ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ವ್ಯಾಪ್ತಿಗೆ ತಂದು ಡೀಸೆಲ್‌ ದರ ಇಳಿಸಿ: ಲಾರಿ ಮಾಲೀಕರು

|
Google Oneindia Kannada News

ಬೆಂಗಳೂರು ಆಗಸ್ಟ್‌ 3: ಕೇಂದ್ರ ಸರಕಾರ ತೆರಿಗೆಯನ್ನು ಹೆಚ್ಚಿಸಿ ಕೃತಕವಾಗಿ ಡೀಸೆಲ್‌ ದರವನ್ನು ಹೆಚ್ಚಿಸಿರುವುದನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಡೀಸೆಲ್‌ ದರವನ್ನು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಿಸುವಂತೆ ಫೆಡರೇಷನ್‌ ಆಫ್‌ ಕರ್ನಾಟಕ ಲಾರಿ ಓನರ್ಸ್‌ ಅಸೋಸಿಯೇಷನ್‌ ಅಧ್ಯಕ್ಷರಾದ ಬಿ ಚನ್ನಾರೆಡ್ಡಿ ಅವರು ಆಗ್ರಹಿಸಿದ್ದಾರೆ.

Recommended Video

Apple producion moves from China to India | Oneindia Kannada

ಬೆಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಕರೋನಾ ಪರಿಸ್ಥಿತಿ ಇರುವುದರಿಂದ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಏರುಪೇರಾಗಿದೆ. ಈ ಸಂದರ್ಭದಲ್ಲಿ ನಮ್ಮ ಸರಕು ಸಾಗಾಣೆ ವಾಹನಗಳ ವ್ಯವಹಾರವು ಕುಂಠಿತಗೊಂಡಿದ್ದು, ಈ ಉದ್ದಿಮೆಯಲ್ಲಿ ಉಳಿಯುವುದೇ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರಕಾರ ಡೀಸೆಲ್‌ ದರಗಳನ್ನು ದಿನೇ ದಿನೇ ಹೆಚ್ಚಿನ ಉದ್ದಿಮೆಗೆ ದೊಡ್ಡ ಹೊಡೆತವನ್ನು ನೀಡಿದೆ.

ದೆಹಲಿಯಲ್ಲಿ ಕೊನೆಗೂ ಪೆಟ್ರೋಲ್‌ಗಿಂತ ಕಡಿಮೆಯಾದ ಡೀಸೆಲ್ ದರ: ವ್ಯಾಟ್ ಇಳಿಕೆದೆಹಲಿಯಲ್ಲಿ ಕೊನೆಗೂ ಪೆಟ್ರೋಲ್‌ಗಿಂತ ಕಡಿಮೆಯಾದ ಡೀಸೆಲ್ ದರ: ವ್ಯಾಟ್ ಇಳಿಕೆ

ರಾಷ್ಟ್ರಾದ್ಯಂತ ಲಾರಿ ಮಾಲೀಕರು ಕೇಂದ್ರ ಸರಕಾರಕ್ಕೆ ಅನೇಕ ಮನವಿಗಳನ್ನು ಸಲ್ಲಿಸಿ ಡೀಸೆಲ್‌ ದರವನ್ನು ತಗ್ಗಿಸಲು ಪ್ರಾರ್ಥಿಸಿರುತ್ತಾರೆ. ಈಗಿನ ಡೀಸೆಲ್‌ ಬೆಲೆಯು ಕೃತಕವಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ತಮ್ಮ ಪಾಲಿನ ತೆರಿಗೆಗಳನ್ನು ಹೆಚ್ಚಿಸಿರುವುದರಿಂದಲೇ ಆಗಿದೆ ಎಂದು ಹೇಳಿದರು.

 ಭಾರತ ದೇಶದಲ್ಲಿಡೀಸೆಲ್‌ ದರ ಏರಿಕೆ

ಭಾರತ ದೇಶದಲ್ಲಿಡೀಸೆಲ್‌ ದರ ಏರಿಕೆ

ಅಮೇರಿಕಾ ದೇಶ ಡೀಸೆಲ್‌ ಮೇಲೆ ಶೇಕಡಾ 19 ರಷ್ಟು ತೆರಿಗೆಯನ್ನು ವಿಧಿಸಿದರೆ, ಫ್ರಾನ್ಸ್‌ ದೇಶದಲ್ಲಿ ಇದರ ಪ್ರಮಾಣ ಶೇಕಡಾ 63 ರಷ್ಟಿದೆ. ಆದರೆ, ಭಾರತ ದೇಶದಲ್ಲಿ ಮಾತ್ರ ಇದರ ಪ್ರಮಾಣ ಶೇಕಡಾ 250 ರಷ್ಟು ಇದೆ. ಇದನ್ನು ನೋಡಿದರೆ ಕೇಂದ್ರ ಸರಕಾರ ಯಾವ ರೀತಿ ಸರಕು ಸಾಗಣೆ ವಾಹನಗಳ ಮಾಲೀಕರ ಮೇಲೆ ಅವೈಜ್ಞಾನಿಕ ತೆರಿಗೆ ಹೊರೆಯನ್ನು ಹಾಕುತ್ತಿದೆ ಎಂದು ಗೊತ್ತಾಗುತ್ತದೆ.

