ಈ ಐದು ಹೂಡಿಕೆ ವಿಧಾನ ತಿಳಿದುಕೊಳ್ಳಿ: ಹಣ ಉಳಿಸುವುದು & ಲಾಭ ಫಿಕ್ಸ್!
ಹೂಡಿಕೆಗಿಂತಲೂ ಖರ್ಚು ಹೆಚ್ಚಾಗುತ್ತಿರುವ ಸಮಯವಿದು. ಸಂಬಳ ಎಷ್ಟು ಬಂದರೂ ಅದರ ಖರ್ಚು ಭಾಗವೇ ಹೋಗಿ ಅದಾದ ಮೇಲೆ ಉಳಿಯುವುದು ತುಂಬಾನೇ ಕಡಿಮೆ. ಆದರೆ, ನೀವು ಈ ಐದು ಹೂಡಿಕೆಗಳ ಬಗ್ಗೆ ತಿಳಿದುಕೊಂಡರೆ ಲಾಭ ಫಿಕ್ಸ್ ಅಂತಲೇ ಹೇಳಲಾಗುತ್ತಿದೆ. ಅಲ್ಪಸ್ವಲ್ಪ ಹಣ ಬಂದರೂ ಕಮಿಟ್ಮೆಂಟ್ ಅಂತ ಇದ್ದರೆ, ತಿಂಗಳು ತಿಂಗಳು ಹಣ ಸೇವ್ ಆಗುತ್ತಲ್ಲೇ ಹೋಗುತ್ತದೆ. ಹಾಗಾದರೆ ಯಾವುದು ಆ ಐದು ಹಣ ಉಳಿತಾಯದ ಮಾರ್ಗಗಳು ಅದರ ವಿವರಗಳೇನು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಎಲ್ಲಾ ಬ್ಯಾಂಕುಗಳು ವಿವಿಧ ಹೂಡಿಕೆ ಆಯ್ಕೆಗಳನ್ನು ನೀಡುತ್ತವೆ. ಅದನ್ನು ಪ್ರಮುಖವಾಗಿ ಐದು ವಿಭಾಗಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಸ್ಥಿರ ಠೇವಣಿಗಳು (Fixed Deposits), ಮರುಕಳಿಸುವ ಠೇವಣಿಗಳು (Recurring Deposits), ಮ್ಯೂಚುವಲ್ ಫಂಡ್‌ಗಳು, ಸರ್ಕಾರಿ ಭದ್ರತೆಗಳು ಮತ್ತು ಬಾಂಡ್‌ಗಳು ಎಂದು ಸೇರಿವೆ. ಈ ಆಯ್ಕೆಗಳು ವಿಭಿನ್ನ ಹೂಡಿಕೆಯ ವಿಧಾನವನ್ನು ಒಳಗೊಂಡಿದೆ. ಈ ಆಯ್ಕೆಗಳಲ್ಲಿ ನೀವು ಹೂಡಿಕೆ ಮಾಡಿದರೆ ಅಲ್ಪಾವಧಿ ಮತ್ತು ದೀರ್ಘಾವಧಿ ಲಾಭ ಸಿಗುತ್ತದೆ. ಅದರ ವಿವರ ಮತ್ತು ಲಾಭದ ಮಾಹಿತಿಯನ್ನು ನೋಡೋಣ.

1. ಸ್ಥಿರ ಠೇವಣಿಗಳು / Fixed Deposits (FDs): ಸ್ಥಿರ ಠೇವಣಿ ಎನ್ನುವುದು ಕಡಿಮೆ-ಅಪಾಯದ ಹೂಡಿಕೆ ವಿಧಾನಗಳಲ್ಲಿ ಒಂದಾಗಿದೆ. ಇದರಲ್ಲಿ ನೀವು ಮೊದಲೇ ನಿರ್ಣಯಿಸಿದ ಬಡ್ಡಿದರದಲ್ಲಿ ನಿಗದಿತ ಅವಧಿಗೆ ಒಂದು ದೊಡ್ಡ ಮೊತ್ತವನ್ನು ಠೇವಣಿ ಇಡುತ್ತೀರಿ. ಬ್ಯಾಂಕುಗಳು FDಗಳಿಗೆ ವಿವಿಧ ಅವಧಿಗಳನ್ನು ನೀಡುತ್ತವೆ. ಅಲ್ಲದೇ ಬಡ್ಡಿದರಗಳು ಅವಧಿಯು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗುತ್ತವೆ. FDಗಳನ್ನು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇದು ನಿಖರ ಆದಾಯವನ್ನು ಕೊಡುತ್ತವೆ. ಅಪಾಯವಿಲ್ಲದೆ ಹೂಡಿಕೆದಾರರಿಗೆ ಇದು ಸೂಕ್ತವಾಗಿದೆ.
