ಒನ್‍ಪ್ಲಸ್‍ನಿಂದ ಬೈಬ್ಯಾಕ್ ಯೋಜನೆ ಆರಂಭ

ಬೆಂಗಳೂರು, ಫೆಬ್ರವರಿ 2: ಜಾಗತಿಕ ಮಟ್ಟದ ಪ್ರೀಮಿಯಂ ಸ್ಮಾರ್ಟ್‍ಫೋನ್ ಕಂಪನಿಯಾದ ಒನ್‍ಪ್ಲಸ್ ಇ-ಸ್ಟೋರ್‍ಗಳು ಮತ್ತು ತನ್ನ ಮಳಿಗೆಗಳಲ್ಲಿ ಕ್ಯಾಶಿಫೈ ಸಹಯೋಗದಲ್ಲಿ ಬೈಬ್ಯಾಕ್ ಪ್ರೋಗ್ರಾಂ' ಅನ್ನು ಪ್ರಕಟಿಸಿದೆ. ಕ್ಯಾಶಿಫೈ ಭಾರತದಲ್ಲಿ ಸ್ಮಾರ್ಟ್‍ಫೋನ್‍ಗಳ ಮಾರಾಟದ ಅತಿ ದೊಡ್ಡ ಮತ್ತು ವಿಶ್ವಾಸಾರ್ಹವಾದ ವೇದಿಕೆಯಾಗಿದೆ.

ಈ ಕಾರ್ಯಕ್ರಮದಿಂದಾಗಿ ಗ್ರಾಹಕರು ವಿನಿಮಯದಡಿ ತಮ್ಮ ಫೋನ್‍ಗಳನ್ನು ನೀಡಿ ಒನ್‍ಪ್ಲಸ್ ಸ್ಮಾರ್ಟ್‍ಫೋನ್‍ಗಳನ್ನು ಖರೀದಿ ಮಾಡಬಹುದಾಗಿದೆ.

ಈ ಮೂಲಕ ಗ್ರಾಹಕರು ತಮ್ಮ ಡಿವೈಸ್‍ಗಳನ್ನು ಅಪ್‍ಗ್ರೇಡ್ ಮಾಡಿಕೊಳ್ಳಲು ಸದವಕಾಶವನ್ನು ಒನ್‍ಪ್ಲಸ್ ಮತ್ತು ಕ್ಯಾಶಿಫೈ ಒದಗಿಸಿಕೊಟ್ಟಿವೆ. ಈ ಕಾರ್ಯಕ್ರಮದಡಿ ಗ್ರಾಹಕರು ಒನ್‍ಪ್ಲಸ್ ಸ್ಟೋರ್‍ಗಳಲ್ಲಿ ಒನ್‍ಪ್ಲಸ್ ಸ್ಮಾರ್ಟ್‍ಫೋನ್ ಖರೀದಿಸುವ ವೇಳೆ ತಕ್ಷಣಕ್ಕೆ ಕ್ಯಾಶಿಫೈನಿಂದ ಹಣವನ್ನು ಪಡೆಯಬಹುದಾಗಿದೆ.

ದೇಶದ 30 ನಗರಗಳಲ್ಲಿರುವ ಒನ್‍ಪ್ಲಸ್ ಸ್ಟೋರ್‍ಗಳಲ್ಲಿ ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್‍ಫೋನ್‍ಗಳಿಗೆ ಶೇ.100 ರಷ್ಟು ಮಾರುಕಟ್ಟೆ ಬೆಲೆಯನ್ನು ಪಡೆಯಲಿದ್ದಾರೆ ಮತ್ತು ಒನ್‍ಪ್ಲಸ್ ಸ್ಮಾರ್ಟ್‍ಫೋನ್ ಖರೀದಿಗೆ ಅಗತ್ಯವಾದ ಹಣವನ್ನು 72 ಗಂಟೆಗಳೊಳಗಾಗಿ ಪಡೆಯಲಿದ್ದಾರೆ.

ಈ ಕಾರ್ಯಕ್ರಮದ ಮತ್ತೊಂದು ವಿಶೇಷವೆಂದರೆ ದೇಶದ ಯಾವುದೇ ಇ-ಕಾಮರ್ಸ್ ಮಾರುಕಟ್ಟೆಗಳಲ್ಲಿ ನೀಡುವ ಬೈಬ್ಯಾಕ್ ಮೌಲ್ಯಕ್ಕಿಂತ ಹೆಚ್ಚು ಮೌಲ್ಯವನ್ನು ಒನ್‍ಪ್ಲಸ್‍ಸ್ಟೋರ್.ಇನ್ ನಲ್ಲಿ ಪಡೆಯಬಹುದಾಗಿದೆ.

