ಇನ್ನು 6 ಖಾಸಗಿ ಸಂಸ್ಥೆಗಳಿಂದ ಪೆಟ್ರೋಲ್, ಡೀಸೆಲ್ ಮಾರಾಟ

ನವದೆಹಲಿ, ಆಗಸ್ಟ್ 25: ಭಾರತದ ಇಂಧನ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯದ ಮೂರು ಸಂಸ್ಥೆಗಳ ಏಕಸ್ವಾಮ್ಯತೆ ಜೊತೆಗೆ ಕೆಲವು ಖಾಸಗಿ ಕಂಪನಿಗಳು ಅಸ್ತಿತ್ವದಲ್ಲಿವೆ. ಈಗ ಪೂರೈಕೆಗೆ ಬೇಡಿಕೆ ಹೆಚ್ಚಾಗಿದ್ದು, ಶೀಘ್ರದಲ್ಲೇ ಇನ್ನು 6 ಖಾಸಗಿ ಕಂಪನಿಗಳು ಇಂಧನ ಪೂರೈಕೆ ಮಾಡಲು ಸಜ್ಜಾಗಿವೆ. ಕೇಂದ್ರ ಸರ್ಕಾರರಿಂದ ಅನುಮತಿ ಸಿಗುತ್ತಿದ್ದಂತೆ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿವೆ.

ಐಎಂಸಿ, ಆನ್ ಸೈಟ್ ಎನರ್ಜಿ, ಅಸ್ಸಾಂ ಗ್ಯಾಸ್ ಕಂಪನಿ, ಆರ್ ಎಂ ಬಿಎಲ್ ಸಲ್ಯೂಷನ್ಸ್ ಇಂಡಿಯಾ, ಮನಸ್ ಆಗ್ರೋ ಇಂಡಸ್ಟ್ರೀಸ್ ಹಾಗೂ ಇನ್ಫ್ರಾಸ್ಟಕ್ಚರ್ ಲಿಮಿಟೆಡ್ ಮತ್ತು ಎಂಕೆ ಆಗ್ರೋಟೆಕ್ ಇವು ಇಂಧನ ಮಾರಾಟದ ಲೈಸನ್ಸ್ ಪಡೆದುಕೊಳ್ಳಲು ಮುಂದಾಗಿರುವ ಕಂಪನಿಗಳು ಎಂದು ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.

ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ, ಖಾಸಗಿ ಸಂಸ್ಥೆಗಳು ಸೇರಿದಂತೆ ಒಟ್ಟಾರೆ 14 ಕಂಪನಿಗಳು ಮಾರುಕಟ್ಟೆಯಲ್ಲಿರಲಿವೆ. ಆದರೆ, ಬೆಲೆ ನಿಗದಿ ಹಾಗೂ ಸರಾಸರಿ 15ದಿನಗಳ ಬೆಲೆ ಪರಿಷ್ಕರಣೆ ವಿವರಗಳನ್ನು ಸರ್ಕಾರದೊಂದಿಗೆ ಹಂಚಿಕೊಂಡು ಅನುಮತಿ ಪಡೆದುಕೊಳ್ಳಬೇಕಿದೆ.

 ಗ್ರಾಹಕರಿಗೆ ಇದರಿಂದ ಏನು ಪ್ರಯೋಜನ?

ಗ್ರಾಹಕರಿಗೆ ಇದರಿಂದ ಏನು ಪ್ರಯೋಜನ?

2019ರ ಮಾರುಕಟ್ಟೆ ಇಂಧನ ಸಾರಿಗೆ ನಿಯಂತ್ರಣ ತಿದ್ದುಪಡಿ ಅನ್ವಯ ಇಂಧನ ಮಾರುಕಟ್ಟೆಯಲ್ಲಿ ಖಾಸಗಿ ಸಂಸ್ಥೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಪೆಟ್ರೋಲಿಯಂ ಉತ್ಪನ್ನ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಬೆಳವಣಿಗೆ ಏರ್ಪಡಲಿದ್ದು, ಗ್ರಾಹಕರಿಗೆ ನೇರ ಲಾಭವಾಗಲಿದೆ. ರಿಯಾಯಿತಿ ಜೊತೆಗೆ ಮಾರಾಟದ ಜೊತೆಗೆ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯ ಆದ್ಯತೆಯಾಗಲಿದೆ.

ಕೇಂದ್ರದ ಮಾರ್ಗಸೂಚಿಯಂತೆ, ಹೊಸ ಲೈಸನ್ಸ್ ಪಡೆಯಲು ಅರ್ಜಿ ಸಲ್ಲಿಸುವ ಖಾಸಗಿ ಸಂಸ್ಥೆಯು ಕನಿಷ್ಠ 250 ಕೋಟಿ ರು ನಿವ್ವಳ ಮೌಲ್ಯ ಹೊಂದಿರಬೇಕು.

