ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ನೋ ಚೇಂಜ್: ಹುಸಿಯಾಯಿತು ನಿರೀಕ್ಷೆ

Posted By:
Subscribe to Oneindia Kannada

ಮುಂಬೈ, ಡಿಸೆಂಬರ್ 7: ಆರು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಯಲಿದೆಯಾ ಬಡ್ಡಿದರ ಎಂಬ ನಿರೀಕ್ಷೆ ಬುಧವಾರ ಹುಸಿಯಾಗಿದೆ. ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಭೆಯಲ್ಲಿ 0.25ರಷ್ಟು ಮೂಲದರ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಹೀಗೆ ಆಗುವುದರಿಂದ ಸಾಲದ ಮೇಲಿನ ಬಡ್ಡಿ ದರ ಇಳಿಕೆಯಾಗುತ್ತದೆ. ಅದರಿಂದ ವ್ಯಾಪಾರ-ವ್ಯವಹಾರಕ್ಕೆ ಪ್ರೋತ್ಸಾಹ ದೊರೆಯುತ್ತದೆ ಎಂದು ಎದುರು ನೋಡುತ್ತಿದ್ದರು.

ಆದರೆ, ನೋಟು ರದ್ದು ನಿರ್ಧಾರ ಘೋಷಿಸಿದ ನಂತರ ನಡೆದ ಆರ್ ಬಿಐನ ಮೊದಲ ಹಣಕಾಸು ನೀತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಈಗಾಗಲೇ ಹಲವು ಷೇರು ದಲ್ಲಾಳಿಗಳು ಈ ವರ್ಷ ಜಿಡಿಪಿ ಕಡಿಮೆ ಆಗುತ್ತದೆ ಎಂದಿದ್ದರು. ಶೇ 86ರಷ್ಟು ಚಲಾವಣೆಯಲ್ಲಿದ್ದ 500, 1000 ನೋಟುಗಳನ್ನು ರದ್ದು ಮಾಡುವ ಮೂಲಕ ಮೋದಿ ಆಘಾತ ನೀಡಿದ್ದರು.[ಬ್ಯಾಂಕ್ ಗಳ ಬಾಗಿಲಿಗೆ ಬಂದಿದ್ದು 1,39,667 ಖೋಟಾ ನೋಟುಗಳು!]

No RBI Repo Rate Cut

ಆ ನಂತರದ ಸ್ಥಿತಿಯನ್ನು ಅವಲೋಕಿಸಿ, ಈ ಬಾರಿ ರೆಪೋ ದರ ಇಳಿಕೆಯಾಗಬಹುದು ಎಂಬ ನಿರೀಕ್ಷೆ ಮಾರುಕಟ್ಟೆಯಿಂದಲೂ ಇತ್ತು. ಇಂದಿನ ನಿರ್ಧಾರ ಪ್ರಕಟವಾದ ಕೂಡಲೆ ಸೆನ್ಸೆಕ್ಸ್ 155 ಅಂಶಗಳಷ್ಟು ಕುಸಿದಿದೆ. ಈ ಬಗ್ಗೆ ಒನ್ ಇಂಡಿಯಾ ಕನ್ನಡದ ಜತೆಗೆ ಮಾತನಾಡಿದ ಮಾರುಕಟ್ಟೆ ತಜ್ಞ ಹಾಗೂ ಅಂಕಣಕಾರ ಕೆ.ಜಿ.ಕೃಪಾಲ್, ಇದು ಅನಿರೀಕ್ಷಿತ ಎಂದರು.[ಜನ್ ಧನ್ ಖಾತೆದಾರರಿಗೆ ಶಾಕ್ ನೀಡಿದ ಆರ್ ಬಿಐ]

ಡಿಸೆಂಬರ್ 30ರ ನಂತರ ಪರಿಸ್ಥಿತಿ ನೋಡಿಕೊಂಡು ಘೋಷಣೆ ಮಾಡಬಹುದು. ಸದ್ಯಕ್ಕಂತೂ ಕ್ಯಾಷ್ ರಿಸರ್ವ್ ರೇಷಿಯೋ ಹೆಚ್ಚಳಕ್ಕೆ ಸಂಬಂಧಿಸಿದ ಹಾಗೆ ತೆಗೆದುಕೊಂಡಿದ್ದ ತಾತ್ಕಾಲಿಕ ನಿರ್ಧಾರವನ್ನು ಡಿಸೆಂಬರ್ 10ರ ನಂತರ ಹಿಂಪಡೆಯಲಾಗಿದೆ. ಮಾರುಕಟ್ಟೆ ಹೀಗೆ ಪ್ರತಿಕ್ರಿಯಿಸುತ್ತಿರುವುದಕ್ಕೆ ಇದೊಂದನ್ನೇ ಕಾರಣ ಮಾಡಲಾಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Reserve Bank of India has kept its repo rate unchanged at 6.25 per cent in its first monetary policy review after the notes ban, surprising the street.
Please Wait while comments are loading...