ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸೆಂಬರ್ 1ರಿಂದ ಆಗುವ ಪ್ರಮುಖ ಬದಲಾವಣೆಗಳು: ಎಲ್‌ಪಿಜಿ ಸಿಲಿಂಡರ್‌ ದರ ಎಷ್ಟಾಗಬಹುದು?

|
Google Oneindia Kannada News

ನವದೆಹಲಿ, ನವೆಂಬರ್ 30: ಪ್ರತಿ ತಿಂಗಳ ಒಂದನೇ ತಾರೀಖಿನಂದು ಅನೇಕ ಸಾಮಾನ್ಯ ಬದಲಾವಣೆಗಳನ್ನು ನಾವು ಕಾಣಬಹುದು. ಈ ಬದಲಾವಣೆಗಳು ಇಡೀ ದೇಶದ ಜನರ ಜೀವನದ ಮೇಲೆ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತವೆ. ದಿನನಿತ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನಿಂದ ಹಿಡಿದು ಆರೋಗ್ಯ ವಿಮೆ, ಜೀವ ವಿಮೆ ಪ್ರೀಮಿಯಂ ದರಗಳು, ಹೊಸ ರೈಲುಗಳ ವೇಳಾಪಟ್ಟಿ, ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಹೊಸ ನಿಯಮಗಳನ್ನು ನಾವು ಕಾಣಬಹುದು.

ಹೀಗೆ ಭಾರತೀಯ ನಾಗರೀಕರ ಮೇಲೆ ಹೆಚ್ಚು ಪರಿಣಾಮ ಬೀರುವ ಬದಲಾವಣೆಗಳನ್ನು ಇಲ್ಲಿ ಪಟ್ಟಿ ಮಾಡಿ ತಿಳಿಸಲಾಗಿದೆ. ಡಿಸೆಂಬರ್ 1ರಿಂದ ಏನೆಲ್ಲಾ ಬದಲಾವಣೆಯಾಗುತ್ತದೆ ಎಂದು ಈ ಕೆಳಗೆ ತಿಳಿಯಿರಿ.

ಬರ್ಗರ್ ಕಿಂಗ್ IPO: ಪ್ರತಿ ಷೇರಿಗೆ 59-60 ರೂಪಾಯಿಗೆ ಬೆಲೆ ನಿಗದಿಬರ್ಗರ್ ಕಿಂಗ್ IPO: ಪ್ರತಿ ಷೇರಿಗೆ 59-60 ರೂಪಾಯಿಗೆ ಬೆಲೆ ನಿಗದಿ

ಎಲ್‌ಪಿಜಿ ಸಿಲಿಂಡರ್ ದರ

ಎಲ್‌ಪಿಜಿ ಸಿಲಿಂಡರ್ ದರ

ಭಾರತದಲ್ಲಿ ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ದರವನ್ನು ತಿಂಗಳಿಗೆ ಒಮ್ಮೆ ಪರಿಷ್ಕರಿಸುತ್ತದೆ. ಹೀಗಾಗಿ ಡಿಸೆಂಬರ್‌ನಲ್ಲಿ ಅನಿಲ ದರಗಳ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ.

ನವೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ದರವು 594ರೂಪಾಯಿ, ಬೆಂಗಳೂರಿನಲ್ಲಿ 594 ರೂಪಾಯಿ, ಮುಂಬೈ 594 ರೂಪಾಯಿ, ಹಾಗೂ ಹೈದ್ರಾಬಾದ್‌ನಲ್ಲಿ 646.50 ರೂ. ಕಾಣಬಹುದು. ಆದರೆ ಈ ತಿಂಗಳು ಎಲ್‌ಪಿಜಿ ಸಿಲಿಂಡರ್ ದರ ಕಡಿಮೆಯಾಗಬಹುದು ಎನ್ನಲಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ದೇಶದ ಎಲ್‌ಪಿಜಿ ಬೆಲೆಯನ್ನು ಸ್ಥಿರವಾಗಿಸಲು ಸರ್ಕಾರ ಹಲವಾರು ಕ್ರಮ ಕೈಗೊಂಡಿದೆ.

