ಕಪ್ಪು ಹಣ ಘೋಷಣೆಗೂ ಅವಕಾಶ, ಮಾಹಿತಿ ಗೌಪ್ಯವಾಗಿರುತ್ತೆ

Written By:
Subscribe to Oneindia Kannada

ಬೆಂಗಳೂರು, ಆಗಸ್ಟ್, 01: ತೆರಿಗೆ ಪಾವತಿದಾರರಿಗೆ ನೆರವಾಗಲು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆದಾಯ ತೆರಿಗೆ ಇಲಾಖೆ ತೆರೆದಿರುವ ವಿಶೇಷ ಕೌಂಟರ್ ಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಇದ್ದ ಕಾರಣ ಕೌಂಟರ್ ಗಳ ಸೌಲಭ್ಯವನ್ನು ಸೋಮವಾರ (ಆಗಸ್ಟ್ 1) ಕ್ಕೂ ವಿಸ್ತರಣೆ ಮಾಡಲಾಗಿದೆ.

ನಂತರ ಕಚೇರಿಗೆ ತೆರಳಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಆದಾಯ ತೆರಿಗೆ ಪಾವತಿ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ 80 ವಿಶೇಷ ಕೌ೦ಟರ್ ತೆರೆಯಲಾಗಿದ್ದು ನಾಗರಿಕರು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಆನ್ ಲೈನ್ ಮೂಲಕವೂ ತೆರಿಗೆ ಪಾವತಿ ಮಾಡಲು ಆಗಸ್ಟ್ 5 ರ ತನಕ ಅವಕಾಶ ನೀಡಲಾಗಿದೆ.[ಐಟಿ ರಿಟರ್ನ್ಸ್ ಕೊನೆ ದಿನಾಂಕ ಮತ್ತೆ ವಿಸ್ತರಣೆ]

tax

ಹೆಚ್ಚಿನ ಆಸ್ತಿ ಮಾಹಿತಿಯನ್ನು ಸಲ್ಲಿಕೆ ಮಾಡಬಹುದು
ಕಪ್ಪು ಹಣ ಹೊಂದಿದ್ದರೆ ಅಥವಾ ಯಾವುದೋ ಆಸ್ತಿಯ ಮಾಹಿತಿ ಮರೆತು ಹೋಗಿದ್ದರೆ ಅದನ್ನು ಇಲಾಖೆಗೆ ತಿಳಿಸಬಹುದು. ನೀವು ನೀಡುವ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುತ್ತದೆ.[ತೆರಿಗೆ ಟೋಪಿ ತಪ್ಪಿಸಲು ಇಲಾಖೆ ಮಾಸ್ಟರ್ ಪ್ಲ್ಯಾನ್]

ಸುಲಲಿತವಾಗಿ ಸಮಗ್ರ ಮಾಹಿತಿ ನೀಡಲು ಹೆಲ್ಪ್ ಡೆಸ್ಕ್ ಗಳನ್ನು ತೆರೆಯಲಾಗಿದ್ದು ತೆರಿಗೆ ಪಾವತಿ ಮಾಡಿ ಮುಗಿಸಿ ದಂಡದಿಂದ ತಪ್ಪಿಸಿಕೊಳ್ಳಬಹುದು. ಕೌಂಟರ್ ಗಳು ಜುಲೈ 29 ರಿಂದ 31 ರವರೆಗೆ ಮೂರು ದಿನ ಕಾಲ ಬೆಳಗ್ಗೆ 9.30 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತವೆ ಎಂದು ಹೇಳಲಾಗಿತ್ತು. ಇದೀಗ ಒಂದು ದಿನ ವಿಸ್ತರಣೆ ಮಾಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The government today extended the last day for filing tax returns to Aug 5. The earlier date for filing tax returns was July 31. The earlier date for filing tax returns was July 31. The Income Tax Department is setting up special counters at Gayathri Vihar, Palace Grounds, Bengaluru.The counters will service till 1 August, evening 5.30pm.
Please Wait while comments are loading...