ಗ್ರಾಹಕರಿಗೆ ಆಘಾತ ಕಾದಿದೆ: ಮೋದಿ ಸರ್ಕಾರದಿಂದ 'ಕ್ಯಾಶ್ ತೆರಿಗೆ'

Posted By:
Subscribe to Oneindia Kannada

ನವದೆಹಲಿ, ಜನವರಿ 13: ನರೇಂದ್ರ ಮೋದಿ ಸರ್ಕಾರ ಮುಂಬರುವ ಬಜೆಟ್ ನಲ್ಲಿ ಬ್ಯಾಂಕ್ ಗ್ರಾಹಕರಿಗೆ ಆಘಾತಕಾರಿ ಸುದ್ದಿ ನೀಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಬ್ಯಾಂಕಿನಿಂದ ಹೆಚ್ಚು ಪ್ರಮಾಣದಲ್ಲಿ ಕ್ಯಾಶ್ ವಿಥ್ ಡ್ರಾ ಮಾಡಿದವರ ಮೇಲೆ ಕ್ಯಾಶ್ ತೆರಿಗೆ ಹಾಕಲು ಮೋದಿ ಸರ್ಕಾರ ಮುಂದಾಗಿದೆಯಂತೆ.

ಕ್ಯಾಶ್ ತೆರಿಗೆ ಬಗ್ಗೆ ಎಕಾನಾಮಿಕ್ ಟೈಮ್ ವರದಿ ಮಾಡಿದ್ದು, ಈ ನಿಯಮದ ಮೂಲಕ ಅಧಿಕ ಪ್ರಮಾಣದಲ್ಲಿ ಹಣ ಶೇಖರಿಸಿಟ್ಟುಕೊಂಡು, ವ್ಯವಹರಿಸುವವರ ಮೇಲೆ ಸರ್ಕಾರ ನಿಗಾ ವಹಿಸಲಿದೆ. ಸಾಮಾನ್ಯವಾಗಿ ಬ್ಯಾಂಕ್ ವ್ಯವಹಾರಕ್ಕೆ ವಿಧಿಸುವ ತೆರಿಗೆ ಅಲ್ಪಪ್ರಮಾಣದ್ದಾಗಿರುತ್ತದೆ. ಆದರೆ ಡಿಜಿಟಲ್ ಯುಗದಲ್ಲಿ ಎಲ್ಲವೂ ಮೊಬೈಲ್, ಇಮೇಲ್ ನಲ್ಲಿ ಪಡೆಯುವ ಮೆಸೇಜ್ ಗಳ ಮೇಲೆ ತೆರಿಗೆ ಬೀಳುವಾಗ ಮತ್ತೊಂದು ತೆರಿಗೆ ಏಕೆ ಎಂಬ ಪ್ರಶ್ನೆ ಮೂಡುತ್ತಿದೆ.

Modi Government may consider Taxing Cash Withdrawals: Reports

ಆದರೆ, ಡಿಸೆಂಬರ್ 2016ರ ನಂತರ ಡಿಜಿಟಲ್ ಪೇಮೆಂಟ್ ವ್ಯವಹಾರ ಶೇ 43ರಷ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ನೋಟು ಉತ್ಪನ್ನ ವೆಚ್ಚಕ್ಕೆ ಹೋಲಿಸಿದರೆ ಡಿಜಿಟಲ್ ವ್ಯವಹಾರಕ್ಕೆ ತಗುಲುವ ವೆಚ್ಚ ಕಡಿಮೆ. ಆದರೆ, ಇದು ಸದ್ಯಕ್ಕೆ ಉದ್ಯಮಿಗಳು ಹಾಗೂ ಡಿಜಿಟಲ್ ಗ್ರಾಹಕರಿಗೆ ಮೀಸಲಾಗಿದೆ. ಇನ್ಮುಂದೆ ಬ್ಯಾಂಕಿನಿಂದ ಅಧಿಕ ಪ್ರಮಾಣದಲ್ಲಿ ಹಣ ವಿಥ್ ಡ್ರಾ ಮಾಡುವವರಿಗೆ ತೆರಿಗೆ ತಪ್ಪಿದ್ದಲ್ಲ.

ಕಪ್ಪು ಹಣದ ಮೇಲೆ ನಿಯಂತ್ರಣ ಹೊಂದಲು 3 ಲಕ್ಷಕ್ಕೂ ಅಧಿಕ ಮೊತ್ತದ ನಗದು ವ್ಯವಹಾರದ ಮೇಲೆ ನಿಷೇಧ ಹೇರುವಂತೆ ವಿಶೇಷ ತನಿಖಾ ತಂಡ ಕಳೆದ ವರ್ಷವೇ ಶಿಫಾರಸು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Modi government is considering taxing large cash withdrawals, The Economic Times reported today. If cleared, this "cash tax" could be included in the 2017-2018 budget to be presented on 1 February.
Please Wait while comments are loading...