ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೈಸ್‌ಜೆಟ್‌ ವಿಮಾನ ಸಂಸ್ಥೆ ಮುಚ್ಚಲು ಹೈಕೋರ್ಟ್‌ ಆದೇಶ

|
Google Oneindia Kannada News

ಚೆನ್ನೈ, ಡಿಸೆಂಬರ್ 9: ಸ್ಪೈಸ್‌ ಜೆಟ್‌ ವಿಮಾನ ಸಂಸ್ಥೆಯನ್ನು ಮುಚ್ಚುವಂತೆ ಮದ್ರಾಸ್‌ ಹೈಕೋರ್ಟ್‌ ಆದೇಶ ನೀಡಿದೆ. ಬಾಕಿ ಮೊತ್ತ ಪಾವತಿಸುವಂತೆ ಕೋರಿ ಷೇರು ಸಂಸ್ಥೆ ಕ್ರೆಡಿಟ್ ಸ್ಯೂಸೆ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಕೋರ್ಟ್ ಆದೇಶ ನೀಡಿದೆ. ಆದರೆ, ದಿವಾಳಿ ಹಂತ ತಲುಪಿರುವ ವಿಮಾನಯಾನ ಸಂಸ್ಥೆ, ಮೂರುವಾರಗಳ ಕಾಲಾವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮದ್ರಾಸ್‌ ಹೈಕೋರ್ಟ್‌ ಮೂರುವಾರಗಳ ತಡೆಯಾಜ್ಞೆ ಸಿಕ್ಕಿದೆ ಎಂದು ಸ್ಪೈಸ್‌ಜೆಟ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ ರಾಮಕೃಷ್ಣನ್ ಹೇಳಿದ್ದಾರೆ.

28 ಹೊಸ ದೇಶಿಯ ವಿಮಾನಗಳ ಹಾರಾಟ; ಸ್ಪೈಟ್ ಜೆಟ್28 ಹೊಸ ದೇಶಿಯ ವಿಮಾನಗಳ ಹಾರಾಟ; ಸ್ಪೈಟ್ ಜೆಟ್

ಸೋಮವಾರದಿಂದ ಎರಡು ವಾರಗಳ ಅವಧಿಯಲ್ಲಿ 5 ಮಿಲಿಯನ್ ಡಾಲರ್‌ ಠೇವಣಿ ಇಡುವಂತೆ ಸ್ಪೈಸ್‌ಜೆಟ್‌ಗೆ ಷರತ್ತು ವಿಧಿಸಿ ನ್ಯಾಯಮೂರ್ತಿ ಆರ್ ಸುಬ್ರಮಣಿಯನ್ ಅವರು ತಡೆಯಾಜ್ಞೆ ನೀಡಿದರು.

Madras HC order stayed for three weeks, SpiceJet over unpaid dues to Swiss company

ಸ್ಪೈಸ್‌ಜೆಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಆಸ್ತಿ ವಶಕ್ಕೆ ಪಡೆಯಬೇಕು, ಸಂಸ್ಥೆ ಅಧಿಕೃತವಾಗಿ ದಿವಾಳಿ ಎಂದು ಘೋಷಿಸಬೇಕು ಎಂದು ಷೇರು ಸಂಸ್ಥೆ ಮನವಿ ಸಲ್ಲಿಸಿತ್ತು. ಇದೀಗ ಮೂರುವಾರಗಳ ಬಳಿಕ ವಿಮಾನಯಾನ ಸಂಸ್ಥೆಯನ್ನು ಸಂಪೂರ್ಣವಾಗಿ ಜಪ್ತಿ ಮಾಡಿ, ಸ್ವಿಸ್ ಕಂಪನಿಗೆ ಬಾಕಿಮೊತ್ತ ಪಾವತಿಸಲಾಗುತ್ತದೆ. ಸ್ವಿಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ಸ್ಪೈಸ್ ಜೆಟ್ ಸುಮಾರು 24.01 ಮಿಲಿಯನ್ ಯುಎಸ್ ಡಾಲರ್ ಮೊತ್ತ ಬಾಕಿ ಉಳಿಸಿಕೊಂಡಿದೆ.

ಎಸ್ ಆರ್ ಟಿ ಟೆಕ್ನಿಕ್ಸ್ ಪರ ಕ್ರೆಡಿಟ್ ಸೂಸೆ ವಾದ:
ಸ್ವಿಟ್ಜರ್ಲೆಂಡ್ ಮೂಲದ ಎಸ್ ಆರ್ ಟಿ ಟೆಕ್ನಿಕ್ಸ್ ಸಂಸ್ಥೆಯು ಸ್ಪೈಸ್ ಜೆಟ್ ಸಂಸ್ಥೆಗೆ ವಿಮಾನಗಳ ಕಾರ್ಯ ನಿರ್ವಹಣೆ, ಇಂಜಿನ್, ರಿಪೇರಿ, ಬಿಡಿಭಾಗಳ ರಿಪೇರಿ, ಮರು ಜೋಡಣೆ ಸೇರಿದಂತೆ ಎಲ್ಲಾ ಬಗೆಯ ತಾಂತ್ರಿಕ ಸೇವೆಗಳನ್ನು ಒದಗಿಸಿದೆ. ಸುಮಾರು 10 ವರ್ಷಗಳ ಅವಧಿಗೆ ಈ ಸೇವೆ ನೀಡಲು ಒಪ್ಪಂದವಾಗಿತ್ತು. ನವೆಂಬರ್ 24, 2011ಕ್ಕೆ ಒಪ್ಪಂದದ ಅವಧಿ ಮುಕ್ತಾಯವಾಗಿದೆ.

