ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಎ ಹೆಚ್ಚಳ ನಿರೀಕ್ಷೆ ಸುಳ್ಳಲ್ಲ, ಹೊಸ ವೇತನ ಆಯೋಗ ಸದ್ಯಕ್ಕಿಲ್ಲ

|
Google Oneindia Kannada News

ನವದೆಹಲಿ, ಆಗಸ್ಟ್ 10: ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ಸುದ್ದಿ ಕೆಲ ಸಮಯದಿಂದ ಚಾಲ್ತಿಯಲ್ಲಿದೆ. ಈ ಕುರಿತಂತೆ ಕೊನೆಗೂ ಅಧಿಕೃತ ಹೇಳಿಕೆ ಹೊರ ಬಂದಿದೆ. ಜೊತೆಗೆ ಹೊಸ ವೇತನ ಆಯೋಗ ರಚನೆ, ಶಿಫಾರಸ್ಸಿನ ಬಗ್ಗೆ ಮೂಡಿದ್ದ ಗೊಂದಲಕ್ಕೆ ಉತ್ತರ ಸಿಕ್ಕಿದೆ.

ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಪಿಂಚಣಿದಾರರಿಗೆ ಜುಲೈ ತಿಂಗಳ ಅಂತ್ಯದಲ್ಲೇ ತುಟ್ಟಿಭತ್ಯೆ ಅಥವಾ ಡಿಎ ಮತ್ತು ತುಟ್ಟಿಭತ್ಯೆ ಪರಿಹಾರ (ಡಿಆರ್) ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ವರದಿ ಬಂದಿತ್ತು. ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ನಿರೀಕ್ಷೆಯಂತೆ ಈ ಬಗ್ಗೆ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸಂಸತ್ತಿನಲ್ಲೇ ಉತ್ತರಿಸಿದ್ದಾರೆ.

ತುಟ್ಟಿಭತ್ಯೆ ಹೆಚ್ಚಳ ಯಾವಾಗ? ನೌಕರರ ಕಾತುರದ ಪ್ರಶ್ನೆಗೆ ಇಲ್ಲಿದೆ ಉತ್ತರತುಟ್ಟಿಭತ್ಯೆ ಹೆಚ್ಚಳ ಯಾವಾಗ? ನೌಕರರ ಕಾತುರದ ಪ್ರಶ್ನೆಗೆ ಇಲ್ಲಿದೆ ಉತ್ತರ

ಹೀಗಾಗಿ, ಕೇಂದ್ರ ಸರ್ಕಾರಿ ನೌಕರರಿಗೆ ವೇತನ, ತುಟ್ಟಿಭತ್ಯೆ ಕುರಿತಂತೆ ಎಂಟನೇ ವೇತನ ಆಯೋಗದ ರಚನೆ ಕುರಿತಂತೆ ಯಾವುದೇ ಪ್ರಸ್ತಾವನೆಯನ್ನು ಸರ್ಕಾರವು ಪರಿಗಣಿಸುತ್ತಿಲ್ಲ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ತಿಳಿಸಿದ್ದಾರೆ.

ಪ್ರತಿ 10 ವರ್ಷಗಳ ನಂತರ ಸರ್ಕಾರಿ ನೌಕರರ ವೇತನ ರಚನೆಯನ್ನು ಪರಿಷ್ಕರಿಸಲು ಕೇಂದ್ರವು ವೇತನ ಆಯೋಗವನ್ನು ರಚಿಸುತ್ತದೆ. 7 ನೇ ವೇತನ ಆಯೋಗವನ್ನು ಫೆಬ್ರವರಿ 28 2014 ರಂದು ರಚಿಸಲಾಯಿತು.

ತುಟ್ಟಿಭತ್ಯೆ ಬಾಕಿಯ ಬಗ್ಗೆ ಮೋದಿ ಸರ್ಕಾರ

ತುಟ್ಟಿಭತ್ಯೆ ಬಾಕಿಯ ಬಗ್ಗೆ ಮೋದಿ ಸರ್ಕಾರ

ತುಟ್ಟಿಭತ್ಯೆ ಹೆಚ್ಚಳದ ಜೊತೆಗೆ 18 ತಿಂಗಳ ತುಟ್ಟಿಭತ್ಯೆ ಬಾಕಿಯ ಬಗ್ಗೆ ಮೋದಿ ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ. ತುಟ್ಟಿಭತ್ಯೆ ಪ್ರಸ್ತುತ ಶೇಕಡಾ 31 ರಷ್ಟಿದೆ. ಈ ವರ್ಷ ಜುಲೈ ಮೊದಲು, ಇದು 17 ಪ್ರತಿಶತದಷ್ಟಿತ್ತು, ತುಟ್ಟಿಭತ್ಯೆ ಪರಿಹಾರ(ಡಿಆರ್) ಕೂಡಾ ಶೇ 3ರಷ್ಟಿದೆ. ವೆಚ್ಚ ಇಲಾಖೆಯ ವಾರ್ಷಿಕ ವರದಿಯ ಪ್ರಕಾರ, ದೇಶದಲ್ಲಿ ಒಟ್ಟು 48 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68.62 ಲಕ್ಷ ಪಿಂಚಣಿದಾರರಿದ್ದಾರೆ. ಸರಿ ಸುಮಾರು ಶೇ 4 ರಿಂದ 6 ರಷ್ಟು ಡಿಎ ಹೆಚ್ಚಳದ ನಿರೀಕ್ಷೆಯಂತೂ ಇದ್ದೆ ಇದೆ.

