ಭಾರಿ ಮೊತ್ತಕ್ಕೆ ಲಿಂಕ್ಡಿನ್ ಖರೀದಿಸಿದ ಮೈಕ್ರೋಸಾಫ್ಟ್

Posted By:
Subscribe to Oneindia Kannada

ಕ್ಯಾಲಿಫೋರ್ನಿಯಾ,ಜೂನ್ 13: ವೃತ್ತಿಪರರ ಮಾಹಿತಿ ಜಾಲ ತಾಣ ಲಿಂಕ್ಡಿನ್ ಕಾರ್ಪೊರೇಷನ್ ಸಂಸ್ಥೆಯನ್ನು ಭಾರಿ ಮೊತ್ತಕ್ಕೆ ಮೈಕ್ರೋಸಾಫ್ಟ್ ಕಾರ್ಪ್ ಖರೀದಿಸುವುದಾಗಿ ಸೋಮವಾರ ಘೋಷಿಸಿದೆ. ಲಿಂಕ್ಡಿನ್ ಸಂಸ್ಥೆಯ ಪ್ರತಿ ಷೇರಿಗೆ 196 ಡಾಲರ್ ನಂತೆ ನಗದು ರೂಪದ ವ್ಯವಹಾರ ಕುದುರಿಸಿದ್ದು, ಒಟ್ಟಾರೆ 26.2 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ಡೀಲ್ ಇದಾಗಿದೆ.

ಮೈಕ್ರೋಸಾಫ್ಟ್ ತೆಕ್ಕೆಗೆ ಲಿಂಕ್ಡಿನ್ ಸೇರಿದ ಮೇಲೂ ಜೆಫ್ ವೇನರ್ ಅವರು ಲಿಂಕ್ಡಿನ್ ಸಿಇಒ ಆಗಿ ಮುಂದುವರೆಯಲಿದ್ದಾರೆ.[ಮೈಕ್ರೋಸಾಫ್ಟ್ ನಿಂದ ಕಮರ್ಷಿಯಲ್ ಕ್ಲೌಡ್ ಸೇವೆ, ಏನಿದರ ಲಾಭ?]

Microsoft to acquire LinkedIn for $26.2 billion; LNKD shares jump 48%

ಆದರೆ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾಗೆ ರಿಪೋರ್ಟ್ ಮಾಡಿಕೊಳ್ಳಬೇಕಾಗುತ್ತದೆ.400 ಮಿಲಿಯನ್ ಸದಸ್ಯರನ್ನು ಆನ್ ಲೈನ್ ನಲ್ಲಿ ಲಿಂಕ್ಡಿನ್ ಹೊಂದಿದೆ. ಖರೀದಿ ಸುದ್ದಿ ಹಬ್ಬುತ್ತಿದ್ದಂತೆ ಲಿಂಕ್ಡಿನ್ ಷೇರುಗಳು ಶೇ 48ರಷ್ಟು ಏರಿಕೆ ಕಂಡಿದೆ.ಮೈಕ್ರೋಸಾಫ್ಟ್ ನ ಷೇರುಗಳು ಶೇ 3.2 ರಷ್ಟು ಕುಸಿತ ಕಂಡಿವೆ.[ಮೈಕ್ರೋಸಾಫ್ಟ್ ಸಿಇಒ ಮೆಚ್ಚಿದ 8 ವರ್ಷ ಅದ್ಭುತ ಬಾಲಕ]


ಮಾನವ ಸಂಪನ್ಮೂಲದ ಬಹುದೊಡ್ಡ ಮಾಹಿತಿಯುಳ್ಳ ಲಿಂಕ್ಡಿನ್ ನಲ್ಲಿ 2 ಮಿಲಿಯನ್ ಗೂ ಅಧಿಕ ಪೇಯ್ಡ್ ಚಂದಾದಾರರಿದ್ದಾರೆ, ಮೈಕ್ರೋಸಾಫ್ಟ್ ಯಾವುದೇ ಸಾಮಾಜಿಕ ವೇದಿಕೆ ಇಲ್ಲದ ಕಾರಣ ಲಿಂಕ್ಡಿನ್ ಖರೀದಿಗೆ ಮೈಕ್ರೋಸಾಫ್ಟ್ ಮುಂದಾಯಿತು. ಔಟ್ ಲುಕ್, ಸ್ಕೈಪ್, ಆಫೀಸ್, ವಿಂಡೋಸ್ ಅಪ್ಲಿಕೇಷನ್ ಗಳ ಜೊತೆಗೆ ಕೇಂದ್ರಿಕೃತ ಪ್ರೊಫೈಲ್ ಸ್ಥಾಪಿಸಬಹುದು. ಅಲ್ಲದೆ, ಕಚೇರಿಗಳಿಂದ ಫೇಸ್ ಬುಕ್ ಹಾಗೂ ಗೂಗಲ್ ಅಪ್ಲಿಕೇಷನ್ ಗಳನ್ನು ದೂರ ಇರಿಸಬಹುದು.

ಈ ಮುಂಚಿನ Yammer, Skype ಖರೀದಿಯಿಂದ ಸಾಮಾಜಿಕ ನೆಲೆಯಲ್ಲಿ ಹೆಚ್ಚಿನ ಲಾಭ ಪಡೆಯಲು ಮೈಕ್ರೋಸಾಫ್ಟ್ ಗೆ ಆಗಿರಲಿಲ್ಲ. ಈ ಲಿಂಕ್ಡಿನ್ ಮೂಲಕ ಇದು ಸಾಧ್ಯವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Microsoft Corp. (Nasdaq: MSFT) and LinkedIn Corporation (NYSE: LNKD) on Monday announced they have entered into a definitive agreement under which Microsoft will acquire LinkedIn for $196 per share in an all-cash transaction valued at $26.2 billion, inclusive of LinkedIn’s net cash.
Please Wait while comments are loading...