 ಕೊರೊನಾ ಆರ್ಥಿಕ ಸಂಕಷ್ಟ

ಕೊರೊನಾ ಆರ್ಥಿಕ ಸಂಕಷ್ಟ

ಈಗಿನ ಕೊರೊನಾ ವೈರಾಣು ಪರಿಣಾಮ ದೇಶದ ಆರ್ಥಿಕ ಚಟುವಟಿಕೆಗಳು ಸರಿಯಾಗಿ ನಡೆಯದೇ ಇರುವುದರಿಂದ ದುಬಾರಿ ಡೀಸೆಲ್‌ ದರವನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ರಾಷ್ಟ್ರವ್ಯಾಪಿ ಇರುವ ಎಲ್ಲಾ ಲಾರಿ ಮಾಲೀಕರ ಸಂಘಟನೆಗಳು ಜಂಟಿಯಾಗಿ ಚರ್ಚಿಸಿ ಕೇಂದ್ರ ಸರಕಾರಕ್ಕೆ ಪರಿಹಾರ ನೀಡಲು ಮನವಿಯನ್ನು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

 ಥರ್ಡ್‌ ಪಾರ್ಟಿ ಇನ್ಸೂರೆನ್ಸ್‌

ಥರ್ಡ್‌ ಪಾರ್ಟಿ ಇನ್ಸೂರೆನ್ಸ್‌

ಡೀಸೆಲ್‌ ದರವನ್ನು ಇಳಿಸುವುದು. ಥರ್ಡ್‌ ಪಾರ್ಟಿ ಇನ್ಸೂರೆನ್ಸ್‌ ನ್ನು ಡಿ ಟ್ಯಾರೀಫ್‌ ಮಾಡುವುದು. 15 ವರ್ಷದ ಹಳೆಯ ವಾಹನಗಳನ್ನು ಸ್ಕ್ರಾಪ್‌ ಮಾಡುವುದರ ಬಗ್ಗೆ ಚರ್ಚಸಿವುದು ಹಾಗೂ ಡೀಸೆಲ್‌ ದರಗಳನ್ನು ಜಿ.ಎಸ್‌.ಟಿ ವ್ಯಾಪ್ತಿಗೆ ಒಳಪಡಿಸುವುದು. ಈ ಮೇಲ್ಕಂಡ ನಾಲ್ಕು ಬೇಡಿಕೆಗಳನ್ನು ಕೇಂದ್ರ ಸರಕಾರ ಒಂದು ತಿಂಗಳ ಒಳಗಾಗಿ ಪರಿಹರಿಸಬೇಕು.

 ಪ್ರತಿಭಟನಾ ಮಾರ್ಗದ ಎಚ್ಚರಿಕೆ

ಪ್ರತಿಭಟನಾ ಮಾರ್ಗದ ಎಚ್ಚರಿಕೆ

ಇಲ್ಲದೆ ಇದ್ದ ಪಕ್ಷದಲ್ಲಿ ರಾಷ್ಟ್ರವ್ಯಾಪಿ ಲಾರಿ ಮಾಲೀಕರ ಸಂಘಟನೆಗಳು ಮುಂದಿನ ಪ್ರತಿಭಟನಾ ಮಾರ್ಗವನ್ನು ಹಮ್ಮಿಕೊಳ್ಳಲು ತೀರ್ಮಾನಿಸುವುದು ಅನಿವಾರ್ಯವಾಗಲಿದೆ ಎಂದು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಯು. ಶ್ರೀನಿವಾಸ್‌, ಎನ್‌ ಶ್ರೀನಿವಾಸ್‌ ರಾವ್‌, ಗಾಯ್‌ಬುಸಾಬ್‌ ಹೊನ್ನಳ್‌, ಪ್ರಧಾನ ಕಾರ್ಯದರ್ಶಿ ಆರ್‌ ವಿ ಪ್ರಕಾಶ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

English summary
Lorry Owners Association led by B. Channa Reddy today demanded the Central Government to reduce the Diesel Prices and few more requests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X