ಮತ್ತೆ ಕುಸಿತ ಕಂಡ ಎಲ್‌ಐಸಿ ಷೇರು: ಹೂಡಿಕೆದಾರರಿಗೆ ಭಾರಿ ನಷ್ಟ
ದೆಹಲಿ, ಜೂನ್ 6: ಭಾರಿ ನಿರೀಕ್ಷೆಯೊಂದಿಗೆ ಷೇರುಮಾರುಕಟ್ಟೆಗೆ ಪ್ರವೇಶಿಸಿದ್ದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು ಹೂಡಿಕೆದಾರರು ಭಾರಿ ನಷ್ಟ ಅನುಭವಿಸಿದ್ದಾರೆ.
ಸೋಮವಾರ ಎಲ್‌ಐಸಿ ಷೇರು ಬೆಲೆ ಸೋಮವಾರದ ದಿನದಾಂತ್ಯಕ್ಕೆ 800 ರೂಪಾಯಿಗಿಂತ ಕಡಿಮೆಯಾಗಿ, 776.50 ರೂಪಾಯಿಯಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ. ಷೇರಿನ ಐಪಿಒ ವಿತರಣೆ ಬೆಲೆ 949 ರೂಪಾಯಿಗಳಿಗೆ ಹೋಲಿಸಿದರೆ ಸದ್ಯದ ಬೆಲೆ ಶೇ.23.75ಕ್ಕಿಂತ ಕಡಿಮೆಯಾಗಿವೆ.
ಷೇರುಗಳ ಬೆಲೆಯಲ್ಲಿನ ಕುಸಿತದೊಂದಿಗೆ ಎಲ್‌ಐಸಿ ಮಾರುಕಟ್ಟೆ ಮೌಲ್ಯ 5 ಲಕ್ಷ ಕೋಟಿ ರೂಪಾಯಿಗಳಿಗಿಂತ ಕೆಳಕ್ಕಿಳಿದು, 4.92 ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಐಪಿಒದಲ್ಲಿ ಷೇರು ವಿತರಣೆ ವೇಳೆ ಎಲ್‌ಐಸಿ ಮಾರುಕಟ್ಟೆ ಮೌಲ್ಯ 6,00,242 ಕೋಟಿ ರೂಪಾಯಿಗಳಷ್ಟಿತ್ತು. ಇದುವರೆಗೂ ಒಟ್ಟಾರೆ ಕಂಪನಿ ಮೌಲ್ಯ 1.08 ಲಕ್ಷ ಕೋಟಿ ಕಡಿಮೆಯಾಗಿದೆ. ಈ ಕುಸಿತದೊಂದಿಗೆ ಎಲ್‌ಐಸಿ ಸದ್ಯ ಅತ್ಯಮೂಲ್ಯ ಕಂಪನಿ ರ್‍ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿದೆ.

2022ರ ಮೇ 17 ರಂದು ಎಲ್‌ಐಸಿ ಷೇರುಗಳು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲ್ಪಟ್ಟಿದ್ದವು. ಷೇರುಗಳು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತವೆ ಎಂದೇ ನಂಬಲಾಗಿತ್ತು. ದೇಶದ ಜನರಲ್ಲಿ, ಹೂಡಿಕೆದಾರರಲ್ಲಿ ಎಲ್‌ಐಸಿ ಷೇರು ಕುರಿತು ಭಾರಿ ಕುತೂಹಲ ಮೂಡಿಸಿತ್ತು. ದೀರ್ಘಾವಧಿಯ ನಿರೀಕ್ಷೆ ಮತ್ತು ಗಾತ್ರದಲ್ಲಿ ತೀವ್ರ ಕಡಿತದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ತೀವ್ರ ಬೇಡಿಕೆ ಸೃಷ್ಟಿಯಾಗಬಹುದು ಎನ್ನಲಾಗಿತ್ತು.
ನಿರೀಕ್ಷೆಯೊಂದಿಗೆ ಮಾರುಕಟ್ಟೆಗೆ ಬಂದ ಷೇರುಗಳು ಪ್ರಾರಂಭದಿಂದಲೇ ನಿರಂತರ ಕುಸಿತ ಕಾಣುತ್ತಿವೆ. ಅಂದಿನಿಂದ ಇಂದಿನವರೆಗೂ ಕೇವಲ ನಾಲ್ಕು ವಹಿವಾಟುಗಳಲ್ಲಿ ಮಾತ್ರ ಗಳಿಕೆ ಕಂಡಿವೆ, ಉಳಿದ ದಿನಗಳಲ್ಲಿ ಮಾರಾಟದ ಒತ್ತಡದಲ್ಲಿ ಕುಸಿತ ಕಂಡಿದೆ.
ಎಮ್ಕಿ ಗ್ಲೋಬಲ್, ಎಲ್‌ಐಸಿಯನ್ನು "ನೃತ್ಯ ಮಾಡದ ಆನೆ" ಎಂದು ಕರೆದಿದೆ, ಅದರ ಬೆಳವಣಿಗೆಗೆ ತಕ್ಕಂತೆ ಬೆಲೆ ಇದೆ ಎಂದು ಹೇಳಿದೆ. ಎಲ್‌ಐಸಿ ಕಂಪನಿಯ ಗಾತ್ರ, ಉದ್ಯಮದಲ್ಲಿನ ಪ್ರಾಬಲ್ಯ ಮತ್ತು ಅದರ ಪರಂಪರೆಯೇ ಷೇರಿನ ಬೆಲೆ ಏರಿಕೆಗೆ ಅಡಚಣೆಗಳಾಗಿ ಮುಂದುವರಿಯುತ್ತವೆ ಎಂದು ಹೇಳಿದೆ. ಹೆಚ್ಚಿನ ವಿಶ್ಲೇಷಕರು ಷೇರಿನ ಬೆಲೆ ತಟಸ್ಥವಾಗಿರಲಿದೆ ಎಂದು ಹೇಳಿದ್ದು, ಹೆಚ್ಚು ಏರಿಕೆ ಕಾಣುವುದಿಲ್ಲ ಎಂಬ ಭವಿಷ್ಯ ನುಡಿದಿದ್ದಾರೆ.
"13 ಲಕ್ಷ ಏಜೆಂಟ್‌ಗಳ ನೆಟ್‌ವರ್ಕ್ ಎಲ್‌ಐಸಿಯ ಅತಿದೊಡ್ಡ ಶಕ್ತಿಯಾಗಿದೆ. ಖಾಸಗಿ ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇದು ಭೌತಿಕವಾಗಿ ಹೆಚ್ಚಿನ ಉತ್ಪಾದಕತೆಯನ್ನು ಹೊಂದಿದೆ. ಆದರೂ, ಬೃಹತ್ ಗಾತ್ರದ ಶಾಖೆಯ ನೆಟ್‌ವರ್ಕ್ ವೆಚ್ಚ ಹೆಚ್ಚಾಗಲೂ ಕೂಡ ಕಾರಣವಾಗಿದೆ," ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications