ಸ್ಟಾರ್ಟ್ಅಪ್ ಇಂಡಿಯಾ: ಉದ್ಯೋಗ ಸೃಷ್ಟಿಯಲ್ಲಿ ಹಿಂದೆ ಬಿದ್ದ ಕರ್ನಾಟಕ!
ಬೆಂಗಳೂರು, ಜುಲೈ 21: ಭಾರತದಲ್ಲಿ ಸ್ಟಾರ್ಟ್ಅಪ್ ಮೂಲಕ ಉದ್ಯೋಗ ಸೃಷ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದ್ದ ಕರ್ನಾಟಕ ಹಿಂದೆ ಬಿದ್ದಿದೆ. ರಾಜ್ಯವನ್ನು ಹಿಂದಿಕ್ಕಿದ ಮಹಾರಾಷ್ಟ್ರ ಅಗ್ರಸ್ಥಾನಕ್ಕೆ ಏರಿದೆ.
ಕಳೆದ 2016 ರಿಂದ 2022 ರವರೆಗಿನ ಆರು ವರ್ಷಗಳ ಅವಧಿಯಲ್ಲಿ ಒಟ್ಟು 72,993 ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲಾಗಿದೆ. ಈ ಸ್ಟಾರ್ಟ್‌ಅಪ್‌ಗಳಿಂದ ಒಟ್ಟು 7,67,754 ಉದ್ಯೋಗಗಳು ಸೃಷ್ಟಿ ಆಗಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಲೋಕಸಭೆಗೆ ಮಾಹಿತಿ ನೀಡಿದೆ. ದೇಶದಲ್ಲಿ ಆಂತರಿಕ ವ್ಯಾಪಾರ ಮತ್ತು ಉದ್ಯಮಕ್ಕೆ ಉತ್ತೇಜನ ನೀಡಲಾಗಿದೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿನ ಸ್ಟಾರ್ಟ್ಅಪ್ ರಾಜಧಾನಿ ಎಂಬ ಕರ್ನಾಟಕದ ತಲೆ ಮೇಲಿನ ಕಿರೀಟವನ್ನು ಮಹಾರಾಷ್ಟ್ರ ಕಿತ್ತುಕೊಂಡಿದೆ. ಆರು ವರ್ಷಗಳಲ್ಲಿ ಮಹಾರಾಷ್ಟ್ರವು 13,519 ಸ್ಟಾರ್ಟ್‌ಅಪ್‌ಗಳ ಮೂಲ ಅಗ್ರಸ್ಥಾನಕ್ಕೆ ಏರಿದರೆ, ಇದೇ ಅವಧಿಯಲ್ಲಿ 8,881 ಸ್ಟಾರ್ಟ್‌ಅಪ್‌ಗಳ ಮೂಲಕ ಎರಡನೇ ಸ್ಥಾನಕ್ಕೆ ಕುಸಿದಿದೆ.

ಅತಿಹೆಚ್ಚು ಸ್ಟಾರ್ಟ್ಅಪ್ ಪ್ರಾರಂಭಿಸಿದ ರಾಜ್ಯಗಳಾವವು?
ಭಾರತದಲ್ಲಿ ಸ್ಟಾರ್ಟ್ಅಪ್ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. 2016 ರಿಂದ 2022ರ ಅವಧಿಯಲ್ಲಿ ಸ್ಟಾರ್ಟ್ಅಪ್ ಹೆಚ್ಚಿಸಿದ ರಾಜ್ಯಗಳು ಹೀಗಿವೆ. ಈ ಪಟ್ಟಿಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಹೊರತಾಗಿ, ದೆಹಲಿ, ಉತ್ತರ ಪ್ರದೇಶ, ಗುಜರಾತ್, ಹರಿಯಾಣ, ಕೇರಳ, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಮಧ್ಯ ಪ್ರದೇಶ ಸಹ ಸೇರಿವೆ.
ಲೋಕಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ನೀಡಿದ ಮಾಹಿತಿಯ ಪ್ರಕಾರ, 2021ರಲ್ಲಿ 20,160 ಸ್ಟಾರ್ಟ್-ಅಪ್‌ಗಳನ್ನು ಪ್ರಾರಂಭಿಸಲಾಗಿದೆ. ಈ ಸ್ಟಾರ್ಟ್‌ಅಪ್ ಸಂಗ್ರಹಿಸಿದ ಹೂಡಿಕೆಯ ಡೇಟಾಬೇಸ್ ಕುರಿತು ಕೇಳಿದಾಗ, ಸರ್ಕಾರವು ಅದಕ್ಕೆ ಸಂಬಂಧಿಸಿದಂತೆ ಯಾವುದೇ ಕೇಂದ್ರೀಕೃತ ಮಾಹಿತಿಯ ಹೊಂದಿಲ್ಲ ಎಂದು ತಿಳಿಸಿದೆ.