ಬೈಬ್ಯಾಕ್ ಯೋಜನೆಯನ್ನು ಪಡೆಯಲು

ಬೈಬ್ಯಾಕ್ ಯೋಜನೆಯನ್ನು ಪಡೆಯಲು

ತಮ್ಮಲ್ಲಿರುವ ಹಳೆಯ ಡಿವೈಸ್ (ಸ್ಮಾರ್ಟ್‍ಫೋನ್)ನ ಅಗತ್ಯ ಮಾಹಿತಿಗಳನ್ನು ನೀಡಿ ಅದರ ಮೌಲ್ಯವನ್ನು ಪಡೆಯಬೇಕು (ಈ ವಿನಿಮಯ ಸೌಲಭ್ಯ ಆಯ್ದ ಡಿವೈಸ್‍ಗಳು ಮತ್ತು ಪಿನ್‍ಕೋಡ್‍ಗಳನ್ನು ಹೊಂದಿದ ಡಿವೈಸ್‍ಗಳಿಗೆ ಸೀಮಿತವಾಗಿದೆ).

ಬೈಬ್ಯಾಕ್ ವಿವರಗಳನ್ನು ಪಡೆಯಿರಿ

ಬೈಬ್ಯಾಕ್ ವಿವರಗಳನ್ನು ಪಡೆಯಿರಿ

ಈ ಬೈಬ್ಯಾಕ್ ಯೋಜನೆಯನ್ನು ಪಡೆಯಲು ಗ್ರಾಹಕರು ಈ ಕೆಳಕಂಡ ಮಾರ್ಗಗಳನ್ನು ಅನುಸರಿಸಬೇಕು. ಬೈಬ್ಯಾಕ್ ವಿವರಗಳನ್ನು ಪಡೆದ ನಂತರ ನೀವು ಹೊಸ ಒನ್‍ಪ್ಲಸ್ ಡಿವೈಸ್ ಅನ್ನು ಖರೀದಿ ಮಾಡಬಹುದು.

ಡಿವೈಸ್‍ಗೆ ಹಣ ಪಾವತಿ

ಡಿವೈಸ್‍ಗೆ ಹಣ ಪಾವತಿ

ಹೊಸ ಒನ್‍ಪ್ಲಸ್ ಡಿವೈಸ್‍ಗೆ ಹಣ ಪಾವತಿ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ ನಿಮಗೆ ಹೊಸ ಒನ್‍ಪ್ಲಸ್ ಸ್ಮಾರ್ಟ್‍ಫೋನ್ ಅನ್ನು ವಿತರಿಸಲಾಗುತ್ತದೆ.

ನಿಮ್ಮ ಆರ್ಡರ್ ಪ್ರಕ್ರಿಯೆ ನಂತರದ 72 ಗಂಟೆಗಳೊಳಗೆ ಕ್ಯಾಶಿಫೈ ಹಳೆಯ ಸ್ಮಾರ್ಟ್‍ಫೋನ್ ಪಡೆಯಲು ಮತ್ತು ಹಣ ಪಾವತಿ ಪ್ರಕ್ರಿಯೆಗೆ ನಿಮ್ಮ ಬಳಿ ಸಮಯ ನಿಗದಿಗೊಳಿಸಲಿದೆ. ಹಳೆಯ ಸ್ಮಾರ್ಟ್‍ಫೋನ್‍ನ ಸಂಪೂರ್ಣ ಪರಿಶೀಲನೆ ನಂತರ ಅದರ ಹಣವನ್ನು ನಗದು ರೂಪದಲ್ಲಿ ನೀಡಲಿದೆ.

ಒನ್‍ಪ್ಲಸ್ ಸ್ಮಾರ್ಟ್‍ಫೋನ್‍ನ ಖರೀದಿ

ಒನ್‍ಪ್ಲಸ್ ಸ್ಮಾರ್ಟ್‍ಫೋನ್‍ನ ಖರೀದಿ

ಅಹ್ಮದಾಬಾದ್, ಆಗ್ರಾ, ಬೆಂಗಳೂರು, ಭೋಪಾಲ್, ಬರೋಡ, ವಡೋದರ, ಚಂಡೀಘಡ, ಚೆನ್ನೈ, ಕೊಯಮತ್ತೂರು, ದೆಹಲಿ, ಫರೀದಾಬಾದ್, ಘಾಜಿಯಾಬಾದ್, ಗಾಂಧಿನಗರ, ಗುರುಗಾಂವ್, ಹೌರಾ, ಹೈದ್ರಾಬಾದ್, ಸಿಕಂದರಾಬಾದ್, ಇಂದೋರ್, ಲಕ್ನೋ, ಜಾಲಂಧರ್, ಕಾನ್ಪುರ, ಕೋಲ್ಕತ್ತಾ, ಲೂಧಿಯಾನ, ಮೊಹಾಲಿ, ಮುಂಬೈ, ನೋಯ್ಡಾ, ನಾಗ್ಪುರ, ನವಿ ಮುಂಬೈ, ಪುಣೆ, ಪಾಂಡಿಚೆರಿ, ಪಂಚಕುಲ, ಸೂರತ್ ಮತ್ತು ಥಾಣೆಯ ಒನ್‍ಪ್ಲಸ್ ಸ್ಟೋರ್‍ಗಳು ಸೇರಿದಂತೆ ವಿವಿಧ ನಗರಗಳಲ್ಲಿ ಈ ಯೋಜನೆ ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+