ಮೋದಿಗೆ ಥಮ್ಸ್ ಅಪ್ ಹೇಳಿದ ಮುಖೇಶ್ ಅಂಬಾನಿ

Posted By:
Subscribe to Oneindia Kannada

ಮುಂಬೈ, ಡಿಸೆಂಬರ್ 1: ಪ್ರಧಾನಿ ಮೋದಿ ಅವರು ಜಾರಿಗೊಳಿಸಿರುವ ಅಪನಗದೀಕರಣ (Demonetisation) ಯೋಜನೆಗೆ ರಿಲಯನ್ಸ್ ಸಂಸ್ಥೆ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು 'ಥಮ್ಸ್ ಅಪ್' ಹೇಳಿದ್ದಾರೆ. ಇದು ಐತಿಹಾಸಿಕ ನಡೆಯಾಗಿದ್ದು, ಇದರಿಂದ ಡಿಜಿಟಲ್ ಆರ್ಥಿಕ ವ್ಯವಸ್ಥೆ ಬಲಗೊಳ್ಳಲಿದೆ, ನಗದು ರಹಿತ ವಹಿವಾಟು ಆರಂಭವಾಗಲಿದೆ ಎಂದರು.

ಜಿಯೋ, 4ಜಿ ಸವಲತ್ತುಗಳೊಂದಿಗೆ ಬಿಡುಗಡೆಯಾದ ಮೂರೇ ತಿಂಗಳುಗಳ ಒಳಗಾಗಿ ದೇಶದ ಅತೀ ದೊಡ್ಡ (ವಿಸ್ತಾರ ತರಂಗ) ಬ್ರಾಡ್ ಬ್ಯಾಂಡ್ ಆಪರೇಟರಾಗಿ ಹೊರಹೊಮ್ಮಿರುವ ಸಂದರ್ಭದಲ್ಲಿ ಮಾತನಾಡಿದ ಮುಖೇಶ್ ಅಂಬಾನಿ, ಡಿಜಿಟಲ್ ರೀಟೈಲ್ ವ್ಯವಸ್ಥೆ 'ಜಿಯೋ ಮನಿ ಮರ್ಚೆಂಟ್ ಸಲ್ಯೂಷನ್ಸ್' ಸ್ಥಾಪಿಸುವುದಾಗಿ ಘೋಷಿಸಿದರು.

Mukesh Ambani gives thumb's up to Demonetisation, extends Reliance Jio Offer

ಜಿಯೋ ಹೊಸದೊಂದು ದಾಖಲೆಯನ್ನು ನಿರ್ಮಿಸುತ್ತಾ, ಪ್ರತೀ ನಿಮಿಷಕ್ಕೆ 1000 (ಸಪ್ಟೆಂಬರ್ 5ರ ನಂತರ) ಚಂದಾದಾರರನ್ನು ಹಾಗೂ ಪ್ರತೀ ದಿನಕ್ಕೆ 6 ಲಕ್ಷ ಚಂದಾದಾರರನ್ನು ಪಡೆದುಕೊಂಡಿದೆ. [4ಜಿ: ಭಾರ್ತಿ ಏರ್ ಟೆಲ್ ಗೆ 12 ವರುಷ, ಜಿಯೋಗೆ 83 ದಿನ!]

"ಜಿಯೋ ವಿಶ್ವದಲ್ಲೇ ಅತ್ಯಂತ ಶೀಘ್ರವಾಗಿ ಬೆಳೆಯುತ್ತಿರುವ ಕಂಪೆನಿ ಹಾಗೂ ಆರಂಭಗೊಂಡ 83 ದಿನಗಳಲ್ಲಿ ದಾಖಲೆಯ 50 ಮಿಲಿಯನ್ ಚಂದಾದಾರರನ್ನು ಒಳಗೊಂಡಿದೆ" ಎಂದು ಘೋಷಿಸಿದರು.

ಏರ್ ಟೆಲ್ ಈ 50 ಮಿಲಿಯನ್ ಮೈಲುಗಲ್ಲನ್ನು ತಲುಪಲು ಬರೋಬ್ಬರಿ 12 ವರುಷಗಳನ್ನು ತೆಗೆದುಕೊಂಡಿದ್ದರೆ, ಐಡಿಯಾ ಹಾಗೂ ವೊಡಾಫೋನ್ ಗಳಿಗೆ ಈ ಸಂಖ್ಯೆಯನ್ನು ತಲುಪಲು ತಲಾ 13 ವರುಷಗಳು ಬೇಕಾಯಿತು.

ಜಿಯೊ ಉಚಿತ ಸೇವೆ ವಿಸ್ತರಣೆ: ರಿಲಯನ್ಸ್‌ ಜಿಯೊ ಈಗ ನೀಡುತ್ತಿರುವ ಡೇಟಾ ಹಾಗೂ ಕರೆಗಳ ಉಚಿತ ಸೇವೆಯನ್ನು ಮಾರ್ಚ್‌ 31, 2017ರ ತನಕ ವಿಸ್ತರಿಸಲಾಗಿದೆ. ಜಿಯೋ ಉಚಿತ ಸೇವೆ ಡಿಸೆಂಬರ್‌ 31ಕ್ಕೆ ಕೊನೆಗೊಳ್ಳಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು.

ಹಾಲಿ ಗ್ರಾಹಕರು ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ಗ್ರಾಹಕರು 2017ರ ಮಾರ್ಚ್‌ 31ರವರೆಗೆ ಉಚಿತ ಸೇವೆಯನ್ನು ಪಡೆಯಬಹುದು' ಎಂದು ರಿಲಯನ್ಸ್‌ ಜಿಯೊ ಅಧ್ಯಕ್ಷ ಮುಖೇಶ್‌ ಅಂಬಾನಿ ಘೋಷಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Reliance Industry Limited’s Chairman and Managing Director Mukesh Ambani on Thursday gave Prime Minister Narendra Modi's demonetisation policy a thumb's up during an event celebrating Reliance Jio crossing the 50 million subscriber mark in just 83 days.
Please Wait while comments are loading...