ದೇಶದಲ್ಲಿ ಸ್ಟಾರ್ಟ್ಅಪ್ ಹೆಚ್ಚಾಗಿದ್ದು ಯಾವಾಗ?
ಭಾರತದಲ್ಲಿ ಇತ್ತೀಚಿನ ಆರು ವರ್ಷಗಳಲ್ಲಿ ಸ್ಟಾರ್ಟ್ಅಪ್ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಯಾವ ವರ್ಷದಲ್ಲಿ ಎಷ್ಟು ಸ್ಟಾರ್ಟ್ಅಪ್ ಪ್ರಾರಂಭಿಸಲಾಯಿತು ಎಂಬುದನ್ನು ಮುಂದಿನ ಪಟ್ಟಿಯಿಂದ ತಿಳಿದುಕೊಳ್ಳೋಣ.
2016 ರಿಂದ 2022ರ ಅವಧಿಯಲ್ಲಿ ಸ್ಟಾರ್ಟ್ಅಪ್:
| ವರ್ಷ | ಸ್ಟಾರ್ಟ್ಅಪ್ ಸಂಖ್ಯೆ |
| 2016 | 471 |
| 2017 | 5223 |
| 2018 | 8775 |
| 2019 | 11417 |
| 2020 | 14586 |
| 2021 | 20160 |
| 2022 | 12341 |

ಸ್ಟಾರ್ಟ್ಅಪ್ ಪ್ರಾರಂಭದಲ್ಲಿ ಅಗ್ರಸ್ಥಾನದ ರಾಜ್ಯಗಳು
ಭಾರತದಲ್ಲಿ ಸ್ಟಾರ್ಟ್ಅಪ್ ಪ್ರಾರಂಭಿಸುವುದಕ್ಕೆ ಕೆಲವು ರಾಜ್ಯಗಳು ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿವೆ. ಸ್ಟಾರ್ಟ್ಅಪ್ ರಾಜಧಾನಿ ಎನಿಸಿಕೊಂಡಿದ್ದ ಕರ್ನಾಟಕ ಎರಡನೇ ಸ್ಥಾನಕ್ಕೆ ಕುಸಿದಿದ್ದರೆ, ಮಹಾರಾಷ್ಟ್ರ ಅಗ್ರಸ್ಥಾನಕ್ಕೆ ಏರಿದೆ. ಹಾಗಾದಲ್ಲಿ ಅತಿಹೆಚ್ಚು ಸ್ಟಾರ್ಟ್ಅಪ್ ಆರಂಭಿಸಿದ ರಾಜ್ಯಗಳು ಮತ್ತು ಅವುಗಳ ಸಂಖ್ಯೆಯನ್ನು ಪಟ್ಟಿಯಲ್ಲಿ ತಿಳಿಯಿರಿ.
ರಾಜ್ಯವಾರು ಸ್ಟಾರ್ಟ್ಅಪ್ ಸಂಖ್ಯೆ:
| ರಾಜ್ಯ | ಸ್ಟಾರ್ಟ್ಅಪ್ ಸಂಖ್ಯೆ |
| ಮಹಾರಾಷ್ಟ್ರ | 13519 |
| ಕರ್ನಾಟಕ | 8881 |
| ದೆಹಲಿ | 8636 |
| ಉತ್ತರ ಪ್ರದೇಶ | 6654 |
| ಗುಜರಾತ್ | 4920 |
| ಹರಿಯಾಣ | 3985 |
| ಕೇರಳ | 3277 |
| ಪಶ್ಚಿಮ ಬಂಗಾಳ | 2301 |
| ರಾಜಸ್ಥಾನ | 2299 |
| ಮಧ್ಯ ಪ್ರದೇಶ | 2119 |

