ಸ್ನಾಪ್ ಡೀಲ್ ನೌಕರರಿಗೆ ಸಿಗಲಿದೆ 193 ಕೋಟಿ ರು. ವೇತನ!

Posted By:
Subscribe to Oneindia Kannada

ಬೆಂಗಳೂರು, ಮೇ 15: ಸದ್ಯದಲ್ಲೇ ದೆಹಲಿ ಮೂಲದ ಆನ್ ಲೈನ್ ಮಾರಾಟ ಜಾಲತಾಣವಾದ ಸ್ನಾಪ್ ಡೀಲ್ ಸಂಸ್ಥೆಯು, ದೇಶದ ಪ್ರತಿಷ್ಠಿತ ಜಾಲತಾಣವಾದ ಫ್ಲಿಪ್ ಕಾರ್ಟ್ ನೊಂದಿಗೆ ವಿಲೀನವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಆ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳ ನಡುವೆ ಮಾತುಕತೆ ಜಾರಿಯಲ್ಲಿದೆ.

ಈ ವಿಲೀನ ಸಾಧ್ಯವಾದರೆ, ಸ್ನಾಪ್ ಡೀಲ್ ಉದ್ಯೋಗಿಗಳಿಗೆ ಈ ವಿಲೀನದ ಕುರುಹಾಗಿ, ವಿಲೀನದ ನಂತರದ ತಿಂಗಳಲ್ಲಿ ಸುಮಾರು 193 ಕೋಟಿ ರು.ಗಳಷ್ಟು ಹೆಚ್ಚುವರಿ ಸಂಬಳ ಸಿಗಲಿದೆ ಎಂದು ಹೇಳಲಾಗಿದೆ.[ಫುಡ್ ಪಾಂಡಾ, ಸ್ವಿಗ್ಗಿ ಖರೀದಿ ಮಾಡಲಿರುವ ಉಬರ್ ಕಂಪನಿ]

Once sold to Flipkart, Snapdeal staff may be richer by Rs 193 crore

ಮೂಲಗಳ ಪ್ರಕಾರ, ಸ್ನಾಪ್ ಡೀಲ್ ಸಂಸ್ಥೆಯು ವಿಲೀನಕ್ಕೂ ಮುನ್ನ ಫ್ಲಿಪ್ ಕಾರ್ಟ್ ಗೆ ಒಂದು ಕಂಡೀಷನ್ ಹಾಕಿದೆ. ಅದರಂತೆ, ಕಂಪನಿ ವಿಲೀನಗೊಂಡರೆ, ಅಲ್ಲಿ ನಿರ್ಧಾರವಾಗುವ ಮೊತ್ತದ ಶೇ. 30ರಷ್ಟು ಭಾಗವನ್ನು ಸ್ನಾಪ್ ಡೀಲ್ ಗೆ ಒನ್ ಟೈಮ್ ಪೇಮೆಂಟ್ ರೂಪದಲ್ಲಿ ಫ್ಲಿಪ್ ಕಾರ್ಟ್ ಹಂಚಬೇಕು. ಏಕೆಂದರೆ, ವಿಲೀನಗೊಂಡ ನಂತರ, ತಮ್ಮ ಸಂಸ್ಥೆಯ ಸಿಬ್ಬಂದಿಗೆ ಯಾವುದೇ ಕೊರತೆಯುಂಟಾಗಬಾರದು ಎಂಬ ಇರಾದೆ ಸ್ನಾಪ್ ಡೀಲ್ ಕಂಪನಿಯದ್ದು.

ಸ್ನಾಪ್ ಡೀಲ್ ನ ಈ ಮಾತು ಸಾಕಾರಗೊಂಡರೆ, ಆ ಸಂಸ್ಥೆಯ 1,500 ರಿಂದ 2,000 ಸಿಬ್ಬಂದಿಗೆ ಈ ಒನ್ ಟೈಮ್ ಪೇಮೆಂಟ್ ಲಾಭ ಸಿಗಲಿದೆ. ಅಷ್ಟೇ ಅಲ್ಲ..... ಕಳೆದ 12 ವರ್ಷಗಳಿಂದೀಚೆಗೆ ಸ್ನಾಪ್ ಡೀಲ್ ಬಿಟ್ಟು ಹೋದ ಅಗ್ರ ಅಧಿಕಾರಿಗಳಿಗೂ ಈ ಲಾಭ ಹೋಗಲಿದೆಯಂತೆ!

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sale of a company often leaves employees high and dry, but not in the case of Snapdeal that may offer a Rs 193 crore bonanza to its staff if the homegrown e-commerce firm is taken over by larger rival Flipkart.
Please Wait while comments are loading...