2. ಮರುಕಳಿಸುವ ಠೇವಣಿಗಳು / Recurring Deposits (RDs): ಮರುಕಳಿಸುವ ಠೇವಣಿಯು ನಿರ್ದಿಷ್ಟ ಅವಧಿಗೆ ನೀವು ನಿಯಮಿತವಾಗಿ ಹಣ ಹೂಡಿಕೆ ಮಾಡಬಹುದು. ಉದಾಹರಣೆಗೆ ಒಂದು ವರ್ಷಕ್ಕೆ ನೀವು ಈ ಹೂಡಿಕೆಯನ್ನು ಆಯ್ಕೆ ಮಾಡಿಕೊಂಡರೆ, ಪ್ರತಿ ತಿಂಗಳು ಇಂತಿಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತಾ ಹೋಗಬಹುದು. FDಗಳಂತೆಯೇ RDಗಳು ಸಹ ಸ್ಥಿರ ಬಡ್ಡಿ ದುಡ್ಡನ್ನು ಕೊಡುತ್ತವೆ. ಇನ್ನು ಈ ರೀತಿ ಗಳಿಸಿದ ಬಡ್ಡಿಯು ಸಾಮಾನ್ಯವಾಗಿ ಉಳಿತಾಯ ಖಾತೆಗಿಂತ ಹೆಚ್ಚಾಗಿರುತ್ತದೆ. ಏನಾದರೂ ಹಣ ಸ್ವಲ್ಪ ಅಕೌಂಟ್‌ನಲ್ಲಿ ಉಳಿತಾಯ ಮಾಡಬೇಕು ಹಾಗೂ ಅದರ ಮೇಲೆ ಲಾಭವೂ ಸಿಗಬೇಕು ಎಂದು ಲೆಕ್ಕಾಚಾರ ಹಾಕುವವರಿಗೆ ಇದೊಂದು ಆರ್‌ಡಿ ಅತ್ಯುತ್ತಮ ಆಯ್ಕೆಯಾಗಿದೆ.
3. ಮ್ಯೂಚುಯಲ್ ಫಂಡ್‌ಗಳು / Mutual Funds: ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ ಹೆಚ್ಚು ಗಮನ ಕೊಟ್ಟು ಹೂಡಿಕೆ ಮಾಡಬೇಕು. ಈ ಹೂಡಿಕೆಯಲ್ಲಿ ನಿಮಗೆ ಷೇರುಗಳು, ಬಾಂಡ್‌ಗಳು ಅಥವಾ ಇತರ ಸೆಕ್ಯುರಿಟಿಗಳ ವೈವಿಧ್ಯಮಯ ಪೋರ್ಟ್‌ಫೋಲಿಯೊದಲ್ಲಿ ಹೂಡಿಕೆ ಮಾಡಲು ಅವಕಾಶ ಇದೆ. ಬ್ಯಾಂಕುಗಳು ಸಾಮಾನ್ಯವಾಗಿ ಈಕ್ವಿಟಿ ಫಂಡ್‌ಗಳು, ಸಾಲ ನಿಧಿಗಳು ಮತ್ತು ಹೈಬ್ರಿಡ್ ಫಂಡ್‌ಗಳು ಸೇರಿದಂತೆ ವಿವಿಧ ರೀತಿಯ ಮ್ಯೂಚುಯಲ್ ಫಂಡ್‌ಗಳನ್ನು ನೀಡುತ್ತವೆ. ಆದರೆ, ಎಲ್ಲಾ ಷರತ್ತುಗಳನ್ನು ನೋಡಿ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
