ಚುವರಿ ಕೊಡುಗೆಗಳನ್ನು ಪಡೆಯಬಹುದಾಗಿದೆ ಮಾತ್ರವಲ್ಲ, ಒನ್ ‍ಪ್ಲಸ್ ನ ಅತ್ಯಾಧುನಿಕ ಫ್ಲ್ಯಾಗ್ ಶಿಪ್ ಅನ್ನು ಮಾರಾಟದ ಮೊದಲ ದಿನವೇ ಕೊಂಡುಕೊಂಡ ಜಾಗತಿಕ ಗ್ರಾಹಕ ಎಂಬ ಹೆಸರನ್ನೂ ಗಳಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
OnePlus has become one of the top brands in the premium smartphone segment in India with the launch of its OnePlus 6 smartphone. On Amazon's Great Indian Festival sale, Oneplus makes Rs 400 crore in the first 36 hours of Amazon's sale
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more