• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿಯವರ ಆ್ಯಪ್ ಚಾಲೆಂಜ್‌ನಲ್ಲಿ ಆಯ್ಕೆಯಾದ ಕೂ ಆ್ಯಪ್

|
Google Oneindia Kannada News

ಆಗಸ್ಟ್‌ 08, 2020: ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ್ ಆ್ಯಪ್ ಚಾಲೆಂಜ್‌ನ ಅಂತಿಮ ಸ್ಪರ್ಧೆಯಲ್ಲಿ ಕೂ ಆ್ಯಪ್ ಆಯ್ಕೆಯಾಗಿದೆ. ಭಾರತದಲ್ಲಿ ಸ್ಟಾರ್ಟ್‌ ಅಪ್‌ಗಳು ಮತ್ತು ಉದ್ಯಮಿಗಳಲ್ಲಿ ಡಿಜಿಟಲ್ ಆವಿಷ್ಕಾರವನ್ನು ಬೆಳೆಸಲು ಪ್ರಧಾನಮಂತ್ರಿಯವರ ಆತ್ಮನಿರ್ಭರ್ ಆ್ಯಪ್ ಚಾಲೆಂಜ್ ಅನ್ನು ಭಾರತಕ್ಕೆ ಅಗತ್ಯವಿರುವ 8 ಡಿಜಿಟಲ್ ವಿಭಾಗದಲ್ಲಿ ಆಯೋಜಿಸಿತ್ತು.

ಭಾರತದಾದ್ಯಂತ 6900 ಕ್ಕೂ ಹೆಚ್ಚು ನೋಂದಣಿಗಳು ಬಂದಿದ್ದು, ಈಗ ಕೂ ಆ್ಯಪ್ ವಿಜೇತರಲ್ಲಿ ಒಂದಾಗಿದೆ. ಕೂ ಆ್ಯಪ್ ಸಾಮಾಜಿಕ ಆ್ಯಪ್ಲಿಕೇಶನ್ ವಿಭಾಗದಲ್ಲಿ ಫೈನಲಿಸ್ಟ್ ಆಗಿದೆ.

ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?ಕನ್ನಡಿಗರಿಂದ ಎಲ್ಲರಿಗಾಗಿ 'Koo App', ಏನಿದರ ವಿಶೇಷ?

ಆತ್ಮನಿರ್ಭರ್ ಆ್ಯಪ್ ಚಾಲೆಂಜ್‌ನಲ್ಲಿ ಗೆಲುವು

ಆತ್ಮನಿರ್ಭರ್ ಆ್ಯಪ್ ಚಾಲೆಂಜ್‌ನಲ್ಲಿ ಗೆಲುವು

ಕೂ ಸಹ-ಸಂಸ್ಥಾಪಕ ಮತ್ತು ಸಿಇಒ ಅಪ್ರಮೇಯ ರಾಧಾಕೃಷ್ಣ ಅವರು "ಆತ್ಮ ನಿರ್ಭರ್ ಆ್ಯಪ್ ಚಾಲೆಂಜ್ ವಿಜೇತರಲ್ಲಿ ಒಬ್ಬರಾಗುವ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೇವೆ. ಪಿಎಂ ಮೋದಿ ಅವರು ಸ್ಟಾರ್ಟ್‌ಅಪ್‌ಗಳು, ನಾವೀನ್ಯಕಾರರು ಮತ್ತು ಉದ್ಯಮಿಗಳಿಗೆ ಅವರ ಹೊಸ ಸೃಷ್ಟಿಯನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ನೀಡುತ್ತಿದ್ದಾರೆ ಮತ್ತು ಈ ಅವಕಾಶಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ. ಕೂ ಅವರನ್ನು ತಮ್ಮ ಮಾತೃಭಾಷೆಯಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸಲು ಬಯಸುವ ವಿಶಾಲ ಭಾರತಕ್ಕೆ ಕರೆದೊಯ್ಯಲು ನಾವು ಎದುರು ನೋಡುತ್ತಿದ್ದೇವೆ. " ಎಂದಿದ್ದಾರೆ.