4. ಸರ್ಕಾರಿ ಭದ್ರತೆಗಳು ಮತ್ತು ಬಾಂಡ್‌ಗಳು: ಸರ್ಕಾರವು ನೀಡುವ ಸಾಲಗಳಲ್ಲಿ ಸರ್ಕಾರಿ ಭದ್ರತೆಗಳು ಮತ್ತು ಬಾಂಡ್‌ಗಳಲ್ಲಿ ಬ್ಯಾಂಕ್‌ಗಳು ಹೂಡಿಕೆಗಳನ್ನು ನೀಡುತ್ತವೆ. ಸರ್ಕಾರವೇ ಈ ಹೂಡಿಕೆಯ ಭಾಗವಾಗಿರುವುದರಿಂದಾಗಿ ಇವುಗಳನ್ನು ಸಾಮಾನ್ಯವಾಗಿ ಸುರಕ್ಷಿತ ಹೂಡಿಕೆಗಳೆಂದು ಪರಿಗಣಿಸಲಾಗುತ್ತದೆ. ಬಾಂಡ್‌ಗಳು ನಿರ್ದಿಷ್ಟ ಅವಧಿಯಲ್ಲಿ ಸ್ಥಿರ ಬಡ್ಡಿ ದುಡ್ಡನ್ನು ಕೊಡುತ್ತವೆ. ಆದರೆ ಸರ್ಕಾರಿ ಭದ್ರತೆಗಳು ಅಲ್ಪಾವಧಿಯ ಅಥವಾ ದೀರ್ಘಾವಧಿಯದ್ದಾಗಿರುವ ಸಾಧ್ಯತೆ ಇರುತ್ತದೆ.
5. ಇತರ ಪ್ರಮುಖ ಹೂಡಿಕೆ ಆಯ್ಕೆಗಳು: ಇನ್ನು ಕೆಲವೊಂದು ಬ್ಯಾಂಕ್‌ಗಳು ವಿವಿಧ ಹೂಡಿಕೆಯ ಆಯ್ಕೆಗಳನ್ನು ನೀಡುತ್ತವೆ.
* ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS): ದೀರ್ಘಾವಧಿಯ ನಿವೃತ್ತಿ ಉಳಿತಾಯ ಯೋಜನೆಯಾಗಿದೆ.
* ಸಾರ್ವಜನಿಕ ಭವಿಷ್ಯ ನಿಧಿ (PPF): ಸರ್ಕಾರಿ ಬೆಂಬಲಿತ, ದೀರ್ಘಾವಧಿಯ ಉಳಿತಾಯ ಯೋಜನೆ.
* ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS): ಹಿರಿಯ ನಾಗರಿಕರಿಗಾಗಿ ನಿವೃತ್ತಿ ಉಳಿತಾಯ ಯೋಜನೆ.
* ಯುನಿಟ್ ಲಿಂಕ್ಡ್ ವಿಮಾ ಯೋಜನೆಗಳು (ULIP ಗಳು): ವಿಮೆ ಮತ್ತು ಹೂಡಿಕೆಯ ಸಂಯೋಜನೆ.
ಚಿನ್ನದ ಬಾಂಡ್‌ಗಳು: ಚಿನ್ನದಿಂದ ಬಾಂಡ್‌ಗಳನ್ನು ಆರ್‌ಬಿಐ ಸೇರಿದಂತೆ ವಿವಿಧ ಬ್ಯಾಂಕ್‌ಗಳು ನೀಡುತ್ತವೆ. ಇದರಿಂದ ಈಗ ಬಾಂಡ್ ಖರೀದಿ ಮಾಡಿ ಮುಂದೊಂದು ದಿನ ಅದನ್ನು ಬಳಸಿಕೊಳ್ಳುವುದಕ್ಕೂ ಅವಕಾಶವಿದೆ. ಇದು ಚಿನ್ನ ಖರೀದಿಗಿಂತಲೂ ಉತ್ತಮ ಆಯ್ಕೆ ಎಂದೇ ಹೇಳಲಾಗುತ್ತದೆ. ರಿಯಲ್ ಎಸ್ಟೇಟ್: ಆಸ್ತಿಯಲ್ಲಿ ಹೂಡಿಕೆಯನ್ನೂ ಸಹ ಸ್ವಲ್ಪ ಹೆಚ್ಚಿನ ಹಣ ಇದ್ದರೆ ಮಾಡಿಕೊಳ್ಳಬಹುದಾಗಿದೆ.












Click it and Unblock the Notifications