• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಕಾನ್ ಸಂಸ್ಥೆಯಿಂದ ಫುಲ್ ಫ್ರೇಂ ಮಾದರಿ ಸಪೂರ ಕ್ಯಾಮೆರಾ

|

ಬೆಂಗಳೂರು, ಜುಲೈ 23: ವಿಶ್ವದ ಖ್ಯಾತ ಕ್ಯಾಮೆರಾ ತಯಾರಿಕಾ ಸಂಸ್ಥೆ ನಿಕಾನ್ ಕಾರ್ಪೊರೇಷನ್ ಟೋಕಿಯೋದ ಅಂಗಸಂಸ್ಥೆಯಾಗಿರುವ ನಿಕಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಭಾರತದಲ್ಲಿ ಹೊಸ NIKKOR Z 24-50mm f/4-6.3 ಮತ್ತು Nikon Z 5 ಕ್ಯಾಮೆರಾವನ್ನು ಬಿಡುಗಡೆ ಮಾಡಿದೆ.

   Sonu Sood : ವಲಸೆ ಕಾರ್ಮಿಕರಿಗಾಗಿ ಹೊಸ ಯೋಜನೆ ರೂಪಿಸಿದ ಬಾಲಿವುಡ್ ಸ್ಟಾರ್ | Oneindia Kannada

   Nikon Z 5 ಒಂದು ಕಾಂಪ್ಯಾಕ್ಟ್ ಮತ್ತು ಹಗುರವಾದ ಕ್ಯಾಮೆರಾವಾಗಿದೆ. ಕೇವಲ ಸುಮಾರು 675 ಗ್ರಾಂಗಳ ತೂಕವಿರುವುದರಿಂದ ಬಳಕೆದಾರರು ಇದನ್ನು ಅತ್ಯಂತ ಸುಲಭವಾಗಿ ಹಿಡಿದು ಚಿತ್ರಗಳು ಮತ್ತು ವಿಡಿಯೋಗಳನ್ನು ಕಡಿಮೆ ಬೆಳಕಿನಲ್ಲಿಯೂ ಅತ್ಯಂತ ಸುಂದರವಾಗಿ ಸೆರೆ ಹಿಡಿಯಬಹುದಾಗಿದೆ. ಹ್ಯಾಂಡ್ ಹೆಲ್ಡ್ ಶೂಟಿಂಗ್ ಅನ್ನು ಶಾರ್ಪ್ ಆಗಿ ಮಾಡಬಹುದಾಗಿದೆ. ಕ್ಯಾಮೆರಾ ಶೇಕ್ ಆಗುವುದನ್ನು ತಪ್ಪಿಸುತ್ತದೆ ಮತ್ತು ಈ ಬಗ್ಗೆ ನಿಖರತೆಯನ್ನು ಹೊಂದಿರುತ್ತದೆ. ಇದರ ಮೂಲಕ ತನ್ನ 5 ಆ್ಯಕ್ಸಿಸ್ ನೊಂದಿಗೆ ಗರಿಷ್ಠ ಮಟ್ಟದ ಎಫೆಕ್ಟ್ ಗಳನ್ನು ನೀಡಲಿದೆ.

   ಈ ಕ್ಯಾಮೆರಾವು ಬಳಕೆದಾರ ಸ್ನೇಹಿಯಾಗಿದ್ದು, ಹಿಡಿಯುವುದು ಮತ್ತು ಟಚ್ ಸ್ಕ್ರೀನ್ ಮೂಲಕ ಸುಲಭವಾಗಿ ಕಾರ್ಯಾಚರಣೆ ನಡೆಸಬಹುದು. ಇದರಲ್ಲಿನ "i-Menu" ಒಂದು ಇಂಟರ್ ಫೇಸ್ ನಲ್ಲಿ ಆಗಾಗ್ಗೆ ಬಳಕೆ ಮಾಡುವ ಶಾರ್ಟ್ ಕಟ್ ಗಳನ್ನು ಒದಗಿಸುತ್ತದೆ.

   ಅತ್ಯುತ್ಕೃಷ್ಠವಾದ ಕಾರ್ಯಕ್ಷಮತೆ ಮತ್ತು ಅತ್ಯಂತ ಹಗುರವಾದ ವಿನ್ಯಾಸವನ್ನು ಹೊಂದಿರುವ Nikon Z 5 ಮತ್ತು NIKKOR Z 24-50mm f/4-6.3 ಅತ್ಯುತ್ತಮ ಗುಣಮಟ್ಟ ಮತ್ತು ಕಾರ್ಯವನ್ನು ಬಯಸುವವರಿಗಾಗಿ ಸುಸಜ್ಜಿತ ಕ್ಯಾಮೆರಾಗಳಾಗಿವೆ.

