ಹುಬ್ಬಳ್ಳಿ ಸೇರಿ 75 ನಗರಗಳಿಗೆ ಓಲಾ ಕ್ಯಾಬ್ ವಿಸ್ತರಣೆ

ನವದೆಹಲಿ, ಏಪ್ರಿಲ್ 27: ಅಪ್ಲಿಕೇಷನ್ ಆಧಾರಿತ ಕ್ಯಾಬ್ ಸಾರಿಗೆ ಸೇವೆ ನೀಡುತ್ತಿರುವ ಓಲ ಸಂಸ್ಥೆ ಈಗ ಕರ್ನಾಟಕದ ಹುಬ್ಬಳ್ಳಿ ಸೇರಿದಂತೆ ದೇಶದ 75 ನಗರಗಳಿಗೆ ತನ್ನ ಸೇವೆಯನ್ನು ವಿಸ್ತರಿಸಿದೆ.

ಹುಬ್ಬಳ್ಳಿ ಜೊತೆಗೆ ಪಾಟ್ನ, ಆಲಿಘರ್, ಅಮರಾವತಿ, ಗುಂಟೂರು, ಝಾನ್ಸಿ, ಮಥುರಾ, ರೊರ್ಕೆಲಾ, ತಂಜಾವೂರ್, ಉಜ್ಜಯಿನಿ, ರಾಜಮಂಡ್ರಿ, ರಾಜ್ ಕೋಟ್, ಸಿಲಿಗುರಿ ಮುಂತಾದ ನಗರಗಳಲ್ಲಿ ಇನ್ಮುಂದೆ ಓಲಾ ಕ್ಯಾಬ್ ಸೇವೆ ದೊರೆಯಲಿದೆ ಎಂದು ಓಲಾ ಸಂಸ್ಥೆ ಬುಧವಾರ ಪ್ರಕಟಿಸಿದೆ. [ಇನ್ಫೋಸಿಸ್ ತೊರೆದ ಬನ್ಸಾಲ್ ಈಗ ಓಲಾ ಸಿಎಫ್ಒ]

ಕಡಿಮೆ ವೆಚ್ಚದಲ್ಲಿ ಹವಾನಿಯಂತ್ರಿತ ಕ್ಯಾಬ್ ಸರ್ವೀಸ್ ನೀಡಲು ಮುಂದಾಗಿರುವ ಓಲಾ, ನೇರವಾಗಿ ಉಬರ್ ಕ್ಯಾಬ್ ವಿರುದ್ಧ ಪೈಪೋಟಿಗಿಳಿದಿದೆ.[ಬೆಂಗಳೂರು ಸಿಟಿ ಟ್ಯಾಕ್ಸಿ ದೂರವಾಣಿ ಸಂಖ್ಯೆಗಳು]

Ola takes Micro to 75 Indian cities, claims edge over Uber

ಓಲಾ ಮೈಕ್ರೋ ಸಂಸ್ಥೆ ಆರಂಭಿಸಿ ಕೆಲ ತಿಂಗಳುಗಳಲ್ಲಿ ಈ ರೀತಿ ಪ್ರಗತಿ ಕಾಣುತ್ತಿರುವುದು ಸಂತಸ ತಂದಿದೆ ಎಂದು ಸಂಸ್ಥೆಯ ವಕ್ತಾರರಾದ ರಘುವೇಶ್ ಸರೂಪ್ ಹೇಳಿದ್ದಾರೆ. [ಉಬರ್ ವಿರುದ್ಧ ತೊಡೆತಟ್ಟಿದ ಓಲಾ ತಂತ್ರವೇನು?]

ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ 'ಉಬರ್ ಗೋ' ಆರಂಭಿಸಿದ ಉಬರ್ ಸಂಸ್ಥೆ ಎರಡನೇ ಸ್ತರದ ನಗರ, ಪುಣೆ, ಅಹಮದಾಬಾದ್ 10 ಮೆಟ್ರೋ ರಹಿತ ನಗರಗಳಿಗೆ ಸೇವೆಯನ್ನು ವಿಸ್ತರಿಸಿದ ಬೆನ್ನಲ್ಲೇ ಓಲಾ ತನ್ನ ದಾಳವನ್ನು ಉದುರಿಸಿದೆ. ಈ ಎರಡು ಕಂಪನಿಗಳ ದರ ಸಮರದ ಲಾಭ ಗ್ರಾಹಕರಿಗೆ ಆಗುವ ಎಲ್ಲಾ ನಿರೀಕ್ಷೆಗಳಿವೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+