ಕೂ ಸಂಸ್ಥಾಪಕ ಮಾಯಾಂಕ್ ಬಿಡಾವತ್ಕಾ ಅವರು, "ಆತ್ಮಾನಿರ್ಭರ್ ಆ್ಯಪ್ ಚಾಲೆಂಜ್ ಸ್ವೀಕರಿಸಿದ 6940 ನೋಂದಣಿಗಳಲ್ಲಿ ಆಯ್ಕೆ ಮಾಡಲಾದ ಅಪ್ಲಿಕೇಶನ್‌ಗಳ ವಿಜೇತ ಪಟ್ಟಿಯಲ್ಲಿ ಭಾಗವಾಗಲು ನಮಗೆ ಗೌರವವಿದೆ. ಉತ್ತಮ ಭಾರತಕ್ಕಾಗಿ ನಮ್ಮ ಸರ್ಕಾರವು ತಂತ್ರಜ್ಞಾನದ ಆವಿಷ್ಕಾರಕ್ಕೆ ಒತ್ತು ನೀಡುತ್ತಿರುವುದನ್ನು ನಾವು ಗೌರವಿಸುತ್ತೇವೆ ಮತ್ತು ಪ್ರಶಂಸಿಸುತ್ತೇವೆ. ನಮ್ಮ ತಂಡ ಮತ್ತು ನಮ್ಮನ್ನು ಬೆಂಬಲಿಸಿದವರನ್ನು ಗುರುತಿಸಲ್ಪಟ್ಟಿದ್ದು ಹೆಮ್ಮೆಯ ಕ್ಷಣವಾಗಿದೆ. ಕೂ ಮೂಲಕ ಒಂದು ಶತಕೋಟಿ ಭಾರತೀಯರಿಗೆ ಧ್ವನಿ ನೀಡಲು ನಾವು ಎದುರು ನೋಡುತ್ತಿದ್ದೇವೆ! " ಎಂದಿದ್ದಾರೆ.

ಕನ್ನಡಿಗರೇ ರಚಿಸಿರುವ ಕನ್ನಡದ ಆ್ಯಪ್

ಕನ್ನಡಿಗರೇ ರಚಿಸಿರುವ ಕನ್ನಡದ ಆ್ಯಪ್

ಸ್ವದೇಶಿ, ಕನ್ನಡಿಗರೇ ರಚಿಸಿದಂತ ಆ್ಯಪ್ ಇದಾಗಿದೆ. ಈಗಾಗಲೇ ಇದನ್ನು 3 ಲಕ್ಷಕ್ಕೂ ಅಧಿಕ ಜನರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಮಾತೃಭಾಷೆಯಲ್ಲೇ ಬಳಕೆ ಮಾಡುವ ಸಲುವಾಗಿ ಟ್ವಿಟ್ಟರ್ ಗೆ ಸರಿ ಸಮಾನವಾದಂತ ಆ್ಯಪ್ ಅಭಿವೃದ್ಧಿ ಪಡಿಸಿದ್ದಾರೆ.

 ಕೂ ಭಾರತದ ಮೈಕ್ರೋ-ಬ್ಲಾಗಿಂಗ್ ವೇದಿಕೆ

ಕೂ ಭಾರತದ ಮೈಕ್ರೋ-ಬ್ಲಾಗಿಂಗ್ ವೇದಿಕೆ

ಕೂ ಭಾರತೀಯ ಭಾಷೆಗಳಲ್ಲಿನ ಭಾರತದ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿದೆ. ಕೂ ಅನ್ನು ಮಾರ್ಚ್ 2020 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಈಗ ಹಿಂದಿ, ಕನ್ನಡ, ತಮಿಳು ಮತ್ತು ತೆಲುಗು ಸೇರಿ ಒಟ್ಟು 4 ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಭಾರತದಲ್ಲಿ ಕೇವಲ ಶೇಕಡಾ 10ರಷ್ಟು ಜನರು ಇಂಗ್ಲಿಷ್ ಅನ್ನು ಅರ್ಥಮಾಡಿಕೊಳ್ಳುತ್ತಾರೆ. ಉಳಿದವರು 100ಕ್ಕೂ ಹೆಚ್ಚು ಭಾರತೀಯ ಭಾಷೆಗಳನ್ನು ಮಾತನಾಡುತ್ತಾರೆ. ಹಾಗೂ ಅವರಿಗೆ ಮನದಾಳವನ್ನು ವ್ಯಕ್ತಪಡಿಸಲು ಭಾರತೀಯ ಭಾಷಾ ಸ್ನೇಹಿ ವೇದಿಕೆ ಇಲ್ಲ. ಕೂ ಎಂಬುದು ಮೈಕ್ರೋ ಬ್ಲಾಗ್ ಆಗಿದ್ದು, ಭಾರತೀಯರು ತಮ್ಮ ಮಾತೃಭಾಷೆಯಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ಪ್ರಮುಖ ಸೆಲೆಬ್ರಿಟಿಗಳಿಗೂ ಇದನ್ನು ಬಳಸುತ್ತಿದ್ದಾರೆ

