ಪ್ರತಿ ತಿಂಗಳು ಸಬ್ಸಿಡಿ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ

Posted By:
Subscribe to Oneindia Kannada

ನವದೆಹಲಿ, ಜುಲೈ 31: ಸಬ್ಸಿಡಿ ಅಡುಗೆ ಅನಿಲ(ಎಲ್‌ಪಿಜಿ) ಸಿಲಿಂಡರ್‌ ಬೆಲೆಯನ್ನು ಪ್ರತಿ ತಿಂಗಳು 4 ರು. ಏರಿಕೆ ಮಾಡುವಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್‌ ಆದೇಶಿಸಿದ್ದಾರೆ.

ಮುಂದಿನ ವರ್ಷ (2018) ಮಾರ್ಚ್‌ ವೇಳೆಗೆ ಅಡುಗೆ ಅನಿಲದ ಮೇಲಿನ ಎಲ್ಲ ಸಬ್ಸಿಡಿ ತೆಗೆಯುವ ನಿಟ್ಟಿನಲ್ಲಿ ಪ್ರತಿ ತಿಂಗಳು ಬೆಲೆ ಏರಿಕೆ ಮಾಡುವಂತೆ ಕೇಂದ್ರ ಸರ್ಕಾರ ತೈಲ ಕಂಪನಿಗಳಿಗೆ ಸೂಚಿಸಿದೆ.

10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ

ಸಬ್ಸಿಡಿಯನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ 14.2 ಕೆಜಿ ಸಬ್ಸಿಡಿ ಎಲ್ ಪಿಜಿ ಸಿಲಿಂಡರ್ ದರವನ್ನು 2.ರೂ ಏರಿಕೆ ( ವ್ಯಾಟ್ ಹೊರತುಪಡಿಸಿ) ಮಾಡುವಂತೆ ಕೇಂದ್ರ ಸರ್ಕಾರ ಈ ಹಿಂದೆಯೂ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಆದೇಶ ನೀಡಿತ್ತು.

LPG prices to be hiked by Rs 4 per month as Centre pushes to end subsidies

ಇದೀಗ ದರ ಏರಿಕೆಯನ್ನು ದುಪ್ಪಟ್ಟುಗೊಳಿಸಲಾಗಿದ್ದು, 2018ರ ಮಾರ್ಚ್ ವರೆಗೆ ಅಥವಾ ಸಬ್ಸಿಡಿಯನ್ನು ತೆಗೆದುಹಾಕುವವರೆಗೆ ಪ್ರತಿ ತಿಂಗಳು ಎಲ್ ಪಿಜಿ ದರ 4ರು. ಗಳಿಗೆ ಏರಿಕೆ ಮಾಡಲು ಆದೇಶ ನೀಡಲಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

Narendra Modi government aims 5 crores BPL families to get free LPG connections

ಪ್ರತಿ ಗೃಹಬಳಕೆದಾರರಿಗೆ ಸಬ್ಸಿಡಿ ಆಧಾರದ ಮೇಲೆ 14.2 ತೂಕದ ಸಿಲಿಂಡರ್ ನ್ನು ವರ್ಷದಲ್ಲಿ 12 ನೀಡಲಾಗುತ್ತಿತ್ತು. ಅದಕ್ಕಿಂತ ಹೆಚ್ಚು ಅಗತ್ಯವಿದ್ದರೆ ಮಾರುಕಟ್ಟೆ ಬೆಲೆಕೊಟ್ಟು ಖರೀದಿಸಬೇಕಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The government has ordered state-run oil companies to raise subsidised cooking gas (LPG) prices by Rs 4 per cylinder every month to eliminate all the subsidies by March next year, Oil Minister Dharmendra Pradhan said today.
Please Wait while comments are loading...