ಉದ್ಯೋಗ ಸೃಷ್ಟಿಯ ಟಾಪ್-10 ರಾಜ್ಯಗಳು
ಭಾರತದಲ್ಲಿ ಸ್ಟಾರ್ಟ್ಅಪ್ ಮೂಲಕ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲಾಗುತ್ತಿದೆ. ಕಳೆದ ಆರು ವರ್ಷಗಳಲ್ಲಿ ಅತಿಹೆಚ್ಚು ಉದ್ಯೋಗವನ್ನು ಸೃಷ್ಟಿಸಿದ ಟಾಪ್-10 ರಾಜ್ಯಗಳು ಯಾವುದು? ಯಾವ ರಾಜ್ಯದಲ್ಲಿ ಎಷ್ಟು ಉದ್ಯೋಗಗಳನ್ನು ಸೃಷ್ಟಿಸಲಾಯಿತು?, ಉದ್ಯೋಗ ಸೃಷ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡ ರಾಜ್ಯ ಯಾವುದು ಎಂಬುದನ್ನು ಈ ಪಟ್ಟಿಯಲ್ಲಿ ತಿಳಿದುಕೊಳ್ಳೋಣ.
ಅತಿಹೆಚ್ಚು ಉದ್ಯೋಗ ಸೃಷ್ಟಿಸಿದ ಟಾಪ್-10 ರಾಜ್ಯಗಳು
| ರಾಜ್ಯ | ಉದ್ಯೋಗಗಳ ಸಂಖ್ಯೆ |
| ಮಹಾರಾಷ್ಟ್ರ | 146132 |
| ಕರ್ನಾಟಕ | 103541 |
| ದೆಹಲಿ | 87643 |
| ಉತ್ತರ ಪ್ರದೇಶ | 67694 |
| ಗುಜರಾತ್ | 51193 |
| ಹರಿಯಾಣ | 48843 |
| ತೆಲಂಗಾಣ | 44649 |
| ತಮಿಳುನಾಡು | 39832 |
| ಕೇರಳ | 23198 |
| ಪಶ್ಚಿಮ ಬಂಗಾಳ | 22149 |