ಪ್ರಮುಖ ಸೆಲೆಬ್ರಿಟಿಗಳಿಗೂ ಇದನ್ನು ಬಳಸುತ್ತಿದ್ದಾರೆ

ಕೂ ಭಾರತದ ಕೆಲವು ಪ್ರಮುಖ ವ್ಯಕ್ತಿಗಳನ್ನು ಸಹ ಆಹ್ವಾನಿಸುತ್ತದೆ. ಇದರಿಂದ ಬಳಕೆದಾರರು ಅವರನ್ನು ಮತ್ತು ಅವರ ಆಲೋಚನೆಗಳನ್ನು ಅನುಸರಿಸಬಹುದು. ಕೂ ಆ್ಯಪನ್ನು ಕೇವಲ 5 ತಿಂಗಳ ಹಿಂದೆ ಪ್ರಾರಂಭಿಸಲಾಯಿತು. ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಶ್ರೀ ಸದ್ಗುರು, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ಡಾ. ಅಶ್ವತ್ ನಾರಾಯಣ್ (ಕರ್ನಾಟಕದ ಉಪಮುಖ್ಯಮಂತ್ರಿ), ಕರ್ನಾಟಕದ ಉಪ ಆಯುಕ್ತರು, ಸಂಸದ ತೇಜಸ್ವಿ ಸೂರ್ಯ, ಅಶುತೋಷ್ ರಾಣಾ, ಆಶಿಶ್ ವಿದ್ಯಾರ್ಥಿ ಮತ್ತು ಇತರ ಅನೇಕ ರಾಜಕಾರಣಿಗಳು, ಐಎಎಸ್ ಅಧಿಕಾರಿಗಳು, ನಟರು, ನಟಿಯರು ಮತ್ತು ಕ್ರೀಡಾ ವ್ಯಕ್ತಿಗಳು ತಮ್ಮ ಅನುಯಾಯಿಗಳೊಂದಿಗೆ ಸಂಪರ್ಕದಲ್ಲಿರಲು ಇದನ್ನು ಬಳಸುತ್ತಾರೆ.

ಕೂ ಆ್ಯಪ್‌ನಿಂದ ಏನು ಪ್ರಯೋಜನ?

ಕೂ ಆ್ಯಪ್‌ನಿಂದ ಏನು ಪ್ರಯೋಜನ?

ಪಠ್ಯ, ಆಡಿಯೋ ಮತ್ತು ವೀಡಿಯೋ ಬಳಸಿ ಬಳಕೆದಾರರು ತಮ್ಮ ಮನದಾಳವನ್ನು ವ್ಯಕ್ತಪಡಿಸಬಹುದು. ತಮ್ಮ ಆಲೋಚನೆಯನ್ನು ಪಠ್ಯದ 400 ಅಕ್ಷರಗಳಲ್ಲಿ ಅಥವಾ 1 ನಿಮಿಷದ ಸಣ್ಣ ಆಡಿಯೋ ಅಥವಾ ವೀಡಿಯೊ ಕೂಗಳನ್ನು ಮಾಡಬಹುದು. ಕೂ ಆ್ಯಪ್‌ನ ಕೆಲವು ವೈಶಿಷ್ಟ್ಯಗಳಿಂತಿವೆ, ಜನರು ಫೀಡ್, 1-1 ಸಂದೇಶ ಕಳುಹಿಸುವಿಕೆ, ಇಂಗ್ಲಿಷ್‌ನಿಂದ ಭಾಷಾ ಕೀಬೋರ್ಡ್, ಭಾಷಾ ಸುದ್ದಿ ಫೀಡ್‌ಗಳು ಮತ್ತು ಹೈಪರ್ ಲೋಕಲ್ ಹ್ಯಾಶ್ ಟ್ಯಾಗ್‌ಗಳನ್ನು ಒಳಗೊಂಡಿವೆ. ಮುಂದಿನ ತಿಂಗಳುಗಳಲ್ಲಿ ಕೂ ವೇದಿಕೆಯಲ್ಲಿ ಇತರ ಭಾಷೆಗಳು ಶೀಘ್ರದಲ್ಲೇ ಪ್ರಾರಂಭವಾಗುತ್ತದೆ.

English summary
Koo App Won the Atmanirbhar App Challenge initiated by PM Modi under the social category. Details here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X