• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮ್ಯಾಗಿ ರಿಟರ್ನ್ಸ್: ಆನ್ ಲೈನ್ ನಿಂದಲೇ ಖರೀದಿಸಿ

By Mahesh
|

ಬೆಂಗಳೂರು, ನ.09: ಮ್ಯಾಗಿ ಪ್ರಿಯರಿಗೆ ಮತ್ತೊಂದು ಶುಭ ಸುದ್ದಿ ಸಿಕ್ಕಿದೆ. ಮಾರಾಟ ನಿಷೇಧದ ಶಾಪ ವಿಮೋಚನೆಯಿಂದ ಮುಕ್ತವಾದ ಬೆನ್ನಲ್ಲೇ ಮ್ಯಾಗಿ ಮಾರುಕಟ್ಟೆ ಪ್ರವೇಶಕ್ಕೆ ಸಿದ್ಧತೆ ನಡೆಸಿದೆ. ಈಗ ಆನ್ ಲೈನ್ ಮಾರುಕಟ್ಟೆ ಪ್ರವೇಶಿಸಿರುವ ಮ್ಯಾಗಿ ಸ್ನಾಪ್ ಡೀಲ್ ಮೂಲಕ ನಿಮ್ಮ ಮನೆ ಸೇರಲಿದೆ.

ನೆಸ್ಲಿ ಕಂಪನಿಯ ಮ್ಯಾಗಿ ನವೆಂಬರ್ ಮೊದಲ ವಾರಕ್ಕೆ ನಿಮ್ಮ ಮನೆ ಸಮೀಪದ ಮಳಿಗೆಗಳಲ್ಲಿ ಲಭ್ಯವಾಗುವ ಸುದ್ದಿ ನಿಮಗೆ ಈಗಾಗಲೇ ತಿಳಿದಿದೆ. ನಂಜನಗೂಡಿನ ಘಟಕ ಸೇರಿದಂತೆ ದೇಶದ ಮೂರು ಕಡೆಗಳಲ್ಲಿ ಮ್ಯಾಗಿ ತಯಾರಿ ಭರದಿಂದ ಸಾಗಿದೆ.

ಎಷ್ಟು ದರ? : ಆನ್ ಲೈನ್ ನಲ್ಲಿ ಸ್ನಾಪ್ ಡೀಲ್ ಮೂಲಕ ನೆಸ್ಲೆ ಮ್ಯಾಗಿ ನ್ಯೂಡಲ್ಸ್ ಲಭ್ಯವಿದೆ. 12 ಪ್ಯಾಕ್ (70 ಗ್ರಾಮ್ಸ್) ಗೆ 144ರು ನಿಗದಿಪಡಿಸಲಾಗಿದೆ. [ಬಾಂಬೆ ಕೋರ್ಟ್ ನಿಂದ ಮ್ಯಾಗಿ ಮೇಲಿನ ನಿಷೇಧ ತೆರವು]

ಮೈಸೂರಿನ ನಂಜನಗೂಡು ಘಟಕ, ಪಂಜಾಬಿನ ಮೊಗಾ ಹಾಗೂ ಗೋವಾದ ಬಿಚೋಲಿಮ್ ನ ಘಟಕದಿಂದ ಮ್ಯಾಗಿ ತಯಾರಾಗಿ ಹೊರಬಂದಿದೆ. ದೇಶದಲ್ಲಿ ಒಟ್ಟು ಐದು ಕಡೆಗಳಲ್ಲಿ ಈ ಮುಂಚೆ ಮ್ಯಾಗಿ ತಯಾರಾಗುತ್ತಿತ್ತು. ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ್ ನ ಘಟಕಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲದ ಕಾರಣ ಮೂರು ಕಡೆಗಳಲ್ಲಿ ಮಾತ್ರ ಉತ್ಪಾದನೆ ಜಾರಿಯಲ್ಲಿದೆ.

ನಿಷೇಧ ಮುಂದುವರೆದಿದೆ: ಮ್ಯಾಗಿ ಮಾರುಕಟ್ಟೆ ಪ್ರವೇಶಿಸಿದರು ದೇಶದ 8 ರಾಜ್ಯಗಳಲ್ಲಿ ಇನ್ನೂ ಮ್ಯಾಗಿ ಮಾರಾಟಕ್ಕೆ ನಿರ್ಬಂಧ, ನಿಷೇಧ ಮುಂದುವರೆದಿದೆ. ಸುಮಾರು 3,500ಕ್ಕೂ ಅಧಿಕ ಪರೀಕ್ಷೆಗೆ ಒಳಪಟ್ಟ ಮೇಲೆ ಮ್ಯಾಗಿ ತಿನ್ನಲು ಓಕೆ ಎಂದು ಫುಡ್ ಸೆಫ್ಟಿ ಅಂಡ್ ಸ್ಟಾಡಂರ್ಡ್ ಅಥಾರಿಟಿ ಆಫ್ ಇಂಡಿಯಾ (ಎಫ್ ಎಸ್ ಎಸ್ ಎಐ) ಒಪ್ಪಿಗೆ ಸೂಚಿಸಿತ್ತು. ಭಾರತದಲ್ಲಷ್ಟೇ ಅಲ್ಲದೆ ಯುಎಸ್, ಯುಕೆ, ಸಿಂಗಪುರ, ಆಸ್ಟ್ರೇಲಿಯಾ ಹಾಗೂ ಇನ್ನಿತರ ದೇಶಗಳಲ್ಲಿ ಸುಮಾರು 200 ಮಿಲಿಯನ್ ಪ್ಯಾಕೇಟ್ ಮ್ಯಾಗಿ ಅಗ್ನಿಪರೀಕ್ಷೆ ಎದುರಿಸಿ ಈಗ ಪುನರ್ ಪ್ರವೇಶ ಪಡೆದುಕೊಳ್ಳುತ್ತಿದೆ.

ಮ್ಯಾಗಿ ಬ್ರ್ಯಾಂಡ್ ಮಾರುಕಟ್ಟೆಯಲ್ಲಿ ಇಲ್ಲದ ಕಾರಣದಿಂದ ನೆಸ್ಲೆ ಕಂಪನಿ ತನ್ನ ಕಳೆದ ತ್ರೈಮಾಸಿಕ (Q3) ವರದಿಯಲ್ಲಿ ಉತ್ತಮ ಫಲಿತಾಂಶ ಹೊರ ಹಾಕಲು ಸಾಧ್ಯವಾಗಿರಲಿಲ್ಲ. ಶೇ 60ರಷ್ಟು ನಿವ್ವಳ ಲಾಭ ಕಳೆದುಕೊಂಡು 124.2 ಕೋಟಿ ರು ಮಾತ್ರ ಗಳಿಸಿತ್ತು. ದೇಶದೆಲ್ಲೆಡೆ ಎಲ್ಲರೂ ಮ್ಯಾಗಿ ಬಳಸುವ ಕಾಲದಲ್ಲಿ 311.3 ಕೋಟಿ ರು ಗಳಿಸಿತ್ತು. ವರ್ಷದಿಂದ ವರ್ಷಕ್ಕೆ ಮಾರಾಟದಲ್ಲಿ ಶೇ 32.1 ರಷ್ಟು ಕುಸಿದು 1736.2 ಕೋಟಿ ರು ಮಾತ್ರ ಸಂಗ್ರಹವಾಗಿತ್ತು. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a latest development, Nestle India says that Maggi Noodles are sold out on Snapdeal. The popular noodle brand was being sold at Rs 144 for 12 packs (70 gms). Nestle India has partnered with Snapdeal for online sales.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more