ಆದರೆ, ಬಾಕಿ ಮೊತ್ತ ಉಳಿಸಿಕೊಂಡಿದ್ದ ಸ್ಪೈಸ್ ಜೆಟ್ ಮರು ಒಪ್ಪಂದ ಮಾಡಿಕೊಂಡು, ವಿಮಾನಯಾನ ಗಂಟೆಗಳ ದರ ಮುಂತಾದ ಇನ್ನಿತರ ಸೇವೆಗಳನ್ನು ಪಡೆದುಕೊಂಡಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ಎಸ್ ಆರ್ ಟಿ ಟೆಕ್ನಿಕ್ಸ್ ಸಂಸ್ಥೆ ಬಿಲ್ ದರ ಹೆಚ್ಚಿಸಿ, ಏಳು ಇನ್ ವಾಯ್ಸ್ ಕಳಿಸಿತ್ತು. ಆದರೆ, ಸಾಲದ ಸುಳಿಯಲ್ಲಿ ಸಿಲುಕಿದ್ದ ಸ್ಪೈಸ್ ಜೆಟ್ ಮೊತ್ತ ಪಾವತಿಸುವಲ್ಲಿ ವಿಫಲವಾಯಿತು.

ಎಸ್ ಆರ್ ಟಿ ಟೆಕ್ನಿಕ್ ಸಂಸ್ಥೆಗೆ ಹಣ ಕೊಡಿಸುವ ಭರವಸೆಯೊಂದಿಗೆ ಒಪ್ಪಂದ ಮಾಡಿಕೊಂಡ ಕ್ರೆಡಿಟ್ ಸೂಸೆ ಎಜಿ ಕಣಕ್ಕಿಳಿದು, ಸ್ಪೈಸ್ ಜೆಟ್ ಹಿಂದೆ ಬಿದ್ದು, ಬಾಕಿ ಮೊತ್ತಕ್ಕಾಗಿ ನೋಟಿಸ್ ಜಾರಿಗೊಳಿಸಿತು. ಆದರೆ, ಹಲವು ನೋಟಿಸ್ ಗಳಿಗೆ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ ಕ್ರೆಡಿಟ್ ಸೂಸೆ, ಸ್ಪೈಸ್ ಜೆಟ್ ದಿವಾಳಿ ಎಂದು ಘೋಷಿಸಿ, ಆಸ್ತಿ ಜಪ್ತಿ ಮಾಡಿ ಹಣ ಒದಗಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಸ್ಪೈಸ್ ಜೆಟ್ ಮತ್ತು SRT ಟೆಕ್ನಿಕ್ಸ್ ನಡುವಿನ ಒಪ್ಪಂದಗಳು ಪ್ರಸ್ತುತ ಅರ್ಜಿದಾರರಿಗೆ ಅಧಿಕೃತ ನಿಯೋಜನೆ ಹೊಣೆಯನ್ನು ಅಧಿಕೃತಗೊಳಿಸಲು ಕೋರ್ಟ್ ಒಪ್ಪಂದ ಕಾರಣ, ಜನವರಿ 2015 ರಲ್ಲಿ ಕಂಪನಿಗಳ ಕಾಯಿದೆಯ ಸೆಕ್ಷನ್ 434 ರ ಅಡಿಯಲ್ಲಿ ಸ್ಪೈಸ್ ಜೆಟ್ ಸಂಸ್ಥೆಗೆ SRT ಟೆಕ್ನಿಕ್ಸ್ ನೋಟಿಸ್ ನೀಡಿತ್ತು.

Recommended Video

ವಾಯುಪಡೆಯ Mi-17V5 ಹೆಲಿಕಾಪ್ಟರ್ ಸ್ಪೆಷಾಲಿಟಿ ಏನು? | Oneindia Kannada

"ಮದ್ರಾಸ್ ಹೈಕೋರ್ಟ್ ಡಿಸೆಂಬರ್ 6, 2021 ರ ತನ್ನ ಆದೇಶವನ್ನು ಅನ್ವಯ, ಕಂಪನಿಯ ಷರತ್ತಿಗೆ ಒಳಪಟ್ಟು ಮೂರು ವಾರಗಳ ಅವಧಿಗೆ ಅಧಿಕೃತ ಲಿಕ್ವಿಡೇಟರ್‌ನ ನೇಮಕಾತಿ ಮತ್ತು ಮುಕ್ತಾಯದ ಹಿಂದಿನ ಆದೇಶವನ್ನು ತಡೆಹಿಡಿದಿದೆ ಎರಡು ವಾರಗಳ ಅವಧಿಯಲ್ಲಿ ಐದು ಮಿಲಿಯನ್‌ ಯುಎಸ್ ಡಾಲರ್ ಸಮನಾದ ಮೊತ್ತವನ್ನು ಸಂಸ್ಥೆ ಠೇವಣಿ ಮಾಡಲಿದೆ'' ಎಂದು ಬಿಎಸ್‌ಇಗೆ ಸ್ಪೈಸ್‌ಜೆಟ್ ಅಧಿಕೃತ ಹೇಳಿಕೆ ನೀಡಿದೆ. ಒಟ್ಟಾರೆ, ಸ್ಪೈಸ್ ಜೆಟ್ ಬಾಕಿ ಮೊತ್ತ ಪಾವತಿಸುವುದೇ? ಅಥವಾ ದಿವಾಳಿ ಎಂದು ಅಧಿಕೃತವಾಗಿ ಘೋಷಿಸಿಕೊಳ್ಳುವುದೇ? ಕಾದುನೋಡಬೇಕಿದೆ.(ಪಿಟಿಐ)

English summary
The SpiceJet airlines said the Madras high court has stayed the order for a period of three weeks, subject to the condition that it deposits $5 million within two weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X