   ಈ ಬಗ್ಗೆ ಮಾತನಾಡಿದ ನಿಕಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಕುಮಾರ್ ಅವರು, '' NIKKOR Z 24-50mm f/4-6.3 ನೊಂದಿಗೆ Nikon Z 5 ಕ್ಯಾಮೆರಾ ಕಂಟೆಂಟ್ ರಚನೆಕಾರರು ಮತ್ತು ಉತ್ಸಾಹಿ ಛಾಯಾಚಿತ್ರಕಾರರಿಗೆ ತಮ್ಮ ನಿರೀಕ್ಷೆಗಳನ್ನು ಉನ್ನತ ಮಟ್ಟಕ್ಕೆ ಹೆಚ್ಚಿಸಿಕೊಳ್ಳಲು ಪರಿಪೂರ್ಣವಾದ ಬ್ಲೆಂಡ್ ಆಗಿವೆ. ಧೂಳು ಮತ್ತು ನೀರು ನಿರೋಧಕ ವೈಶಿಷ್ಟ್ಯತೆಯನ್ನು ಹೊಂದಿರುವ ಈ ಕ್ಯಾಮೆರಾ ಯಾವುದೇ ಸಂದರ್ಭದಲ್ಲಾದರೂ, ಯಾವುದೇ ಸ್ಥಳದಲ್ಲಿಯಾದರೂ ಯಾವುದೇ ತೊಂದರೆ ಅಥವಾ ಅಡ್ಡಿ ಇಲ್ಲದ ರೀತಿಯಲ್ಲಿ ಬಳಸಲು ಯೋಗ್ಯವಾಗಿದೆ'' ಎಂದು ತಿಳಿಸಿದರು.

   NIKKOR Z 24-50mm f/4-6.3 ಪ್ರಯಾಣದ ವೇಳೆ ನಿಮಗೆ ಪರಿಪೂರ್ಣವಾದ ಸಂಗಾತಿಯಾಗಲಿದೆ. ಇದರ ಕಾಂಪ್ಯಾಕ್ಟ್ ಬಾಡಿಯು ಇತರೆ ಫುಲ್ ಫ್ರೇಂ ಮಾದರಿಯ ಝೂಂ ಲೆನ್ಸ್ ಗಳಿಗಿಂತ ಸಣ್ಣದಾಗಿದೆ ಮತ್ತು ಹಗುರವಾಗಿದೆ. 195 ಗ್ರಾಂ ಗಳ ತೂಕದ ಈ ಕ್ಯಾಮೆರಾ ಬಟನ್ ರಹಿತ ರೆಟ್ರಾಕ್ಟೇಬಲ್ ತಾಂತ್ರಿಕತೆಯನ್ನು ಹೊಂದಿದೆ. ಕೇವಲ 51 ಎಂಎಂ ಸುತ್ತಳತೆಯನ್ನು ಹೊಂದಿದ್ದು, ಅತ್ಯಂತ ಸ್ಲಿಮ್ ಕ್ಯಾಮೆರಾ ಎನಿಸಿದೆ.

   ಇದರಲ್ಲಿನ ಮತ್ತೊಂದು ವಿಶೇಷವೆಂದರೆ, ಯುಎಸ್ ಬಿ ಚಾರ್ಜಿಂಗ್ ಗೆ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡದಿದ್ದರೂ ಪ್ರಯಾಣದ ಸಂದರ್ಭದಲ್ಲಿಯೇ ಯುಎಸ್ ಬಿ ಪೋರ್ಟ್ ಅಥವಾ ಯುಎಸ್ ಬಿ ಆಧಾರಿತ ಪವರ್ ಬ್ಯಾಂಕ್ ಗಳ ಮೂಲಕ ಚಾರ್ಜ್ ಮಾಡಿಕೊಂಡು ನಿಶ್ಚಿಂತೆಯಾಗಿ ಕ್ಯಾಮೆರಾವನ್ನು ಬಳಸಬಹುದಾಗಿದೆ.

   Z5 ಬಾಡಿ ಮಾತ್ರ: INR 113,995

   NIKKOR Z 24-50mm f/4-6.3: INR

   39,995

   Z 5 Kit with NIKKOR Z 24-50mm f/4-6.3 Lens: INR 136,995

   English summary
   The Nikon Z50 features a new full-frame sensor without back illumination, and offers a lower price version of Nikon's Z series full frame mirrorless camera experience.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more