ವಿಮೆ ಪ್ರೀಮಿಯಂ ಮೊತ್ತ ಬದಲಾಯಿಸಬಹುದು

ವಿಮೆ ಪ್ರೀಮಿಯಂ ಮೊತ್ತ ಬದಲಾಯಿಸಬಹುದು

ಪ್ರತಿಯೊಬ್ಬ ನಾಗರೀಕರು ಒಂದು ಆರೋಗ್ಯ ವಿಮೆ ಹೊಂದಿರುವುದು ಉತ್ತಮ. ವಾರ್ಷಿಕವಾಗಿ ಅಥವಾ ಮಾಸಿಕವಾಗಿ ಇಂತಿಷ್ಟು ಪಾವತಿಯ ಕಂತುಗಳನ್ನು ಅನ್ನು ವಿಮೆ ಒಳಗೊಂಡಿರುತ್ತದೆ. ಒಂದು ವೇಳೆ ಹಣ ಪಾವತಿಸಲು ಕಷ್ಟವಾದರೆ, ವಿಮೆ ಹೊಂದಿರುವವರು ತಮ್ಮ ಪ್ರೀಮಿಯಂ ಮೊತ್ತವನ್ನು ಶೇಕಡಾ 50ರಷ್ಟು ತಗ್ಗಿಸುವ ಅವಕಾಶ ಹೊಂದಿದ್ದಾರೆ. ಈ ಮೂಲಕ ಅರ್ಧದಷ್ಟು ಕಂತುಗಳನ್ನು ಕಟ್ಟುವ ಮೂಲಕ ಪಾಲಿಸಿ ಕಳೆದುಕೊಳ್ಳದೆ, ಉಳಿಸಿಕೊಳ್ಳಬಹುದು.

ಕಳೆದ 9 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಎಷ್ಟಾಯ್ತು?ಕಳೆದ 9 ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಎಷ್ಟಾಯ್ತು?

ಡಿಸೆಂಬರ್‌ನಲ್ಲಿ ಹೊಸ ರೈಲುಗಳು ಪ್ರಾರಂಭ

ಡಿಸೆಂಬರ್‌ನಲ್ಲಿ ಹೊಸ ರೈಲುಗಳು ಪ್ರಾರಂಭ

ಈ ತಿಂಗಳಿನಲ್ಲಿ ಹೊಸ ರೈಲು ಸೇವೆಯನ್ನು ನಾವು ಕಾಣಬಹುದು. ಜ್ಹೇಲಂ ಎಕ್ಸ್‌ಪ್ರೆಸ್ ಮತ್ತು ಪಂಜಾಬ್ ಮೇಲ್‌ನಂತಹ ಹೊಸ ರೈಲುಗಳು ಡಿಸೆಂಬರ್ 1ರಿಂದ ಓಡಾಟ ನಡೆಸಲಿವೆ. ಈ ರೈಲುಗಳು ಸಾಮಾನ್ಯ ವರ್ಗದಲ್ಲಿ ಮಾತ್ರ ಚಲಿಸಲಿವೆ.

01077/78 ಪುಣೆ-ಜಮ್ಮು ತಾವಿ ನಡುವಿನ ಜ್ಹೇಲಂ ವಿಶೇಷ ರೈಲು ಮತ್ತು 02137/38 ಮುಂಬೈ ಫಿರೋಜ್‌ಪುರ ಪಂಜಾಬ್ ಮೇಲ್ ವಿಶೇಷ ರೈಲುಗಳು ಪ್ರತಿದಿನ ಚಲಿಸುತ್ತವೆ. ಈ ಹಿಂದೆ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಕೆಲವು ತಿಂಗಳು ಕಾಲ ರೈಲು ಸೇವೆಯು ಬಂದ್ ಆಗಿತ್ತು. ಆದರೆ ಈಗ ವಿಶೇಷ ರೈಲುಗಳ ಸೇವೆಗಳನ್ನು ಒಂದೊಂದಾಗಿ ಪುನಾರಂಭಿಸಲಾಗುತ್ತಿದೆ.

ಆರ್‌ಟಿಜಿಎಸ್‌ನಲ್ಲಿನ ಬದಲಾವಣೆ

ಆರ್‌ಟಿಜಿಎಸ್‌ನಲ್ಲಿನ ಬದಲಾವಣೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಅಕ್ಟೋಬರ್ ತಿಂಗಳಿನಲ್ಲಿ ತಿಳಿಸಿರುವಂತೆ, ಡಿಸೆಂಬರ್‌ನಿಂದ ವಾರದ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6ಗಂಟೆವರೆಗೆ ರಿಯಲ್ ಟೈಮ್ ಗ್ರಾಸ್‌ ಸೆಟಲ್ಮೆಂಟ್ ಸಿಸ್ಟಮ್ (ಆರ್‌ಟಿಜಿಎಸ್‌) ಮಾಡಲಾಗುವುದು ಎಂದು ತಿಳಿಸಿತ್ತು. ಆದರೆ ಪ್ರತಿ ತಿಂಗಳು ಎರಡು ಮತ್ತು ನಾಲ್ಕನೇ ಶನಿವಾರ ಹೊರತುಪಡಿಸಿ ಗ್ರಾಹಕರು ಉಳಿದ ಕಚೇರಿ ಕೆಲಸದ ದಿನಗಳಲ್ಲಿ ಆರ್‌ಟಿಜಿಎಸ್ ಸೌಲಭ್ಯ ಪಡೆಯಬಹುದು ಎಂದು ತನ್ನ ದ್ವಿಮಾಸಿಕ ಹಣಕಾಸು ನೀತಿಯಲ್ಲಿ ತಿಳಿಸಿದೆ.

English summary
From December 1, many crucial changes are set to take place which will affect the lives of common man significantly. Details here
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X