ಭಾರತದಲ್ಲಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್ ವ್ಯವಸ್ಥೆ ಬೆಳವಣಿಗೆಗೆ ಸಹಾಯವಾಗಲು ಸರ್ಕಾರ ಇಲ್ಲಿಯವರೆಗೆ ಏನು ಮಾಡಿದೆ ಎಂಬ ಪ್ರಶ್ನೆಗೆ ಸಚಿವಾಲಯ ಉತ್ತರಿಸಿದೆ. ಸ್ಟಾರ್ಟ್-ಅಪ್ ಇಂಡಿಯಾ ಆಕ್ಷನ್ ಪ್ಲಾನ್, ಸ್ಟಾರ್ಟ್-ಅಪ್‌ಗಳಿಗೆ ನಿಧಿಯ ನಿಧಿ (ಎಫ್‌ಎಫ್‌ಎಸ್) ಯೋಜನೆ, ಸ್ಟಾರ್ಟ್-ಅಪ್ ಇಂಡಿಯಾ ಶೋಕೇಸ್, ಸ್ಟಾರ್ಟ್-ಅಪ್ ಇಂಡಿಯಾ, ನ್ಯಾಷನಲ್ ಸ್ಟಾರ್ಟ್ ಸಲಹಾ ಮಂಡಳಿ, ಸ್ಟಾರ್ಟ್-ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ (SISFS) ಮತ್ತು ಇತರ ನಿಯಂತ್ರಕ ಸುಧಾರಣೆ ಒಳಗೊಂಡಂತೆ ಸರ್ಕಾರವು ಕೈಗೊಂಡ ಕ್ರಮಗಳ ಕುರಿತು ಸಚಿವಾಲಯವು ಪಟ್ಟಿ ಮಾಡಿದೆ.
ಭಾರತದಲ್ಲಿ ಬೆಳೆಯುತ್ತಿರುವ ಸ್ಟಾರ್ಟ್‌ಅಪ್ ವ್ಯವಸ್ಥೆ ಬೆಳವಣಿಗೆಗೆ ಸಹಾಯವಾಗಲು ಸರ್ಕಾರ ಇಲ್ಲಿಯವರೆಗೆ ಏನು ಮಾಡಿದೆ ಎಂಬ ಪ್ರಶ್ನೆಗೆ ಸಚಿವಾಲಯ ಉತ್ತರಿಸಿದೆ. ಸ್ಟಾರ್ಟ್-ಅಪ್ ಇಂಡಿಯಾ ಆಕ್ಷನ್ ಪ್ಲಾನ್, ಸ್ಟಾರ್ಟ್-ಅಪ್‌ಗಳಿಗೆ ನಿಧಿಯ ನಿಧಿ (ಎಫ್‌ಎಫ್‌ಎಸ್) ಯೋಜನೆ, ಸ್ಟಾರ್ಟ್-ಅಪ್ ಇಂಡಿಯಾ ಶೋಕೇಸ್, ಸ್ಟಾರ್ಟ್-ಅಪ್ ಇಂಡಿಯಾ, ನ್ಯಾಷನಲ್ ಸ್ಟಾರ್ಟ್ ಸಲಹಾ ಮಂಡಳಿ, ಸ್ಟಾರ್ಟ್-ಅಪ್ ಇಂಡಿಯಾ ಸೀಡ್ ಫಂಡ್ ಸ್ಕೀಮ್ (SISFS) ಮತ್ತು ಇತರ ನಿಯಂತ್ರಕ ಸುಧಾರಣೆ ಒಳಗೊಂಡಂತೆ ಸರ್ಕಾರವು ಕೈಗೊಂಡ ಕ್ರಮಗಳ ಕುರಿತು ಸಚಿವಾಲಯವು ಪಟ್ಟಿ ಮಾಡಿದೆ.

ಸ್ಟಾರ್ಟ್-ಅಪ್‌ಗಳಿಗೆ ನಿಧಿಯ ನಿಧಿ ಯೋಜನೆ ಗುರಿ ಏನು?
ಸ್ಟಾರ್ಟ್-ಅಪ್‌ಗಳಿಗೆ ನಿಧಿಯ ನಿಧಿ (ಎಫ್‌ಎಫ್‌ಎಸ್) ಯೋಜನೆಯಡಿ, ಪ್ರಗತಿ ಮತ್ತು ನಿಧಿಯ ಲಭ್ಯತೆ ಆಧಾರದ ಮೇಲೆ 14 ಮತ್ತು 15ನೇ ಹಣಕಾಸು ಆಯೋಗವು 10,000 ಕೋಟಿ ರೂಪಾಯಿಗಳ ಕಾರ್ಪಸ್ ಅನ್ನು ಒದಗಿಸುವ ಸಾಧ್ಯತೆಯಿದೆ. ಸ್ಟಾರ್ಟ್-ಅಪ್‌ಗಳ ಹಣಕಾಸಿನ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ಎಫ್‌ಎಫ್‌ಎಸ್ ಯೋಜನೆ, "ಆರಂಭಿಕ ಹಂತ, ಹುಟ್ಟುವ ಹಂತ ಮತ್ತು ಬೆಳವಣಿಗೆಯ ಹಂತದಲ್ಲಿ ಬಂಡವಾಳ ಲಭ್ಯವಾಗುವಂತೆ ಮಾಡಿದೆ. ಆದರೆ ದೇಶೀಯ ಬಂಡವಾಳವನ್ನು ಹೆಚ್ಚಿಸಲು ಅನುಕೂಲವಾಗುವಂತೆ ವೇಗವರ್ಧಕ ಪಾತ್ರವನ್ನು ವಹಿಸಿದ್ದು, ಅವಲಂಬನೆಯನ್ನು ಕಡಿಮೆ ಮಾಡುತ್ತದೆ," ಎಂದು ಸಚಿವಾಲಯದ ತಿಳಿಸಿದೆ.












Click it and Unblock the Notifications