 ಮೂರು ಕಂಪನಿಗಳು ಶೇ 90ರಷ್ಟು ಪಾಲು ಹೊಂದಿವೆ

ಮೂರು ಕಂಪನಿಗಳು ಶೇ 90ರಷ್ಟು ಪಾಲು ಹೊಂದಿವೆ

ಇಂಧನ ಮಾರುಕಟ್ಟೆಯಲ್ಲಿ ಸರ್ಕಾರಿ ಸ್ವಾಮ್ಯ ಮೂರು ಕಂಪನಿಗಳು ಶೇ 90ರಷ್ಟು ಪಾಲು ಹೊಂದಿವೆ. ಮಿಕ್ಕ ಶೇ 10ರಷ್ಟು ಪಾಲು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್), ಶೆಲ್ ಹಾಗೂ ನೈರಾ ಎನರ್ಜಿ ಹೊಂದಿವೆ. ಲೈಸನ್ಸ್ ಗಳಿಸಿದ ಐದು ವರ್ಷಗಳ ಬಳಿಕ ಸದರಿ ಸಂಸ್ಥೆಯು ಕನಿಷ್ಠ 100 ರೀಟೈಲ್ ಮಳಿಗೆಗಳನ್ನು ಸ್ಥಾಪಿಸಿ, ವ್ಯವಹಾರ ವಿಸ್ತರಿಸಬೇಕಾಗುತ್ತದೆ. ಗ್ರಾಮೀಣ ಭಾಗದ ಕುಗ್ರಾಮಗಳಿಗೂ ಪೆಟ್ರೋಲ್ ಬಂಕ್ ವಿಸ್ತರಿಸುವುದು ನಿಯಮಗಳಲ್ಲಿ ಪ್ರಮುಖವಾಗಿದೆ.

 ಆಗಸ್ಟ್ 25ರಂದು ಇಂಧನ ದರ ಹೇಗಿದೆ?

ಆಗಸ್ಟ್ 25ರಂದು ಇಂಧನ ದರ ಹೇಗಿದೆ?

ಭಾರತದಲ್ಲಿ ಸತತ 36 ದಿನಗಳ ಬಳಿಕ ಇಳಿಕೆಯಾಗಿದ್ದ ಇಂಧನ ದರ ಬುಧವಾರದಂದು ಸ್ಥಿರವಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಮಾಹಿತಿ ನೀಡಿವೆ.

ಜಾಗತಿಕವಾಗಿ ಕಚ್ಚಾತೈಲ ಬೆಲೆ ತೀವ್ರ ಏರಿಳಿತ ನಡುವೂ ಇಂಧನ ದರದಲ್ಲಿ ವ್ಯತ್ಯಾಸ ಕಂಡು ಬಂದಿರಲಿಲ್ಲ. ಪ್ರತಿ ಬ್ಯಾರೆಲ್ ಬೆಲೆ 66 ಯುಎಸ್ ಡಾಲರ್‌ಗಿಂತಲೂ ಕಡಿಮೆ ಮೊತ್ತಕ್ಕೂ ಕುಸಿದಿತ್ತು. ಆದರೆ, ಬುಧವಾರ ಬೆಳಗ್ಗೆ ಚೇತರಿಸಿಕೊಂಡಿದೆ.

 ಕಚ್ಚಾತೈಲ ಬೆಲೆ ಕೊಂಚ ಏರಿಕೆ

ಕಚ್ಚಾತೈಲ ಬೆಲೆ ಕೊಂಚ ಏರಿಕೆ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಸ್ಟ್ 25ರಂದು ಈ ಸಮಯಕ್ಕೆ ಕಚ್ಚಾತೈಲ ಬೆಲೆ ಕೊಂಚ ಏರಿಕೆ ಕಂಡು 70.60 ಯುಎಸ್ ಡಾಲರ್(1 USD=74.20 ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್, ಏಪ್ರಿಲ್ ತಿಂಗಳಲ್ಲಿ 66 ಡಾಲರ್ ಹಾಗೂ ಮೇ ತಿಂಗಳಲ್ಲಿ ಸರಾಸರಿ 68 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98 ರೂ ಹಾಗೂ ಡೀಸೆಲ್ ಮೇಲೆ 31.80 ರೂ ನಷ್ಟಿದೆ.

Recommended Video

    ಸಂಸದ ಪ್ರತಾಪ್ ಸಿಂಹ ವಿಶೇಷ ಸಂದರ್ಶನ | Oneindia Kannada
     ಇಂಧನ ದರ ಪರಿಷ್ಕರಣೆ ಹೇಗೆ?

    ಇಂಧನ ದರ ಪರಿಷ್ಕರಣೆ ಹೇಗೆ?

    ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+