AICPI ಸೂಚ್ಯಂಕದ ಆಧಾರದ ಮೇಲೆ

AICPI ಸೂಚ್ಯಂಕದ ಆಧಾರದ ಮೇಲೆ

ಡಿಎ ಅನ್ನು ರೀಟೇಲ್ ಹಣದುಬ್ಬರದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ, ಇದು ಸ್ವಲ್ಪ ಸಮಯದಿಂದ ಶೇಕಡಾ 7 ಕ್ಕಿಂತ ಅಧಿಕವಾಗಿದೆ. ಶೇ 3 ರಿಂದ 4 ರಷ್ಟು ಡಿಎ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತವೆ. AICPI ಸೂಚ್ಯಂಕದ ಆಧಾರದ ಮೇಲೆ ಹೇಳುವುದಾದರೆ ಶೇ 4ರಷ್ಟು ಡಿಎ ಹೆಚ್ಚಳ ನಿರೀಕ್ಷಿಸಬಹುದು. ಏಪ್ರಿಲ್‌ನಲ್ಲಿ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) 127.7 ಪಾಯಿಂಟ್‌ಗಳಿಗೆ ಏರಿದೆ. ಇನ್ನು ಮೇ, ಜೂನ್ ಅಂಕಿ ಅಂಶವನ್ನು ಕೂಡಾ ಪರಿಶೀಲನೆ ಮಾಡಿದರೆ, ಡಿಎ ಮತ್ತೆ ಶೇಕಡ 5 ರಿಂದ 6ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಶೇ 5ರಷ್ಟು ಏರಿಕೆ ಕಂಡರೆ ತಿಂಗಳಿಗೆ ಮೂಲ ವೇತನಕ್ಕೆ ಅನುಸಾರವಾಗಿ 3,400 ರು ಅಥವಾ ವಾರ್ಷಿಕ 40,000 ರು ತನಕ ಸಂಬಳದಲ್ಲಿ ಏರಿಕೆ ಕಾಣಬಹುದು.

ಡಿಎ ಶೇಕಡ 34ರಷ್ಟು ಡಿಎರಷ್ಟಿದೆ

ಡಿಎ ಶೇಕಡ 34ರಷ್ಟು ಡಿಎರಷ್ಟಿದೆ

7ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್ ಅನ್ನು ಜುಲೈ 2021 ರಲ್ಲಿ ಹೆಚ್ಚಿಸಲಾಯಿತು. ಜನವರಿ 1, 2022 ರಲ್ಲಿ ಶೇ 3ರಷ್ಟು ಡಿಎ ಹೆಚ್ಚಳವಾಗಿದ್ದು ಸದ್ಯ ಡಿಎ ಶೇಕಡ 34ರಷ್ಟು ಡಿಎರಷ್ಟಿದೆ. ಜುಲೈ 2021 ರಲ್ಲಿ ಕೇಂದ್ರವು 7 ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ 17 ರಿಂದ 28 ರಷ್ಟು DA ಯನ್ನು ಪರಿಷ್ಕರಿಸಿತ್ತು. 2021 ರ ಅಕ್ಟೋಬರ್‌ನಲ್ಲಿ ಸರ್ಕಾರವು ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಿತು.

ತುಟ್ಟಿ ಭತ್ಯೆ(dearness allowance)

ತುಟ್ಟಿ ಭತ್ಯೆ(dearness allowance)

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ. ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕ ಆಧಾರಿಸಿ ಲೆಕ್ಕಮಾಡಲಾಗುತ್ತದೆ. ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ.

Recommended Video

Hubballi ಯ Engineering collegeನ ಕಿರಾತಕರು ಮಾಡಿದ್ದೇನು ಗೊತ್ತಾ...? | OneIndia Kannada
ಎಂಟನೇ ವೇತನ ಆಯೋಗದ ಬಗ್ಗೆ ಏನಿದೆ ಸುದ್ದಿ

ಎಂಟನೇ ವೇತನ ಆಯೋಗದ ಬಗ್ಗೆ ಏನಿದೆ ಸುದ್ದಿ

ಕೇಂದ್ರ ಸರ್ಕಾರಿ ನೌಕರರಿಗೆ ಎಂಟನೇ ವೇತನ ಆಯೋಗವನ್ನು ಜನವರಿ 1, 2026 ರಂದು ಜಾರಿಗೆ ತರಬಹುದು ಎಂಬ ನಿರೀಕ್ಷೆಯಿದೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿ, "ಹಣದುಬ್ಬರದ ಕಾರಣದಿಂದ ಕೇಂದ್ರ ಸರ್ಕಾರಿ ನೌಕರರು ತಮ್ಮ ಸಂಬಳದ ನೈಜ ಮೌಲ್ಯದಲ್ಲಿನ ಸವೆತವನ್ನು ಸರಿದೂಗಿಸಲು, ಅವರಿಗೆ ತುಟ್ಟಿ ಭತ್ಯೆಗಳನ್ನು (ಡಿಎ) ಪಾವತಿಸಲಾಗುತ್ತದೆ ಮತ್ತು ದರದ ಆಧಾರದ ಮೇಲೆ ಪ್ರತಿ ಆರು ತಿಂಗಳಿಗೊಮ್ಮೆ ಡಿಎ ದರವನ್ನು ನಿಯತಕಾಲಿಕವಾಗಿ ಪರಿಷ್ಕರಿಸಲಾಗುತ್ತದೆ. ಕೈಗಾರಿಕಾ ಕಾರ್ಮಿಕರಿಗೆ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಮಿಕ ಬ್ಯೂರೋ ಬಿಡುಗಡೆ ಮಾಡಿದ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ ಹಣದುಬ್ಬರ ಆಧಾರದ ಮೇಲೆ ದರ ಪರಿಷ್ಕರಿಸಲಾಗುತ್ತದೆ "ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದರು.

English summary
After setting up the 7th Pay Commission questions have been asked on whether the government would set up an 8th Pay Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X