ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಡು ಬಿಸಿಲಿಗೂ ಕೊರೆವ ಚಳಿಗೂ ಈ ಜಾಕೆಟ್, ಕೇಂದ್ರ ಸಚಿವರಿಂದ ಬಿಡುಗಡೆ

|
Google Oneindia Kannada News

ಪಾಟ್ನಾ, ಮಾರ್ಚ್ 7: ಈ ಜಾಕೆಟ್ ಧರಿಸಿದರೆ ಸದಾ ತಂಪಾಗಿರಬಹುದು. ಅಂಥದ್ದೊಂದು ಜಾಕೆಟ್ ಅನ್ನು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಂಗಳವಾರ ಬಿಹಾರದಲ್ಲಿ ಬಿಡುಗಡೆ ಮಾಡಿದ್ದಾರೆ. ಅವರು ಪ್ರತಿನಿಧಿಸುವ ನವಾಡದ ಖನ್ವಾ ಕ್ಷೇತ್ರದಲ್ಲಿ ಜಾಕೆಟ್ ಬಿಡುಗಡೇ ಮಾಡಿ ಅವರು ಮಾತನಾಡಿದರು.

ಖನ್ವಾದ ಹತ್ತಿ ಹಾಗೂ ತಂತ್ರಜ್ಞಾನ ಎರಡರ ಮಿಳಿತ ಈ ಜಾಕೆಟ್ ಎಂದ ಅವರು, ಇದನ್ನು ಧರಿಸುವವರಿಗೆ ಎರಡು ಆಯ್ಕೆಗಳಿವೆ. ಕೆಂಪು ಬಟನ್ ಒತ್ತಿದರೆ ಬಿಸಿಯಾಗುತ್ತದೆ ಹಾಗೂ ಹಸಿರು ಬಟನ್ ಒತ್ತಿದರೆ ಬಿಸಿ ಕಡಿಮೆಯಾಗುತ್ತದೆ. ಈ ಎರಡರ ಮಧ್ಯೆ ಇಪ್ಪತ್ತು ಡಿಗ್ರಿ ವ್ಯತ್ಯಾಸ ಇರುತ್ತದೆ ಎಂದು ಈ ಜಾಕೆಟ್ ಅಭಿವೃದ್ಧಿ ಪಡಿಸಿದವರು ತಿಳಿಸಿದ್ದಾರೆ.

ಜಾಕೆಟ್ ನಲ್ಲಿ ತಂಪು ಹಾಗೂ ಬಿಸಿ ಗಾಳಿ ಬೀಸುವ ಫ್ಯಾನ್ ಅಳವಡಿಸಲಾಗಿದೆಯಂತೆ. ಮತ್ತು ಬ್ಯಾಟರಿ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ. ಇದು ಸೈನಿಕರಿಗೆ ತುಂಬ ಅನುಕೂಲಕಾರಿ. ಸಿಯಾಚಿನ್ ನಂಥ ಕಡೆ -50 ಡಿಗ್ರಿ ಸೆಲ್ಷಿಯಸ್ ವರೆಗೆ ಉಷ್ಣಾಂಶ ಕುಸಿಯುತ್ತದೆ. ಅಂಥ ಕಡೆ ಇದು ತುಂಬ ಪ್ರಯೋಜನಕಾರಿ ಎಂದು ಸಚಿವರು ಹೇಳಿದರು.

Giriraj Singh

ಸದ್ಯದಲ್ಲೇ ಈ ಏಸಿ ಜಾಕೆಟ್ ಮಾರುಕಟ್ಟೆ ಪ್ರವೇಶಿಸಲಿದೆ. ಸದ್ಯಕ್ಕೆ ಅಂದುಕೊಂಡಿರುವ ಪ್ರಕಾರ ಅರ್ಧ ತೋಳಿನ ಜಾಕೆಟ್ ಗೆ 18 ಸಾವಿರ ರುಪಾಯಿ, ಪೂರ್ತಿ ತೋಳಿನ ಜಾಕೆಟ್ ಗೆ 25 ಸಾವಿರ ಅಂತೆ. ಈ ಜಾಕೆಟ್ ನೋಡಿ ಖುಷಿಯಾದ ಸಚಿವರೇ ಮೈ ಸುಡುವ ರಾಜಸ್ತಾನದಿಂದ- ಮಂಜಿನಿಂದ ಕೊರೆವ ಸಿಯಾಚಿನ್ ವರೆಗೆ ಎಂಬ ಜಾಹೀರಾತಿನ ಸಾಲನ್ನು ಹೇಳಿದ್ದಾರೆ.

ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ (ಎನ್ ಐಎಫ್ ಟಿ) ವಿದ್ಯಾರ್ಥಿಗಳು ಈ ಜಾಕೆಟ್ ನ ಡಿಸೈನ್ ರೂಪಿಸಿದ್ದಾರೆ.

English summary
It keeps you cool anytime, anywhere. That is not just a catchy boast, said Union Minister Giriraj Singh today, launching what has been dubbed the "AC jacket" in Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X