ಲಾವದಿಂದ 3,333 ರು ಗಳಿಗೆ 4ಜಿ ಹ್ಯಾಂಡ್ ಸೆಟ್!

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 07: ಲಾವ ಇಂಟರ್ ನ್ಯಾಷನಲ್ ಲಿಮಿಟೆಡ್ ಲಾವ4ಜಿ ಕನೆಕ್ಟ್ ಎಂ1 ಎಂಬ ಹೆಸರಿನ ಮೊದಲ 4ಜಿ- ಆಧಾರಿತ ಸ್ಮಾರ್ಟ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಆಕರ್ಷಕವಾದ ಲಾವ 4ಜಿ ಕನೆಕ್ಟ್ ಎಂ1 ಬೆಲೆ 3,333 ರೂಪಾಯಿಗಳಾಗಿದ್ದು, ಪಾಕೆಟ್ ಸ್ನೇಹಿ 4ಜಿ ಮೊಬೈಲ್ ಹ್ಯಾಂಡ್ ಸೆಟ್ ಆಗಿದೆ.

ಈ ಲಾವ 4ಜಿ ಕನೆಕ್ಟ್ ಎಂ1 ಗ್ರಾಹಕಗೆ ಸ್ಮಾರ್ಟ್‍ಫೋನ್‍ನ ಅನುಭವ ನೀಡುವುದರ ಜತೆಗೆ, ಅತ್ಯುತ್ತಮ ಬಾಳಿಕೆ, ಸುಲಭ ದರ ಮತ್ತು ಬ್ಯಾಟರಿ ಬ್ಯಾಕ್ ಅಪ್ ಅತ್ಯುತ್ತಮವಾಗಿದೆ. 512 ಎಂಬಿ RAMನೊಂದಿಗೆ 1.2 ಜಿಎಚ್‍ಝಡ್ ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿದೆ. ಲಾವ 4ಜಿ ಕನೆಕ್ಟ್ ಎಂ1 ಯಾವುದೇ ಕಿರಿಕಿರಿಯಿಲ್ಲದೇ ಬಳಕೆದಾರರಿಗೆ 4ಜಿ ಅನುಭವ ನೀಡಲಿದೆ.

ಈ ನೂತನ ಮೊಬೈಲ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿದ ಲಾವ ಇಂಟರ್‍ನ್ಯಾಷನಲ್‍ನ ಮುಖ್ಯಸ್ಥ(ಉತ್ಪನ್ನ) ಗೌರವ್ ನಿಗಂ ಅವರು, 'ನಾವು ಗ್ರಾಹಕರಿಗೆ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಕ ಉತ್ಪನ್ನಗಳನ್ನು ನೀಡಲು ಸದಾ ಶ್ರಮಿಸುತ್ತಿರುತ್ತೇವೆ. ಇದರ ಪರಿಣಾಮವಾಗಿ ಇದೀಗ ಲಾವ 4ಜಿ ಕನೆಕ್ಟ್ ಎಂ1 ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇವೆ.

Lava 4G Connect M1 feature phone with 4G VoLTE support launched

ಇದರ ವೈಶಿಷ್ಟ್ಯಗಳಲ್ಲಿ ಪ್ರಮುಖವಾದುವೆಂದರೆ ವೈರ್‍ಲೆಸ್ ಎಫ್‍ಎಂ, ಉತ್ತಮವಾದ ಹಾಗೂ ಸ್ಪಷ್ಟ ಧ್ವನಿಗಾಗಿ ಬಾಕ್ಸ್ ಸ್ಪೀಕರ್ ಮತ್ತು ಕೆ ಕ್ಲಾಸ್ ಆಂಪ್ಲಿಫಿಯರ್ ಮತ್ತು ವಿಜಿಎ ಕ್ಯಾಮೆರಾವನ್ನು ಒಳಗೊಂಡಿದೆ. ಈ ಮೂಲಕ ಲಾವ 4ಜಿ ಕನೆಕ್ಟ್ ಎಂ1 ಸಂಪೂರ್ಣ ಮನೋರಂಜನೆಯ ಸಾಧನವೂ ಆಗಲಿದೆ. 4ಜಿಯಲ್ಲದೇ ಲಾವ 4ಜಿ ಕನೆಕ್ಟ್ ಎಂ1 2ಜಿ ಧ್ವನಿ ಕರೆಗಳು ಮತ್ತು ಎಡ್ಜ್ ಸಂಪರ್ಕಕ್ಕೂ ಪೂರಕವಾಗಿದೆ.

ಲಾವ 4ಜಿ ಕನೆಕ್ಟ್ ಎಂ1 ರ ಪ್ರಮುಖ ವೈಶಿಷ್ಟ್ಯಗಳು
4ಜಿ ವೋಲ್ಟೆ (ವಾಯ್ಸ್ ಓವರ್ ಎಲ್‍ಟಿಇ)
ಫೇಸ್‍ಬುಕ್ ಲೈಟ್ ಪ್ರಿಲೋಡೆಡ್
1.2 ಜಿಎಚ್‍ಝಡ್ ಕ್ವಾಡ್ ಕೋರ್ ಪ್ರೊಸೆಸರ್
2.4 ಇಂಚು ಇರುವ ಡಿಸ್‍ಪ್ಲೇ ಸ್ಕ್ರೀನ್
1750 ಎಂಎಎಚ್ ಬ್ಯಾಟರಿ
ವಿಜಿಎ ಕ್ಯಾಮೆರಾ
4ಜಿಬಿ ಆರ್‍ಒಎಂ(32 ಜಿಬಿವರೆಗೆ ವಿಸ್ತರಣೆಗೆ ಅವಕಾಶ)
512 ಎಂಬಿ RAM
ವೈರ್‍ಲೆಸ್ ಎಫ್‍ಎಂ
ಬ್ಲೂಟೂತ್ ಸಂಪರ್ಕ

ಇತ್ತೀಚೆಗೆ ಬಿಡುಗಡೆಯಾದ ಸೈಬರ್ ಮೀಡಿಯಾ ರೀಸರ್ಚ್ ವರದಿ ಪ್ರಕಾರ ಲಾವ ಇಂಟರ್‍ನ್ಯಾಷನಲ್ ಅತಿ ದೊಡ್ಡ ಭಾರತೀಯ ಮೊಬೈಲ್ ಹ್ಯಾಂಡ್‍ಸೆಟ್ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಫೀಚರ್ ಫೋನ್ ವರ್ಗದ ಭಾರತೀಯ ಮಾರುಕಟ್ಟೆಯಲ್ಲಿ ಲಾವ ಇಂಟರ್‍ನ್ಯಾಷನಲ್‍ನ ಬ್ರಾಂಡ್ ಶೇ.12.3 ರಷ್ಟು ಪಾಲನ್ನು ಹೊಂದಿದೆ.

ಮುಂದಿನ ಕೆಲವೇ ವಾರಗಳಲ್ಲಿ ಈ ಲಾವ 4ಜಿ ಕನೆಕ್ಟ್ ಎಂ1 ದೇಶದ ಎಲ್ಲಾ ರಿಟೇಲ್ ಮಳಿಗೆಗಳು ಮತ್ತು ಮಲ್ಟಿಬ್ರಾಂಡ್ ಔಟ್‍ಲೆಟ್‍ಗಳಲ್ಲಿ ಲಭ್ಯವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Lava 4G Connect M1 feature phone with 4G VoLTE support launched with price of Rs 3,3333.
Please Wait while comments are loading...