ಮಾರುತಿ ಸುಜುಕಿ ನೆಕ್ಸಾ ಹೊಸ ಮೈಲುಗಲ್ಲು: 5 ವರ್ಷದಲ್ಲಿ 13 ಲಕ್ಷ ಯುನಿಟ್‌ಗಳ ಮಾರಾಟ

ನವದೆಹಲಿ, ಫೆಬ್ರವರಿ 10: ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ಇಂಡಿಯಾದ ನೆಕ್ಸಾ ಪ್ರಾರಂಭವಾದ ಐದು ವರ್ಷಗಳಲ್ಲಿ 13 ಲಕ್ಷ ಯುನಿಟ್‌ಗಳ ಒಟ್ಟು ಮಾರಾಟದ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಸಿದೆ ಎಂದು ಬುಧವಾರ ಹೇಳಿದೆ. ಕಂಪನಿಯ ಒಟ್ಟು ಮಾರಾಟದಲ್ಲಿ ನೆಕ್ಸಾ ಕೊಡುಗೆ 2015 ರಲ್ಲಿ ಶೇ 5ರಿಂದ 2020-21ರಲ್ಲಿ ಶೇ 19ಕ್ಕೆ ಏರಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

2020-21ರ ಏಪ್ರಿಲ್-ಜನವರಿ ಅವಧಿಯಲ್ಲಿ ಕಂಪನಿಯ ಒಟ್ಟು ಮಾರಾಟ 11,26,378 ಯುನಿಟ್ ಆಗಿದ್ದು, ಹಿಂದಿನ ವರ್ಷದ 13,32,395 ಯುನಿಟ್ ಹೋಲಿಸಿದರೆ ಶೇ 15.5 ರಷ್ಟು ಇಳಿಕೆಯಾಗಿದೆ.

''ಹಣಕಾಸು ವರ್ಷ 2020-21 ರಲ್ಲಿ ನೆಕ್ಸಾ ಕಾರುಗಳ ಪೂರ್ವನಿರ್ಧರಿತ ಖರೀದಿದಾರರು ಶೇಕಡಾ 26 ರಿಂದ 50 ಕ್ಕೆ ಏರಿದ್ದಾರೆ ಎಂಬುದಕ್ಕೆ ಇದು ಸ್ಪಷ್ಟವಾಗಿದೆ. ವರ್ಷಗಳಲ್ಲಿ ಅದರ ಒಟ್ಟು ಮಾರಾಟವು ಹಣಕಾಸು ವರ್ಷ 2020-21 ರಲ್ಲಿ ಶೇ 5ರಿಂದ 19ಕ್ಕೆ ಏರಿದೆ'' ಎಂದು ಮಾರುತಿ ಸುಜುಕಿ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ್ ಹೇಳಿದರು.

Maruti Suzuki NEXA Reports Sales Of 13 Lakh Units Since 2015

ಭಾರತದ 3ನೇ ಅತಿದೊಡ್ಡ ಆಟೋಮೊಬೈಲ್ ಬ್ರಾಂಡ್ ಆಗಿರುವ ನೆಕ್ಸಾ ತನ್ನ ಪ್ರಮುಖ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಹೇಳಿರುವ ಶ್ರೀವಾಸ್ತವ್, ತನ್ನ ಶೋ ರೂಂಗಳಲ್ಲಿ ಮಾರಾಟವಾಗುವ ಉತ್ಪನ್ನಗಳನ್ನು ನೆಕ್ಸಾ ಗ್ರಾಹಕರ ಜಾಗತಿಕ ಅನುಭವವನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು. 2020 ರಲ್ಲಿ ನೆಕ್ಸಾ 2.3 ಲಕ್ಷಕ್ಕೂ ಹೆಚ್ಚಿನ ಮಾರಾಟವನ್ನು ಸಾಧಿಸಿದೆ ಎಂದು ಕಂಪನಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+