RIL ಹಕ್ಕುಗಳ ಷೇರು ನೀಡಿಕೆಯಲ್ಲಿ 5.52 ಲಕ್ಷ ಷೇರುಗಳನ್ನು ಪಡೆದ ಮುಕೇಶ್ ಅಂಬಾನಿ

ರಿಲಯನ್ಸ್ ಇಂಡಸ್ಟ್ರೀಸ್ ಲಿಮೆಟೆಡ್ ಮುಖ್ಯಸ್ಥ ಮುಕೇಶ್ ಅಂಬಾನಿ ತಮ್ಮ ಆರ್‌ಐಎಲ್ ಕಂಪನಿಯ ಹಕ್ಕಿನ ಷೇರು ನೀಡಿಕೆಯಲ್ಲಿ 5.52 ಲಕ್ಷ ಷೇರುಗಳನ್ನು ಪಡೆದುಕೊಂಡಿದ್ದಾರೆ.

ಈ ಮೂಲಕ ಕಂಪನಿಯಲ್ಲಿನ ಅವರ ಷೇರುಗಳ ಸಂಖ್ಯೆಯು ಈಗ 80.52 ಲಕ್ಷಕ್ಕೆ (0.12 ಪರ್ಸೆಂಟ್‌)ಗೆ ತಲುಪಿದೆ. ಮುಕೇಶ್ ಪತ್ನಿ ನೀತಾ, ಮಕ್ಕಳಾದ ಇಷಾ, ಆಕಾಶ್ ಹಾಗೂ ಅನಂತ್ ಅವರು ಕೂಡ ತಲಾ 5.52 ಲಕ್ಷ ಷೇರುಗಳನ್ನು ಪಡೆದುಕೊಂಡಿದ್ದಾರೆ.

ಪ್ರವರ್ತಕರ ತಂಡವು ಒಟ್ಟಾರೆ 22.50 ಲಕ್ಷ ಹಕ್ಕಿನ ಷೇರುಗಳನ್ನು ಪಡೆದುಕೊಂಡಂತೆ ಆಗಿದೆ. ಈಗ ಕಂಪನಿಯಲ್ಲಿನ ಪ್ರವರ್ತಕರ ಪಾಲು 50.29 ಪರ್ಸೆಂಟ್‌ಗೆ ತಲುಪಿದೆ. ಆದರೆ ಇದಕ್ಕೂ ಮೊದಲು ಇದು 50.07 ಪರ್ಸೆಂಟ್‌ರಷ್ಟಿತ್ತು.

Mukesh Ambani Gets 5.52 Lakh Shares In RIL Right Issue

ಸಾರ್ವಜನಿಕ ಷೇರುಗಳನ್ನು 49.93 ಪರ್ಸೆಂಟ್‌ರಿಂದ 49.71 ಪರ್ಸೆಂಟ್‌ಗೆ ಇಳಿಸಲಾಗಿದೆ ಎಂದು ಫೈಲಿಂಗ್ ತೋರಿಸಿದೆ. ಸರ್ಕಾರಿ ಸ್ವಾಮ್ಯದ ಜೀವ ವಿಮಾ ನಿಗಮ (ಎಲ್‌ಐಸಿ) 2.47 ಕೋಟಿ ಷೇರುಗಳನ್ನು ಖರೀದಿಸಿದ್ದು, ಕಂಪನಿಯಲ್ಲಿನ ಪಾಲು ಈಗ 6 ಪರ್ಸೆಂಟ್‌ಗೆ ಏರಿಕೆಯಾಗಿದೆ.

ಕಂಪನಿಯು ಏಪ್ರಿಲ್ 30ರಂದು 53,124 ಕೋಟಿ ಮೊತ್ತದ ಬಂಡವಾಳ ಸಂಗ್ರಹಿಸಲು 1:5 ಅನುಪಾತದಲ್ಲಿ ಹಕ್ಕಿನ ಷೇರು ನೀಡಿಕೆಯನ್ನು ಏಪ್ರಿಲ್‌ನಲ್ಲಿ ಪ್ರಕಟಿಸಿತ್ತು. 1,257 ರೂ.ಗಳಲ್ಲಿರುವ ಪ್ರತಿ 15 ಷೇರುಗಳಿಗೆ ಒಂದು ಷೇರನ್ನು ನೀಡಲಾಗುತ್ತಿತ್ತು, ಇದು ಏಪ್ರಿಲ್ 30 ರ ಮುಕ್ತಾಯದ ಬೆಲೆಗೆ 14 ಪರ್ಸೆಂಟ್ ರಿಯಾಯಿತಿ ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+