ಬೆಂಗಳೂರಿನಲ್ಲಿ ವೋಲ್ವೋ ಪರ್ಸನಲ್ ಸರ್ವೀಸ್ ಕೇಂದ್ರ ಆರಂಭ
ಬೆಂಗಳೂರು, 15 ನವೆಂಬರ್ 2019: ವಿಶ್ವದ ಖ್ಯಾತ ಕಾರು ತಯಾರಿಕಾ ಕಂಪನಿಯಾಗಿರುವ ವೋಲ್ವೋ ಕಾರ್ ಇಂಡಿಯಾ ಕರ್ನಾಟಕದ ತನ್ನ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಮುನ್ನಡಿ ಇಟ್ಟಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ತನ್ನ ಅಧಿಕೃತ ಸೇವಾ ಸಂಸ್ಥೆ ಎಂದು ಮಾರ್ಷಲ್ ಮೋಟರ್ಸ್ ಗೆ ಅಧಿಕೃತ ಸೇವಾ ಕೇಂದ್ರದ ಮಾನ್ಯತೆ ನೀಡಿದೆ. ಇದು ವೋಲ್ವೋ ಪರ್ಸನಲ್ ಸರ್ವೀಸ್ (ವಿಪಿಎಸ್) ಡೀಲರ್ ಆಗಿದೆ.
ವಿಶ್ವದ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ವೋಲ್ವೋ ಕಾರುಗಳಿಗೆ ಇಲ್ಲಿ ಸೇವೆಯನ್ನು ಒದಗಿಸಲಿದೆ. ಈ ವಿಪಿಎಸ್ ಗ್ರಾಹಕರ ಕಾಯುವ ಅವಧಿಯನ್ನು ಕನಿಷ್ಠ ಶೇ.50 ರಷ್ಟನ್ನು ಉಳಿತಾಯ ಮಾಡಲಿದೆ. ಇಲ್ಲಿನ ಟೆಕ್ನಿಶಿಯನ್ ಗಳು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಲಿದ್ದು, ಎರಡೂ ಬದಿಯಿಂದಲೂ ಸ್ಪಷ್ಟವಾದ ಮಾಹಿತಿಗಳು ವಿನಿಮಯವಾಗಿ ವಾಹನದ ಸರ್ವೀಸ್ ಉತ್ತಮ ಮಟ್ಟದಿಂದ ಕೂಡಿರಲಿದೆ.
ವೋಲ್ವೋ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಚಾರ್ಲ್ಸ್ ಫ್ರಂಪ್ ಸಮ್ಮುಖದಲ್ಲಿ ಮಾರ್ಷಲ್ ಮೋಟರ್ಸ್ ಗೆ ಈ ಅಧಿಕೃತ ಸೇವಾ ಕೇಂದ್ರದ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಾರ್ಲ್ಸ್ ಫ್ರಂಪ್ ಅವರು, ''ನಮ್ಮ ಶೋರೂಂನಲ್ಲಿ ಮಾರಾಟವಾದ ಕಾರುಗಳಿಗೆ ಸೂಕ್ತವಾದ ರೀತಿಯಲ್ಲಿ ಸರ್ವೀಸ್ ಸೌಲಭ್ಯವನ್ನು ಒದಗಿಸುತ್ತಿದ್ದೇವೆ. ನಮ್ಮ ವಿಪಿಎಸ್ ನೆಟ್ವರ್ಕ್ ಮೂಲಕ ಗ್ರಾಹಕರು ತಡೆರಹಿತವಾದ ಸೇವೆಗಳನ್ನು ಪಡೆಯಬಹುದಾಗಿದೆ. ನಮ್ಮ ಪಾಲುದಾರರಾಗಿರುವ ಮಾರ್ಷಲ್ ಮೋಟರ್ಸ್ ಇದೀಗ ಪ್ರಮಾಣೀಕೃತ ವಿಪಿಎಸ್ ಡೀಲರ್ ಎಂದು ಘೋಷಿಸಲು ನಮಗೆ ಸಂತಸವೆನಿಸುತ್ತದೆ'' ಎಂದರು.
ಮಾರ್ಷಲ್ ಮೋಟರ್ಸ್ ನ ಡೀಲರ್ ಪ್ರಿನ್ಸಿಪಾಲ್ ರಿತೇಶ್ ರೆಡ್ಡಿ ಮಾತನಾಡಿ, ''ವೋಲ್ವೋ ಕಾರು ಸಂಸ್ಥೆಯು ತನ್ನ ಗ್ರಾಹಕರಿಗೆ ಗುಣಮಟ್ಟದ ಸಮಯವನ್ನು ವಾಪಸ್ ನೀಡಲು ಬಯಸುತ್ತದೆ. ಈ ಮೂಲಕ ಗ್ರಾಹಕರು ತಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಬಹುದಾಗಿದೆ. ಈ ವಿಪಿಎಸ್ ಮಾದರಿಯ ಸೇವೆಯು ಗ್ರಾಹಕರಿಗೆ ತಮ್ಮ ಅತ್ಯಮೂಲ್ಯವಾದ ಸಮಯವನ್ನು ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯ ಅನುಭವವನ್ನು ನೀಡುತ್ತಿರುವ ವೋಲ್ವೋ ಕಾರು ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಹೊಂದುತ್ತಿರುವುದಕ್ಕೆ ನಮಗೆ ಅತೀವ ಸಂತಸವೆನಿಸುತ್ತಿದೆ'' ಎಂದು ಹೇಳಿದರು.












Click it and Unblock the Notifications