ಎಲ್ ಅಂಡ್ ಟಿಯಲ್ಲಿ 14 ಸಾವಿರ ನೌಕರರು ವಜಾಗೊಂಡಿದ್ದೇಕೆ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 23: ಇಂಜಿನಿಯರಿಂಗ್ ಕ್ಷೇತ್ರದ ದೊಡ್ಡ ಸಂಸ್ಥೆ ಲಾರ್ಸನ್ ಅಂಡ್ ಟೂಬ್ರೊ ತನ್ನ ಕಂಪನಿಯ 14 ಸಾವಿರ ನೌಕರರನ್ನು ಕೆಲಸದಿಂದ ಹೊರ ಹಾಕಿದೆ. ಈ ಬೃಹತ್ ಉದ್ಯೋಗ ಕಡಿತಕ್ಕೆ ಹಣಕಾಸು ಸಮಸ್ಯೆ ಕಾರಣ ಎಂದು ತಿಳಿದು ಬಂದಿದೆ.

ಏಪ್ರಿಲ್ ಮತ್ತು ಸೆಪ್ಟೆಂಬರ್ ತಿಂಗಳುಗಳ ಅವಧಿಯಲ್ಲಿ ಈ ಕ್ರಮ ತೆಗೆದುಕೊಳ್ಳುವುದು ಅವಶ್ಯಕವಾಗಿತ್ತು, ಕಂಪನಿಯನ್ನು ಉತ್ತಮ ಗಾತ್ರ ಹಾಗೂ ಅಭಿವೃದ್ಧಿಗೊಳಿಸಲು ಈ ಕ್ರಮದ ಅಗತ್ಯವಿತ್ತು ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಆರ್ ಶಂಕರ್ ರಾಮನ್ ಹೇಳಿದ್ದಾರೆ.

L&T lays off 14,000 employees during Apr-Sept

ಎಲ್ ಅಂಡ್ ಟಿ ಕಂಪನಿ ವಿವಿಧ ವಲಯಗಳಲ್ಲಿ ಒಟ್ಟು 1.2 ಲಕ್ಷ ನೌಕರರನ್ನು ಹೊಂದಿದೆ. 2017ರ ಆರ್ಥಿಕ ವರ್ಷವನ್ನು ಗಮನದಲ್ಲಿಟ್ಟುಕೊಂಡು ಈ ವರ್ಷದ ಏಪ್ರಿಲ್ ತಿಂಗಳಿಂದ ಸೆಪ್ಟಂಬರ್ ವರೆಗೆ 14 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ.

ಎಲ್ ಅಂಡ್ ಟಿ ಸಂಸ್ಥೆಯ ವ್ಯವಹಾರವು ಕಳೆದ ವರ್ಷ ಶೇ.8.6ರಷ್ಟು ಹೆಚ್ಚಳವಾಗಿ 46,885 ಕೋಟಿ ರೂಪಾಯಿ ತಲುಪಿತ್ತು. ಅದರ ಲಾಭವು 1,197 ಕೋಟಿಯಿಂದ 2,044 ಕೋಟಿ ರೂ.ಗೆ ಹೆಚ್ಚಾಯಿತು. ಆದರೆ, ಮುಂದಿನ 5 ವರ್ಷಗಳಲ್ಲಿ ಸಂಸ್ಥೆ ತನ್ನ ವ್ಯವಹಾರವನ್ನು 2 ಲಕ್ಷ ಕೋಟಿಗೆ ಹೆಚ್ಚಿಸಿಕೊಳ್ಳುವ ಗುರಿಯನ್ನು ಇಟ್ಟುಕೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Faced with economic challenges, engineering major Larsen & Toubro (L&T) has laid off 14,000 employees across businesses during April-September period this year, saying it was necessary to stay "agile and competitive".
Please Wait while comments are loading...